ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂತಲ್ಲೇ ಕುಲದೇವತೆಗೆ ಈ- ಮೇಯ್ಲ್‌ನಲ್ಲಿ ಕುಂಕುಮಾರ್ಚನೆ

By Super
|
Google Oneindia Kannada News

ದೇವಸ್ಥಾನಕ್ಕೆ ಹೋಗಲು ಪುರುಸೊತ್ತಿಲ್ಲದ ಆಸ್ತಿಕರಿಗೆ ಆಧುನಿಕ ತಂತ್ರಜ್ಞಾನ ಸೃಷ್ಟಿಸಿದ ದೈವಾನುಕೂಲವಿದು

ಕಾಶಿ ವಿಶ್ವನಾಥ, ಕಂಚಿ ಕಾಮಾಕ್ಷಿ, ಮಧುರೆ ಮೀನಾಕ್ಷಿ, ತಿರುಪತಿ ತಿಮ್ಮಪ್ಪ , ಪುರಿ ಜಗನ್ನಾಥ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಧರ್ಮಸ್ಥಳದ ಮಂಜುನಾಥ ಮುಂತಾದ ದೇವಾನುದೇವತೆಗಳಿಗೆ ಮನೆಯಲ್ಲಿ ಕೂತೇ ಪೂಜೆ ಸಲ್ಲಿಸಬಹುದು, ಇಂಟರನೆಟ್‌ ಮೂಲಕ. ಇದೋ ಬಂದಿದೆ ಈ ಪ್ರಾರ್ಥನ.ಕಾಂ , ಇದರ ಮೂಲಕ ಭಾರತದ 420 ದೇವಾಲಯಗಳಿಗೆ ಪೂಜೆ ಸಲ್ಲಿಸಬಹುದು. ಗಣೇಶ, ಸುಬ್ರಹ್ಮಣ್ಯ, ಈಶ್ವರ, ಶ್ರೀಕೃಷ್ಣ , ಲಕ್ಷ್ಮಿ, ವೆಂಕಟೇಶ್ವರ, ಶಾರದೆ ಹೀಗೆ ಅಸಂಖ್ಯ ದೇವರುಗಳಿಗೆ ನಿಮ್ಮ ಪ್ರಾರ್ಥನೆ ಸಲ್ಲಿಸಬಹುದು. ಮನಿ ಆರ್ಡರ್‌ ಮಾಡುವ ತಾಪತ್ರಯ ಇಲ್ಲ. ಒಮ್ಮೆ ನಿಮ್ಮ ಕಂಪ್ಯೂಟರಿನ ಡೆಸ್ಕ್‌ಟಾಪಿಗೆ ಸೈಟಿನ ಐಕಾನನ್ನು ಡೌನ್‌ಲೋಡ್‌ ಮಾಡಿಕೊಂಡರಾಯಿತು. ನೀವು ನಿಮ್ಮ ದೇವರನ್ನು ಮಿಸ್‌ ಮಾಡಿಕೊಳ್ಳುವುದು ತಪ್ಪುತ್ತದೆ. ದೇವರ ದರ್ಶನ ಮಾಡದೆ ಪೂಜೆ ಸಲ್ಲಿಸಿ ಪ್ರಯೋಜನವೇನು ಎಂದಿರಾ? ಚಿಂತಿಸಬೇಡಿ, ಈ ಸೈಟಿನಲ್ಲಿ 2000ಕ್ಕೂ ಮಿಕ್ಕ ಫೋಟೋಗಳಿವೆ. ಗಣೇಶನದೇ 220 ಫೋಟೋಗಳಿವೆ. ಬರೇ ದೇವಾನುದೇವತೆಗಳಷ್ಟೇ ಅಲ್ಲ , ದೇವಾಲಯಗಳ ಚಿತ್ರಗಳೂ ಲಭ್ಯ. ಪಾಂಗಿತ ಪೂಜೆಮಾಡಿಸಲಾಗುತ್ತದೆ ಎಂದು ಸೈಟಿನಲ್ಲಿ ನಮೂದಿಸಿದ್ದಾರೆ.

