• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಜಲಿಂಗಪ್ಪ ನವರ ದೇಹಸ್ಥಿತಿ ಮತ್ತೆ ಗಂಭೀರ

By Super
|

ಬೆಂಗಳೂರು : ಚಿತ್ರದುರ್ಗದಲ್ಲಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ದೇಹಸ್ಥಿತಿ ಮತ್ತೆ ಹದ-ಗೆ-ಟ್ಟಿ-ದ್ದು, ಚಿಕಿತ್ಸೆಗೆ ಅವರ -ಶ-ರೀ-ರ ಪ್ರತಿಕ್ರಿ-ಯಿ-ಸು-ತ್ತಿಲ್ಲ ಎಂದು ಕುಟುಂ-ಬ-ದ ಮೂಲ-ಗ-ಳು ತಿಳಿ-ಸಿ-ವೆ.

ನಿಜಲಿಂಗಪ್ಪನವರ ಅಳಿಯ ಹಾಗೂ ಕಾಂಗ್ರೆಸ್‌ ಮುಖಂಡ ಎಂ.ವಿ. ರಾಜಶೇಖರನ್‌ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ದುರ್ಗದ ತಮ್ಮ ಮನೆಯಲ್ಲಿ ಬಿದ್ದು, ಕೀಲುನೋವು ಬಾಧಿಸಿದ ಕಾರಣ ಅವರನ್ನು ಜುಲೈ 17ನೇ ತಾರೀಖು ನಗರದ ಬೌರಿಂಗ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಹತ್ತು ಹನ್ನೆರಡು ದಿನಗಳ ಚಿಕಿತ್ಸೆಯ ನಂತರವೂ ಅವರ ದೇಹಸ್ಥಿತಿ ಸುಧಾರಿಸಲಿಲ್ಲ. ಚಿತ್ರದುರ್ಗಕ್ಕೆ ಕರೆದೊಯ್ಯುವಂತೆ ತೀವ್ರವಾಗಿ ಅವರು ಒತ್ತಾಯಿಸಿದ ಕಾರಣ , ಆರೋ-ಗ್ಯ ವಿಷಮ ಸ್ಥಿತಿಯಲ್ಲಿದ್ದರೂ ಅಲ್ಲಿಗೆ ಅವರನ್ನು ಕರೆದೊಯ್ಯಲಾಯಿತು.

ಚಿತ್ರದುರ್ಗದಲ್ಲಿ ಅವರ ದೇಹಸ್ಥಿತಿ ಸುಧಾರಿಸಿತ್ತು. ಅವರಿಗೆ ಚಿಕಿತ್ಸೆ ನೀಡುತ್ತಿರುವ ಬೌರಿಂಗ್‌ ಹಾಗೂ ಜಯದೇವ ಆಸ್ಪತ್ರೆಯ ವೈದ್ಯರು ನಾಲ್ಕು ದಿನಗಳ ಹಿಂದೆ ಕೃತಕ ಆಮ್ಲಜನಕ ಕೊಡುವುದನ್ನು 15 ನಿಮಿಷಗಳ ಕಾಲ ನಿಲ್ಲಿಸಿದ್ದರು. ಗಾಲಿ ಖುರ್ಚಿಯಲ್ಲಿ ತಾವೇ ಓಡಾಡಲೂ ಅವರು ಪ್ರಯತ್ನಿಸಿದ್ದರು. ಭಾನುವಾರ ಮತ್ತೆ ಅವರ ದೇಹಸ್ಥಿತಿ ಗಂಭೀರವಾಯಿತು. ರಕ್ತದಲ್ಲಿ ಯೂರಿಯಾ ಪ್ರಮಾಣ ಕಡಿಮೆಯಾಗಿದ್ದು, ಕಿಡ್ನಿಗೆ ತೊಂದರೆಯಾಗಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿರುವುದಾಗಿ ರಾಜಶೇಖರನ್‌ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nijalingappas health condition is critical again

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more