Get Updates
Get notified of breaking news, exclusive insights, and must-see stories!

ಮೇ 12, 2000

ಮೇ 12, 2000

ಉತ್ತರ ಕುತೂಹಲಕಾರಿಯಾಗಿದೆ. ಇಲ್ಲಿ ಅಮ್ಮನೆಂದರೆ ಸೃಷ್ಟಿಕರ್ತೆ ಅಲ್ಲ. ಪೊರೆಯುವವಳು. ಕೇವಲ ಪೊರೆಯುವವಳೂ ಅಲ್ಲ. ಮರ್ದಿಸುವವಳು.

ಹೌದು !

ನಮ್ಮ ಆಧುನಿಕ ಮನಸ್ಸುಗಳಿಗೆ ‘ಅಮ್ಮ’ ಸೃಷ್ಟಿಗೆ ಸಹಕಾರಿಯಾದರೆ ಪ್ರಾಚೀನ ಕಲ್ಪನೆಯ ಪ್ರಕಾರ ಆಕೆ ಸಂಹಾರಿಣಿ. ಮಹಿಷಾಸುರ ಮರ್ದಿನಿ, ಮೂಕಾಂಬಿಕೆ, ಅಂಬಿಕೆ, ಇವರೆಲ್ಲ ದುಷ್ಟ ಸಂಹಾರಕ್ಕೆ ಅವತಾರ ಎತ್ತಿರುವವರು. ಸ್ತ್ರೀ ಸೃಷ್ಟಿಗಿಂತ, ಸ್ತ್ರೀ ಶಕ್ತಿಗೇ ಪ್ರಾಧಾನ್ಯ. ಕೊಲ್ಲುವುದೇ ಆಕೆಯ ಕಾಯಕ !

ಅದುಬಿಡಿ, ನಮ್ಮ ಹಳ್ಳಿಗಳ ದೇವತೆಗಳನ್ನೇ ನೋಡಿ. ಊರು ಕಾಯುವ ಮಾರಮ್ಮ, ಅಟ್ಟಿ ಲಕ್ಕಮ್ಮ, ಕಾಳ ಮ್ಮ, ರುದ್ರಪ್ಪ, ದುರ್ಗಾಪರಮೇಶ್ವರಿ, ರಕ್ತೇಶ್ವರಿ....ಇವರೆಲ್ಲಾ ಭೂಮಿಗಿಳಿದು ಬಂದದ್ದೇ ಸಂಹಾರಕ್ಕೆ. ಅವರ ವರ್ಣನೆಯೇ ಹಾಗಿದೆ. ಮಧುಕೈಟಬಾರೇ, ಶುಂಭ ನಿಶುಂಭ ಪ್ರಾಣಹಾರಿಣಿ !

ಇಂಥ, ಕೊಂದಲ್ಲದೆ ಕಾಯಲಾರೆ ಎಂದು ನಿಂದ ದೇವಿ ಶಕ್ತಿ ಸ್ವರೂಪಿಣಿಯಾದರೆ, ಸಾಮಾಜಿಕ ಸ್ತರದಲ್ಲಿ ಹೆಣ್ಣು ಅಬಲೆ. ಸೃಷ್ಟಿಕರ್ತೆ. ‘ಜನನಿ’ ನಿಜವಾದ ಅರ್ಥದಲ್ಲಿ. ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಕ್ಕಳಿಂದ ರಕ್ಷಣೆ ಪಡೆಯಬೇಕಾದವಳು.

ಈ ಎರಡು ಕಲ್ಪನೆಗಳ ನಡುವೆ ನಾವಿದ್ದೇವೆ. " mothers day ಇದೆ. ತಾಯಂದಿರ ದಿನ ಎಂದು ಕೆಟ್ಟದಾಗಿ ಅದನ್ನು ಅನುವಾದಿಸುತ್ತಾರೆ. ‘ಅಮ್ಮನ ದಿನ ’ ಅನ್ನೋದ್ಯಾಕೆ ಸಾಧ್ಯವಾಗ್ತಿಲ್ಲ. .. ಅವ್ವ ಪದ ಪ್ರಯೋಗ ಸಾಹಿತ್ಯ, ಗ ಾ್ರಮೀಣ ಪ್ರದೇಶಕ್ಕಷ್ಟೇ ಸೀಮಿತವಾಗಿದೆಯೇ ?

ಗೊತ್ತಿಲ್ಲ. ಆದರೆ ‘ಅವ್ವ ’ ನ ಬಗೆಗೆ ಲಂಕೇಶ್‌ ಬರೆದ ಕವಿತೆಯಾಂದು ಆಕೆಯನ್ನು ನಮ್ಮ ಮನಸ್ಸಿಗೆ ನಾಟುವಂತೆ ಚಿತ್ರಸಿದೆ.

ನನ್ನವ್ವ ಫಲವತ್ತಾದ ಕಪ್ಪುನೆಲ.
ಅಲ್ಲಿ ಹಸಿರು ಚಪ್ಪರ ಹರವು, ಬಿಳಿಯ ಹೂ ಹಬ್ಬ :
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ ;

ಇದು ಇಪ್ಪತ್ತೆೈದು ವರ್ಷಗಳ ಹಿಂದಿನ ಕವಿತೆ. ಅದೇ 1989ರ ಹೊತ್ತಿಗೆ....ಅವ್ವನೆಂದರೆ ವಿನಯ ಮತ್ತು ಮೌನ ಎನ್ನುತ್ತಾರೆ ಲಂಕೇಶ್‌.

ಅವ್ವನ ಮೇಲೊಂದು ಅತ್ಯುತ್ತಮ ಕವಿತೆ ಬಂದಿದ್ದರೆ ಅದು ಇದೇ. ಅದನ್ನೋದುತ್ತಾ ‘ಮದರ್ಸ್‌ ಡೇ’ಯ ಬಗ್ಗೆ ಒಂದಷ್ಟು ಚಿಂತಿಸಿ. ಇಂಥ ಆಚರಣೆ ಹಾಗೂ ಕರುಳಿಗೆ ಮಾತ್ರ ಅರಿವಾಗುವ ಅಸ್ಪಷ್ಟ ಪ್ರೀತಿಯ ವೆತ್ಯಾಸ ನಿಮಗೆ ಹೊಳೆದೀತು.

ಅಲ್ಲಿಯ ತನಕ ತಾಯಂದಿರಿಗೆಲ್ಲ ಶುಭಾಶಯ. ಜಾನಪದದೊಂದಿಗೆ : ಹೊಳೆದಂಡೆಯಾಳಗಿನ ಕರಕೀಯ ಕುಡಿ ಹಾಂಗ ಹಬ್ಬಲಿ ನಿನ್ನ ರಸಬಳ್ಳಿ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+