ಝೆನ್ ಕಥೆ: ಸನ್ಯಾಸಿಗೆ ಪ್ರೀತಿ ಪ್ರೇಮದ ಬಗ್ಗೆ ಹೇಗೆ ಗೊತ್ತು?

ಸುದೀರ್ಘ ಮತ್ತು ಉತ್ಸಾಹಿ ಬದುಕನ್ನು ಕಳೆದ ಒಬ್ಬ ವಯಸ್ಸಾದ ಸನ್ಯಾಸಿಯನ್ನು ಯುವತಿಯರ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾತ್ಮದ ಬೋಧಕನನ್ನಾಗಿ ನೇಮಿಸಲಾಯಿತು. ಆ ಯುವತಿಯರ ಗುಂಪಿನಲ್ಲಿ ಹೆಚ್ಚಿನ ಸಂದರ್ಭದಲ್ಲಿ ಪ್ರೀತಿ ಪ್ರೇಮವೇ ಪ್ರಮುಖ ಚರ್ಚೆಯ ವಿಷಯವಾಗಿರುತ್ತಿದ್ದು ಆತನ ಕಿವಿಗೆ ಹಲವು ಬಾರಿ ಬಿದ್ದಿತ್ತು. ಒಂದು ದಿನ ಆ ಯುವತಿಯರಿಗೆ ಎಚ್ಚರಿಕೆ ನೀಡಲು ಉದ್ದೇಶಿಸಿದ.

'ನಿಮ್ಮ ಬದುಕಿನಲ್ಲಿ ಯಾವುದು ಅತಿಯಾದರೂ ಅದು ಅಪಾಯಕಾರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಕಾದಾಟದಲ್ಲಿ ಅತಿಯಾದ ಕೋಪ ಅಜಾಗರೂಕತೆಗೆ ಮತ್ತು ಕೊನೆಗೆ ಸಾವಿಗೂ ಎಡೆಮಾಡಿಕೊಡುತ್ತದೆ. ಧಾರ್ಮಿಕ ನಂಬಿಕೆಗಳ ಬಗ್ಗೆ ಅತಿಯಾದ ಉತ್ಸಾಹ ಸಂಕುಚಿತ ಸ್ವಭಾವಕ್ಕೆ ಮತ್ತು ಹಿಂಸೆಗೆ ಕಾರಣವಾಗುತ್ತದೆ. ಪ್ರೇಮದಲ್ಲಿನ ಅತಿಯಾದ ಉತ್ಕಟತೆ ಪ್ರೇಮಿಯ ಬಗ್ಗೆ ಮನಸ್ಸಿನಲ್ಲಿ ಕಲ್ಪನೆಗಳನ್ನು ಹುಟ್ಟುಹಾಕುತ್ತದೆ. ಈ ಕಲ್ಪನೆಗಳು ಅಂತಿಮವಾಗಿ ಸುಳ್ಳು ಎಂಬುದನ್ನು ಸಾಬೀತುಪಡಿಸಿದಾಗ ಕೋಪ ಉಂಟಾಗುತ್ತದೆ. ಅತಿಯಾಗಿ ಪ್ರೇಮಿಸುವುದು ಎಂದರೆ ಚೂರಿನ ತುದಿಯಿಂದ ಜೇನಿನ ನೆಕ್ಕಿದಂತೆ' ಎಂದು ಹೇಳಿದ.

'ಆದರೆ ನೀವೊಬ್ಬ ಸನ್ಯಾಸಿಯಾಗಿ ನಿಮಗೆ ಗಂಡು ಮತ್ತು ಹೆಣ್ಣಿನ ನಡುವಿನ ಪ್ರೇಮದ ಬಗ್ಗೆ ಹೇಗೆ ಗೊತ್ತು?' ಎಂದು ಆತನ ಮಾತು ಮುಗಿದ ಬಳಿಕ ಒಬ್ಬ ಯುವತಿ ಪ್ರಶ್ನಿಸಿದಳು.

Zen Stories How Can Old Monk Know About Love

ಅದಕ್ಕೆ ಆ ವೃದ್ಧ ಸನ್ಯಾಸಿ, 'ಪ್ರಿಯ ಮಕ್ಕಳೇ, ನಾನು ಏಕೆ ಸನ್ಯಾಸಿಯಾದೆ ಎಂಬ ಕಥೆಯನ್ನು ಮುಂದೆ ಎಂದಾದರೂ ಹೇಳುತ್ತೇನೆ' ಎಂದು ನಗುತ್ತಾ ಎದ್ದು ಹೊರಟ.(ಸಂಗ್ರಹ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+