ಅಜ್ಜಿ ಮನೆ ಸಿಕ್‌ತಾ...?
ಪರೀಕ್ಷೆ ಮುಗಿದು ಮಾರ್ಕ್ಸ್ ಕಾರ್ಡ್ ಕೈಗೆ ಬರುತ್ತಿದ್ದಂತೆ, ಅಜ್ಜಿ ಮನೆಗೆ ಹೋಗುವುದು ಯಾವಾಗ ಎಂದು ಲೆಕ್ಕ ಹಾಕುತ್ತಿದ್ದ ಹುಡುಗರನ್ನು ಇವತ್ತು ಸಮ್ಮರ್ ಕ್ಯಾಂಪ್‌ಗಳು ಡಿಸ್ಟರ್ಬ್ ಮಾಡುತ್ತಿವೆ.
ಬೇಸಿಗೆ. ಶಾಲೆಗೆ ಬಿಡುವು. ಯೂನಿಫಾಂ, ಬ್ಯಾಗು, ಪುಸ್ತಕಗಳಿಗೆಲ್ಲಾ ಎರಡು ತಿಂಗಳು ರೆಸ್ಟ್ ಅನ್ನೋದು ಬೆಂಗಳೂರಿನಲ್ಲಿ ಸುಳ್ಳಾಗುತ್ತಿದೆ. ಸ್ಕೂಲ್ ಯಾನಿಫಾಂಗೆ ಬಿಡುವು ಸಿಕ್ಕಿದರೂ, ಆ ಜಾಗಕ್ಕೆ ಬಿಳಿ ಉಡುಪು ಬಂದಿರುತ್ತೆ. ಯಾಕೆಂದರೆ ಸಮ್ಮರ್ ಕ್ಯಾಂಪ್‌ಗಳಲ್ಲೂ ಶಿಸ್ತು ಮುಖ್ಯ. ಒಂದು ವೇಳೆ ಸಮ್ಮರ್ ಕ್ಯಾಂಪ್‌ಗೆ ಹೋಗದಿದ್ದರೂ ಎರಡು ತಿಂಗಳ ಕಂಪ್ಯೂಟರ್ ಕೋರ್ಸ್‌ಗಾದರೂ ಮಕ್ಕಳನ್ನು ಅಪ್ಪ-ಅಮ್ಮ ಖಂಡಿತ ಕಳುಹಿಸುತ್ತಾರೆ.
ಅಜ್ಜಿ ಮನೆ ಮುಖ್ಯವೋ, ಸಮ್ಮರ್ ಕ್ಯಾಂಪ್ ಮುಖ್ಯವೋ ಎಂದು ಯಾರನ್ನಾದರೂ ಕೇಳಿದರೆ, ಮಕ್ಕಳ ಭವಿಷ್ಯ ಮುಖ್ಯ. ಅಜ್ಜಿ ಮನೆ ಎಲ್ಹೋಗುತ್ತೆ. ಈಗಿನ ಕಾಂಪಿಟಿಶನ್ ಜಗತ್ತಿನಲ್ಲಿ ಮಕ್ಕಳು ಜಗಜ್ಜಾಣರಾಗಿರಬೇಕು. ಸುಮ್ಮನೆ ಊರೂರು ಸುತ್ತುತ್ತ ರಜಾ ಹಾಳು ಮಾಡಿಕೊಳ್ಳುವ ಬದಲು ಒಂದಿಷ್ಟು ಕಂಪ್ಯೂಟರ್ ಕಲಿತರೆ ಒಳ್ಳೇದಲ್ವೆ ಎನ್ನುತ್ತಾರೆ.
