ಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿ

ಝೆನ್ ಶಿಷ್ಯ ರಿನ್‌ಜೈ ತನ್ನ ಗುರುವಿನೊಂದಿಗೆ ಸುಮಾರು 20 ವರ್ಷದಿಂದ ಇದ್ದ. ಒಂದು ದಿನ ಗುರು ಆಶ್ರಮದಲ್ಲಿ ಇಲ್ಲದ ಹೊತ್ತಿನಲ್ಲಿ ರಿನ್‌ಜೈ ಏಕಾಏಕಿ ತನ್ನ ಗುರು ಕೂರುವ ಕುರ್ಚಿಯಲ್ಲಿ ಹೋಗಿ ಕುಳಿತುಬಿಟ್ಟ! ಅವನು ಹಾಗೆ ಕೂತಿರುವಾಗಲೇ ಹೊರಗಡೆ ಹೋಗಿದ್ದ ಗುರು ಒಳಗೆ ಬಂದರು. ತನ್ನ ಕುರ್ಚಿಯಲ್ಲಿ ಕುಳಿತಿದ್ದ ರಿನ್‌ಜೈನನ್ನು ನೋಡಿದರೂ ಏನನ್ನೂ ಮಾತನಾಡದೆ ಹೋಗಿ ರಿನ್‌ಜೈನ ಕುರ್ಚಿಯಲ್ಲಿ ಕುಳಿತರು. ಈ ಸಮಯದಲ್ಲಿ ರಿನ್‌ಜೈಗೆ ಏನು ಮಾಡಬೇಕೆಂದು ಗೊತ್ತಾಗದೆ ಕಸಿವಿಸಿಗೊಂಡ.

ಗುರು ಮತ್ತು ಶಿಷ್ಯನ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ, ಆದರೂ ಅವರ ಮಧ್ಯೆ ಸಂವಹನ ನಡೆದಿತ್ತು! ರಿನ್‌ಜೈ ಮನಸ್ಸಿನಲ್ಲಿಯೇ "ನನ್ನ ವರ್ತನೆಯಿಂದ ನಿಮಗೆ ನೋವಾಗಲಿಲ್ಲವೇ? ನಿಮಗೆ ಅವಮಾನ ಮಾಡಿದೆ ಎನಿಸಲಿಲ್ಲವೇ? ನಾನು ನಿಮಗೆ ಕೃತಘ್ನನೆ?" ಎಂದು ಪಶ್ಚಾತಾಪದಿಂದ ಕೇಳಿದ.

Zen Stories Rinzai And His Teachers Chair

ಅದಕ್ಕೆ ಗುರು ನಗುತ್ತಾ, "ನೀನು ನನ್ನ ಶಿಷ್ಯನ ಸ್ಥಾನದಿಂದ ಅನುಯಾಯಿಯಾದೆ, ಈಗ ಅನುಯಾಯಿಯಿಂದ ಗುರುವಾಗಿದ್ದಿ. ಈಗ ನೀನು ನನ್ನ ಕೆಲಸ ಹಂಚಿಕೊಳ್ಳುವದರಿಂದ ನನಗೆ ಸಂತೋಷವೇ ಆಗಿದೆ. ನಾನಿನ್ನು ದಿನವೂ ಬರುವ ಅವಶ್ಯಕತೆಯೇ ಇಲ್ಲ. ನನ್ನ ಕೆಲಸ ಮಾಡಲು ಯಾರೋ ಒಬ್ಬರಿದ್ದಾರೆ ಅನ್ನುವ ಸಮಾಧಾನ ನನಗೆ" ಎಂದು ಶಿಷ್ಯನನ್ನು ಸಮಾಧಾನ ಪಡಿಸಿದರು.

(ಸಂಗ್ರಹ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+