ನಿಮಗೆ ಪದೇ ಪದೇ ಸೈಟಿಗೆ ಹೋಗಲು ಸಮಯವಿಲ್ಲದಿದ್ದರೆ, ಒಮ್ಮೆಗೇ ಚಂದಾ ಸಲ್ಲಿಸಿ, ಪರ್ಮನೆಂಟ್‌ ಭಕ್ತರಾಗಬಹುದು. ನಿಮ್ಮ ಆಯ್ಕೆಗಾಗಿ ಒಂದು ಪಟ್ಟಿಯೇ ಇದೆ,-ನಿಮ್ಮ ಹುಟ್ಟುಹಬ್ಬಕ್ಕೋ, ವೆಡ್ಡಿಂಗ್‌ ಆ್ಯನಿವರ್ಸರಿಗೋ, ನಿಮ್ಮ ಮಗು ಹುಟ್ಟುಹಬ್ಬಕ್ಕೋ, ಸಂಕಷ್ಟ ಚತುರ್ಥಿಗೋ ಅಥವಾ ಹಬ್ಬ ಹರಿದಿನಗಳಲ್ಲೋ ಪೂಜೆ ಮಾಡಿಸಬೇಕೆ, ಇಲ್ಲಿ ಟಿಕ್‌ ಮಾಡಿ ಎಂದು ಪಟ್ಟಿಯಲ್ಲಿ ನಮೂದಿಸಲಾಗಿದೆ. ಟಿಕ್‌ ಮಾಡಿ, ಕ್ಲಿಕ್‌ ಮಾಡಿದರಾಯಿತು. ನಿಮ್ಮ ಪ್ರಾರ್ಥನೆ ಹಾಗೂ ಪೂಜೆಯನ್ನು ಇಂಟರ್‌ನೆಟ್‌ನವರೇ ಸಲ್ಲಿಸುತ್ತಾರೆ. ಈ-ಮೇಯ್ಲ್‌ನ ಮೂಲಕ ಆಶೀರ್ವಾದ ಹಾಗೂ ಅಂಚೆ ಮೂಲಕ ಪ್ರಸಾದ ನಿಮಗೆ ತಲುಪುತ್ತದೆ. ಕಂಪ್ಯೂಟರ್‌ ತೆರೆಯ ಮೇಲೆ ನಿಮ್ಮ ಮನೆ ದೇವರಿಗೆ ನಮಸ್ಕರಿಸಿ ಕೃತಾರ್ಥರಾಗಬಹುದು.

ಈ ವರ್ಷದ ಏಪ್ರಿಲ್‌ 24ರಿಂದ ಇವತ್ತಿನವರೆಗೆ 10 ಸಾವಿರಕ್ಕೂ ಮಿಕ್ಕಿ ಭಕ್ತರು ಸೈಟಿನ ಸದಸ್ಯರಾಗಿದ್ದಾರೆ. ಸೌದೀ ಅರೇಬಿಯಾದ ಶ್ರೀಧರ ಶಾಸ್ತ್ರಿಗಳು ಈ ಸೇವೆಯನ್ನು ಪ್ರಶಂಸಿಸಿದ್ದಾರೆ. ಅನಿವಾಸಿ ಭಾರತೀಯರ ಮನಃಶಾಂತಿಗೆ ಇದೊಂದು ಒಳ್ಳೆ ಹೆಜ್ಜೆ ಎಂದು ಹೊಗಳಿದ್ದಾರೆ. ಪುರುಸೊತ್ತಿಲ್ಲದ ನೀವು ರಜೆ ಹಾಕಿ, ದೂರದ ಊರಿನ ದೇವರ ದರ್ಶನ ಮಾಡಿಬರುವ ವೆಚ್ಚಕ್ಕೆ ಹೋಲಿಸಿದರೆ ನೆಟ್‌ ಪೂಜೆಯ ಖರ್ಚು ಹೆಚ್ಚಲ್ಲ ಬಿಡಿ. ಕುಂತಲ್ಲೇ ಮನೆ ದೇವರ ಕಂಡು ಹೂ ಸಲ್ಲಿಸುವ ಭಾಗ್ಯ ಎಲ್ಲರಿಗೂ ಸಿಗದು. ಆ ಭಾಗ್ಯ ನಿಮ್ಮದಾಗಬೇಕಾದರೆ ಪೂಜಾರಾಧನೆಯ ಈ ಸೈಟಿಗೆ ಹೋಗಿ.

English summary
Perform pooja through internet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X