ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ ಟೈಫಾಯ್ಡ್‌

By Super
|
Google Oneindia Kannada News

ಚಿಕ್ಕಮಗಳೂರು : ನಗರದಲ್ಲಿ 108 ಟೈಫಾ-ಯ್ಡ್‌ ಪ್ರಕರಣಗಳು ದಾಖಲಾಗಿ-ದ್ದು, ಈ ನಿಟ್ಟಿನಲ್ಲಿ ಕಾಯಿಲೆ ನಿಯಂತ್ರಣದತ್ತ ಹೆಚ್ಚಿನ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಕೆ.ಹೆಚ್‌. ಗೋಪಾಲಕೃಷ್ಣ ಗೌಡ ನಗರಸಭೆಗೆ ಸೂಚಿಸಿದ್ದಾರೆ.

ಜಿಲ್ಲೆಯ ತಾಂತ್ರಿಕ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡುವಂತೆ ಜಿಲ್ಲಾ ಆರೋಗ್ಯ ಇಲಾಖೆಗೂ ಸೂಚಿಸಲಾಗಿದೆ. ರೋಗ ಪೀಡಿತ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಲು ಅಗತ್ಯವಾದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುವುದು ಎಂದು ಗೋಪಾಲಕೃಷ್ಣ ಗೌಡ ಹೇಳಿದ್ದಾರೆ. ನಗರದಲ್ಲಿ ಶುದ್ಧವಾದ ಕುಡಿಯುವ ನೀರು ಒದಗಿಸಲು ಮತ್ತು ರಸ್ತೆ ಬದಿಯಲ್ಲಿ ಮಾರುವ ತಿಂಡಿ ತಿನಿಸುಗಳ ಶುಚಿತ್ವ ಕಾಪಾಡ-ಲು ಗಮ-ನ ನೀಡು-ವಂ-ತೆ ಜಿ-ಲ್ಲಾ-ಧಿ-ಕಾ-ರಿ ನಗ-ರ-ಸ-ಭೆ-ಗೆ ಸೂಚಿ-ಸಿ-ದ್ದಾ-ರೆ.

ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ 38 ಮಲೇರಿಯಾ ಪ್ರಕರಣಗಳು ಸಹ ದಾಖಲಾಗಿವೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಆದರೆ ಯಗಟಿಯ ಭೈರಗೊಂಡನಹಳ್ಳಿ ಮತ್ತು ಅಕ್ಕ ಪಕ್ಕದ ಪ್ರದೇಶದಲ್ಲಿ ರೋಗ ಹಬ್ಬುತ್ತಿರುವ ಬಗ್ಗೆ ಸಮೀಕ್ಷೆ ಕಾರ್ಯವನ್ನು ಮುಂದುವರೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

English summary
Typhoid in chikkamagalur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X