ಅಜ್ಜಿ ಮನೆ, ದೊಡ್ಡಮ್ಮನ ಮನೆ, ಚಿಕ್ಕಮ್ಮನ ಮನೆ- ಹೀಗೆ ಮಕ್ಕಳು ಸುತ್ತಿ ಬಂದರೆ ಅವರ ಮನಸ್ಸು ರಿಫ್ರೆಷ್ ಆಗುತ್ತೆ. ಹೋಂವರ್ಕು, ಸ್ಪೆಷಲ್ ಕ್ಲಾಸು, ಟ್ಯೂಷನ್ನು ಇವುಗಳ ಇಡೀ ವರ್ಷದ ಜಂಜಡದಿಂದ ಹೊರಬರಲು ಮಕ್ಕಳಿಗೆ ಬದಲಾವಣೆ ಅಗತ್ಯ ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಹಿಂದೆ, ಹಬ್ಬಹರಿದಿನಗಳನ್ನು ನೆಂಟರಿಷ್ಟರೆಲ್ಲ ಒಟ್ಟಾಗಿ ಆಚರಿಸುತ್ತಿದ್ದರಿಂದ ಆ ದಿನಗಳಲ್ಲಾದರೂ ಮನಸ್ಸಿಗೆ ಛೇಂಜ್ ಸಿಗುತ್ತಿತ್ತು. ಈಗ ಬೆಂಗಳೂರಿನಂಥ ಸಿಲಿಕಾನ್ ಸಿಟಿಯ ಜನ ಪ್ರತಿ ಹಬ್ಬಕ್ಕೂ ಊರಿಗೆ ಹೋಗುವುದು ಸಾಧ್ಯವಿಲ್ಲದ ಮಾತು. ಒಂದು ದಿನ ರಜೆ ಸಿಕ್ಕಿತೆಂದರೆ, ಲೇಟಾಗಿ ಎದ್ದು, ಶ್ಯಾಂಪು ಸ್ನಾನ ಮಾಡಿ, ಹಾಸಿಗೆಯಲ್ಲಿ ಬಿದ್ದುಕೊಂಡು ರೆಸ್ಟ್ ತೆಗೆದುಕೊಳ್ಳುವುದರಲ್ಲೇ ಕಳೆದುಹೋಗುತ್ತದೆ. ಆದರೆ ಮಕ್ಕಳು, ಮಕ್ಕಳು ಹಾಗಲ್ಲ. ಅವರಿಗೆ ಛೇಂಜ್ ಬೇಕೇಬೇಕು. ಅಜ್ಜಿ ಮನೆಗೆ ಯಾವಾಗ ಹೋಗೋಣ ಅಂತ ಒಮ್ಮೆಯಾದರೂ ಅಮ್ಮನನ್ನು ಮಗು ಕೇಳುತ್ತದೆ. ಆದರೆ ಅಮ್ಮನ ಉತ್ತರ ಮಾತ್ರ ಉಡಾಫೆಯದು- ನಿನ್ನ ಸಮ್ಮರ್ ಕ್ಯಾಂಪ್ ಮುಗಿಯಲಿ, ಒಂದು ದಿನ ಬಿಡುವು ಮಾಡ್ಕೊಂಡು ಹೋಗೋಣಂತೆ.
ನಿಮಗನ್ನಿಸಬಹುದು, ಸಿಟಿಯಲ್ಲಿ ಸಿಕ್ಕದ ಅಂತಾ ವಿಶೇಷ ಹಳ್ಳಿಯಲ್ಲೇನಿದೆ ಎಂದು. ಅಜ್ಜಿ ಹೇಳುವ ಕಥೆಗಳು, ತೊಡೆ ಮೇಲೆ ಮಲಗಿಸಿ ಕಿವಿಯಲ್ಲಿನ ಗುಗ್ಗೆ ತೆಗೆಯುವುದು, ಮೈತುಂಬ ಹರಳೆಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಬೈಗುಳ ತಿಂದೇ ಕೆರೆಯಲ್ಲಿ ಈಜು ಬಾರದಿದ್ದರೂ ಕೈಕಾಲಾಡಿಸುವುದು, ಮರ ಹತ್ತಲು ಹೋಗಿ ಬಿದ್ದು ಗಾಯ ಮಾಡಿಕೊಳ್ಳುವುದು -ಈ ಎಲ್ಲ ಅನುಭವಗಳನ್ನು ಅಜ್ಜಿ ಮನೆಗೆ ಹೋಗದಿದ್ದರೆ ಮಕ್ಕಳು ಮಿಸ್ ಮಾಡಿಕೊಳ್ಳುತ್ತಾರೆ.
ಈಗ ಮತ್ತದೇ ಬೇಸಿಗೆ ಬಂದಿದೆ. ಎಷ್ಟೋ ಬೆಂಗಳೂರಿಗರಿಗೆ ಮಕ್ಕಳನ್ನು ಅಜ್ಜಿ ಮನೆಗಾಗಲೀ,ಆಂಟಿ ಮನೆಗಾಗಲೀ ಕರೆದುಕೊಂಡು ಹೋಗಲು ಪುರುಸೊತ್ತಿಲ್ಲ. ಯಾವುದೋ ನೆಂಟರು ಮನೆಗೆ ಬಂದು ಕರೆದರು ಎಂದು ಹೋದ ಮದುವೆ ರಿಸೆಪ್ಶೆನ್ನಿನಲ್ಲಿ ಇದಿರಾಗುವ ಚಿಕ್ಕಮ್ಮ, ಎಷ್ಟು ಉದ್ದ ಆಗ್ಬಿಟ್ಟಿದಾನೆ! ಎಷ್ಟನೇ ಕ್ಲಾಸು? ಎನ್ನುವಷ್ಟು ಹೊಸಬರಾಗಿಬಿಟ್ಟಿದ್ದಾರೆ.
ಒಂದು ವೇಳೆ ಅಮೆರಿಕಾದಿಂದ ಅಜ್ಜಿ ಮನೆಗೆ ಮಗು ಬಂದರೂ ಬರಬಹುದು. ಬೆಂಗಳೂರಿಗರಿಗೆ ಇದು ಕಷ್ಟ. ಆದರೂ, ಮಕ್ಕಳಿಗಿದು ಬೇಕು. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಅದರಲ್ಲಿ ನಿಮಗೆ ಅಜ್ಜಿ ಮನೆ ಕಾಣಿಸುತ್ತದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications