ಕಲ್ಬುರ್ಗಿಯಲ್ಲಿ ಕೆಟ್ಟು ನಿಂತ ಸೂರ್ಯರಥ
ಕರ್ನಾಟಕ ಒಂದು ಟ್ರಾಪಿಕಲ್ ಕಂಟ್ರಿ ಎನ್ನುವುದನ್ನೇ ಮರೆತವರನ್ನು ಬಡಿದೆಬ್ಬಿಸಿ ನೆನಪಿಸುವಂತೆ ಇದೀಗ ರಾಜ್ಯದಲ್ಲಿ ಬೇಸಿಗೆ ತನ್ನ ಆಟಾಟೋಪ ಮೆರೆಯುತ್ತಿದೆ. ಉತ್ತರ ಕರ್ನಾಟಕದ ವಿಷಯಕ್ಕೆ ಆಮೇಲೆ ಬರೋಣ, ಮಲೆನಾಡಿನ ರಾಜಧಾನಿ ಎನಿಸಿಕೊಂಡ ಶಿವಮೊಗ್ಗದಲ್ಲೇ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇದೆ . ದಕ್ಷಿಣ ಒಳನಾಡಿನ ಚಿತ್ರದುರ್ಗ, ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಉಷ್ಣಾಂಶ ಸರಿಸುಮಾರು ಅಷ್ಟೇ ಇದೆ.
ಈ ಭಾಗದ ಜನತೆಗೆ ಒಂದು ಮಾತು. ಹೀಗಾದರೆ ಏನು ಗತಿ ಎನ್ನುವ ಉದ್ಗಾರ ತೆಗೆಯುವ ಮುನ್ನ ಉತ್ತರ ದಿಕ್ಕಿನಲ್ಲಿ ಏನಾಗುತ್ತಿದೆ ಅಂತ ತಿಳಿದುಕೊಂಡು ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬೇಕು.
ಹವಾಮಾನ ಇಲಾಖೆಯ ಪ್ರಕಾರ ಉತ್ತರ ಕನಾಟಕದ ಏಳು ಭಾಗಗಳ ಪೈಕಿ ಅತ್ಯಂತ ಕಡಮೆ -ಗರಿಷ್ಠ ಉಷ್ಣಾಂಶ ದಾಖಲಾಗಿರುವುದು ಬೆಳಗಾವಿಯಲ್ಲಿ (36) ಗದಗ 39, ಬಾಗಲಕೋಟೆ 38, ರಾಯಚೂರು-ಬೀದರ್-ಬಿಜಾಪುರ ತಲಾ 40. ಇನ್ನು ಕಲ್ಬುರ್ಗಿಯಲ್ಲಿ ನೆತ್ತಿಯ ಮೇಲೆ ಹೊಡೆದಂತೆ 43.
ಕರಾವಳಿಯಲ್ಲಿ ಪರಿಸ್ಥಿತಿ ತಣ್ಣಗಿದೆ ಎಂದು ಕೊಂಡರೆ ಕೆಟ್ಟಿರಿ. ಮಂಗಳೂರು, ಹೊನ್ನಾವರ, ಕಾರವಾರ ಪ್ರದೇಶಗಳಲ್ಲಿ ಬಿಸಿ 32ರಿಂದ 35ರ ವರೆಗೆ ತುಯ್ದಾಡುತ್ತಿದೆ. ಮಳೆಯ ಸುಳಿವು ಕೂಡ ಇಲ್ಲ.
ಈ ಮಧ್ಯೆ ಚೂರುಪಾರು ಪುಣ್ಯ ಮಾಡಿದವರೆಂದರೆ ನಮ್ಮ ಮೈಸೂರು, ನಂಜನಗೂಡಿನ ಜನ. ಆ ಕಡೆ ಒಂದೆರಡು ಸೆಂ. ಮೀ. ಮಳೆ ಬಿದ್ದು ತಂಪಾಗಿದೆ. ಅಂದಹಾಗೆ ಸೋಮವಾರ ಬೆಂಗಳೂರಿನಲ್ಲಿ ರಾತ್ರಿ ಗುಡುಗು ಮಿಂಚು ಜೋರಾಗಿತ್ತು. ಇದೆಲ್ಲ ವರುಣನ ಬರಿಬಾಯಿಮಾತು ಅಂತ ಇವತ್ತು ಗೊತ್ತಾಯಿತು.
ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಳೆ ಬರಬಹುದೆಂಬ ಸೂಚನೆಗಳಿವೆ. ಈ ಭವಿಷ್ಯಗಳು ನಿಜವಾಗಲೆಂದು ಆಶಿಸುತ್ತೇವೆ.
ಮಳೆ ಯಾರ ಕೈಯಲ್ಲಿದೆ? ಎಕ್ಸ್‌ಪೆಕ್ಟ್ ಮಾಡುವುದೇ ನಾವು ಮಾಡುವ ತಪ್ಪು, ಸುಮ್ಮನೆ ಎದುರು ನೋಡುತ್ತಾ ಇರಬೇಕು.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications