ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾಶಿವನಗರ ಬೆಂಗಳೂರು ಒಡೆಯನಿಲ್ಲದ ಮನೆಯಾಳಗೆ

By Super
|
Google Oneindia Kannada News

ಬೆಂಗ-ಳೂ-ರು : ರಾಜ್‌ ಅಪ-ಹ-ರ-ಣ-ದ ಕುರಿ-ತು ಕಿಂಚಿ-ತ್ತೂ ಅರಿ-ವಿ-ಲ್ಲ-ದ ಮನು-ಷ್ಯ ರಾಜ್‌ ಮನೆ-ಯ-ನ್ನು ಹಾದು ಹೋದ-ರೆ ಅವ-ನಿ-ಗೆ ಅಂಥ ವೈ-ಚಿ-ತ್ರ-ವೇ-ನೂ ಕಂಡು-ಬ-ರ-ಲಿ-ಕ್ಕಿ-ಲ್ಲ . ಮನೆ ಮುಂದೆ ನಿಂತಿ-ರು-ವ ಒಂದ-ಷ್ಟು ಕಾರು-ಗ-ಳು, ಪೊಲೀ-ಸ್‌ ಪಡೆ, ಅಭಿ-ಮಾ-ನಿ-ಗ-ಳು ಆ ಬಡಾವ-ಣೆ-ಯ ನಿವಾ-ಸಿ-ಗ-ಳಿ-ಗೆ ಹೊಸ-ದೇ-ನ-ಲ್ಲ . ಹದಿ-ನೆಂ-ಟ-ನೇ ಕ್ರಾಸ್‌-ನ-ಲ್ಲಿ-ರು-ವ ಆ ಮನೆ-ಯ ಮುಂದೆ ಇದೆ-ಲ್ಲ ಯಾವ-ತ್ತೂ ಇದ್ದ-ದ್ದೇ.

ಆದ-ರೆ, ಮನೆಯಾಳ-ಗೆ ? ಅದೇ ಸಂಭ್ರ-ಮ-ವಿ-ಲ್ಲ . ಅದೇ ನಗೆ-ಯಿ-ಲ್ಲ . ಅದೇ ಭರ-ವ-ಸೆ-ಯಿ-ಲ್ಲ ಎಂದು ಖ-ಡಾ-ಖಂ-ಡಿ-ತ-ವಾ-ಗಿ ಹೇಳು-ವು-ದೂ ಸಾಧ್ಯ-ವಿ-ಲ್ಲ . ನಿನ್ನೆ ತಾನೇ ವೀರ-ಪ್ಪ-ನ್‌ ತಾಣದ- -ಲ್ಲಿ-ರು-ವ ರಾಜ್‌-ಕು-ಮಾ-ರ್‌ ಆಡಿ-ದ ಮಾತು-ಗ-ಳ ಕ್ಯಾಸೆ-ಟ್‌ ಅವ-ರ ಮನೆ ತಲು-ಪಿ-ದೆ. ಅವ-ರ ಧ್ವನಿ ನಾಲ್ಕು ದಿನ-ಗ-ಳ ನಂತ-ರ ಆ ಮನೆ-ಯಾ-ಳ-ಗೆ ಅನು-ರ-ಣಿ-ಸಿ-ದೆ. ಪಾರ್ವ-ತ-ಮ್ಮ ಅವ-ರ ಮುಖ-ದ-ಲ್ಲೊಂ-ದು ಕಿರು-ನ-ಗೆ ಮಿನು-ಗಿ-ದೆ. ಕೊನೆ-ಯ ಮಗ ಪುನೀ-ತ್‌ ಆತ್ಮ- ವಿ-ಶ್ವಾ-ಸ-ದಿಂ-ದ ನಡೆ-ದಾ-ಡು-ತ್ತಿ-ದ್ದಾ-ನೆ. ಸೊರ-ಗಿ ಸುಣ್ಣ-ವಾ-ಗಿ-ದ್ದ ರಾಘು, ಬಂದ-ವ-ರ-ನ್ನು ಗುರು-ತಿ-ಸು-ವ ಹಂತ-ಕ್ಕೆ ಬಂದಿ-ದ್ದಾ-ನೆ.

ಇನ್ನೊಂ-ದು ಕಡೆ ಸದಾ ರಾಜ್‌ ಜೊತೆ ತಮ್ಮ-ನ್ನೂ ಗು-ರು-ತಿ-ಸಿ-ಕೊಂ-ಡ ಒಂದ-ಷ್ಟು ಮಂದಿ ಹೊರ-ಜ-ಗ-ಲಿ-ಯ-ಲ್ಲಿ ಕುಳಿ-ತು, ತಮ್ಮ ತಮ್ಮ ಊಹೆ-ಗ-ಳ-ಲ್ಲಿ ರಾಜ್‌ ಮರ-ಳು-ವಿಕೆ-ಯ ಕನ-ಸು ಕಾ-ಣು-ತ್ತಿ-ದ್ದಾ-ರೆ. ಅವ-ರ ತೊ-ಳ-ಲಾ-ಟ ಮತ್ತು ದಿಗ್ಭ್ರಮೆ-ಗ-ಳ-ನ್ನು ಗು-ರು-ತಿ-ಸು-ವು-ದು ಕಷ್ಟ-ವೇ-ನ-ಲ್ಲ . ರಾಜ್‌ ಕುಟುಂ-ಬ-ಕ್ಕೆ ಅವ-ರ-ದು ಅ-ನು-ರ-ಕ್ತ ಸಂಬಂ-ಧ ಮಾತ್ರ. ಅವರ ಜೊತೆ-ಗೇ ದಕ್ಷಿ-ಣ ವಲ-ಯ -ಅ-ಭಿ-ಮಾ-ನಿ-ಗ-ಳ ಸಂಘ ಮೊದ-ಲಾ-ದ ರಾಜ್‌ ಅಭಿ-ಮಾ-ನಿ-- ಸಂಘಗ-ಳ-ವ-ರು ಅವ-ರಿ-ಗಾ-ಗಿ ಪೂಜೆ ನಡೆ-ಸಿ ಪ್ರಸಾ-ದ ತಂದು-ಕೊ-ಡು-ತ್ತಿ-ದ್ದಾ-ರೆ. ಎಲ್ಲ ಮನುಷ್ಯ ಪ್ರಯ-ತ್ನ-ಗ-ಳಾಚೆ ದೇವ-ನೊ-ಬ್ಬ-ನಿ-ದ್ದಾ-ನೆ ಎಂದೋ, ಮನು-ಷ್ಯ ಪ್ರಯ-ತ್ನ-ಕ್ಕೆ ಆ ದೇವ-ನ ಹರ-ಕೆ ಬೇಕು ಎಂದೋ ನಂಬಿ-ರು-ವ-ವ-ರಂ-ತೆ ಕಾಣು-ವ ಅವ-ರೆ-ಲ್ಲ ಈ ಅನಿ-ರೀ-ಕ್ಷಿ-ತ ಘಟ-ನೆ-ಯಿಂ-ದ ಕೊಚ್ಚಿ-ಹೋ-ಗಿ-ದ್ದಾ-ರೆ.

ಪಾರ್ವ-ತ-ಮ್ಮ ಶುಕ್ರ-ವಾ-ರ-ದ ಪೂಜೆ ಮುಗಿ-ಸು-ವ ಹೊತ್ತಿ-ಗೆ, ಹೊರ-ಗ-ಡೆ ಕಾಯು-ತ್ತಿ-ದ್ದ ಗಣ್ಯ-ರ ಮನ-ಸ್ಸಿ-ನ-ಲ್ಲಿ-ದ್ದ ಪ್ರಶ್ನೆ ಒಂದೇ.. ಅವ-ರಿ-ಗೆ -ಏನಂತ -ಸ-ಮಾ--ಧಾ-ನ ಹೇಳು-ವು-ದು. ಶಬ್ದ-ಗ-ಳೆ-ಲ್ಲ ಕೇವ-ಲ ಶಬ್ದ-ಗ-ಳಾ-ಗಿ-ಯೇ ಉಳಿ---ದು ಬಿಡು-ವ ಅನಿ-ರ್ವ-ಚ-ನೀ-ಯ ಕ್ಷಣ-ಗ-ಳ-ಲ್ಲಿ ಇದೂ ಒಂ-ದು. ಇಂಥ ಕ್ಷಣ-ಗ-ಳಲ್ಲೇ ಮಾತಿ-ನ ನಿರ-ರ್ಥ-ಕ-ತೆ-ಯ ಪರಿ-ಚ-ಯ-ವೂ ಆಗು-ತ್ತ-ದೆ.

ಅತ್ತ ಹೊರ-ಗ-ಡೆ ನಿಂತ ಕಾವ-ಲು-ಗಾ-ರ ಕಮ್‌ ಸಹಾ-ಯ-ಕ, ಮರ-ಳು-ತ್ತಿ-ರು-ವ-ವ-ರಿ-ಗೆ ದಯ-ವಿ-ಟ್ಟು ನಿಮ್ಮ ನಿಮ್ಮ ಚಪ್ಪ-ಲಿ-ಗ-ಳ-ನ್ನು ಮಾತ್ರ ಹಾಕಿ-ಕೊಂ-ಡು ಹೋಗಿ ಎಂದು ಎಚ್ಚ-ರಿ-ಕೆ ನೀಡು-ತ್ತಿ-ದ್ದಾ-ನೆ. ಬೆಳ-ಗ್ಗೆ-ಯಿಂ-ದ ಆತ-ನಿ-ಗೆ ಹೊರ-ಟು ನಿಂತ-ವ-ರಿ-ಗೆ ಅವ-ರ-ವ-ರ ಚಪ್ಪ-ಲಿ ಹುಡು-ಕಿ-ಕೊ-ಟ್ಟು ಸುಸ್ತಾ-ಗಿ-ದೆ. ಈ ನಡು-ವೆ ಗೊತ್ತಿ-ದ್ದೋ ಗೊ-ತ್ತಿ-ಲ್ಲ-ದೆ-ಯೋ ಇನ್ನಾ-ರ-ದೋ ಷೂ -ತೊ-ಟ್ಟು ಹೊರ-ಟ-ವ-ರೂ ಇ-ದ್ದಾ-ರೆ.

ಪಾರ್ವ-ತ-ಮ್ಮ ರಾಜ್‌-ಕು-ಮಾ-ರ್‌ ಪೂಜೆ ಮು-ಗಿ-ಸಿ ಬಂದು ಅತಿ-ಥಿ-ಗ-ಳ ಮುಂದೆ ಕೂರು-ತ್ತಿ-ರು-ವ ಹೊತ್ತಿ-ಗೆ ಹೊರ-ಗ-ಡೆ ಮಳೆ ಧಾರೆ-ಯಾ-ಗು-ತ್ತ-ದೆ. ಮಳೆ-ಯ ಸದ್ದು ಕಿವಿ-ಗೆ ಬೀಳು-ತ್ತಿ-ದ್ದ ಹಾಗೇ ಪಾರ್ವ-ತ-ಮ್ಮ-ನ-ವ-ರ ಮುಖ-ದ-ಲ್ಲಿ ಅಸ್ಪ-ಷ್ಟ ಭಯ-ವೊಂ-ದು ನೆರಿ-ಗೆ-ಗ-ಟ್ಟು-ತ್ತ-ದೆ. ಪುನೀ-ತ್‌ ಹೊರ-ಗೋ-ಡಿ ಬಂ-ದು ಸತ್ಯ-ಮಂ-ಗ-ಲ-ದ ದಿ-ಕ್ಕಿ-ನ-ತ್ತ ಆಕಾ-ಶ-ಕ್ಕೆ ಕಣ್ಣು ನೆಡು-ತ್ತಾ-ನೆ. ರಾಘು ಕಾಫಿ-ಯ ಕೊನೆ-ಯ ಸಿಪ್ಪು ತುಟಿ-ಗೇ-ರಿ-ಸಿ ಮತ್ತೊ-ಮ್ಮೆ ಹಳೆ-ಯ ಭಂಗಿ-ಗೆ ಮರ-ಳು-ತ್ತಾ-ರೆ. ಮಾತು ಮಳೆ-ಯಾ-ಗು-ತ್ತ-ದೆ. ಸಾಂತ್ವ-ನ ಹೊಳೆ-ಯಾ-ಗು-ತ್ತ-ದೆ.

ಒಡೆ-ಯ-ನ ಆಗ-ಮ-ನ-ಕ್ಕಾ-ಗಿ ಮನೆ ಅಂಗ-ಳ-ದ ತುಳ-ಸಿ-ಗಿ-ಡ, ಕೈತೋ-ಟ-ದೊಂ-ದು ಗುಲಾ-ಬಿ ಕಾಯು-ತ್ತಿ-ವೆ.. ಮನೆ-ಯ ಎಲ್ಲ-ರೊಂ-ದಿ-ಗೆ, ಅಭಿ-ಮಾ-ನಿ-ಗ-ಳೊಂ-ದಿ-ಗೆ, ನಾಡಿ-ನೊಂ-ದಿ-ಗೆ.

English summary
A glimpse on raj’s house in absence of raj
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X