ಝೆನ್ ಕಥೆ: ಸತ್ತ ಗುರುವಿನ ಬಗ್ಗೆ ಶಿಷ್ಯರ ಗಾಸಿಪ್

ತೀರಾ ವಯಸ್ಸಾಗಿದ್ದ ಝೆನ್ ಗುರುವೊಬ್ಬ ಅನಾರೋಗ್ಯದಿಂದ ತೀರಿಕೊಂಡ. ಆತನ ಕೆಲವು ಶಿಷ್ಯರು ಗುರುವಿನ ಅವಗುಣಗಳ ಬಗ್ಗೆ ಸುದ್ದಿಗಳನ್ನು ಹಬ್ಬಿಸುತ್ತಿದ್ದರು. ಗುರುವಿಗೆ ಹೆಂಗಸರ ಚಟ ಇತ್ತು, ಮದ್ಯ ಸೇವಿಸುತ್ತಿದ್ದ, ಧೂಮಪಾನ ಮಾಡುತ್ತಿದ್ದ ಎಂದೆಲ್ಲ ಅಂತೆಕಂತೆಗಳನ್ನು ಸೇರಿಸಿ ಹೇಳುತ್ತಿದ್ದರು.

ಬಹಳ ಜ್ಞಾನಿ ಎಂದು ಹೆಸರಾಗಿದ್ದ ಮಹಿಳೆಯೊಬ್ಬಳು ಒಂದು ದಿನ ಆ ಝೆನ್ ಗುರುವಿನ ಆಶ್ರಮಕ್ಕೆ ಬಂದಳು. ಆ ದಿವಂಗತ ಗುರುವಿನ ಶಿಷ್ಯರು ಆಕೆಯ ಎದುರೂ ಗುರುವಿನ ದುರ್ಗುಣಗಳನ್ನು ಬಣ್ಣಿಸುವ ಕೆಲಸವನ್ನು ಬಿಡಲಿಲ್ಲ.

ಶಿಷ್ಯರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡ ಬಳಿಕ ಮಹಿಳೆ, 'ಹೌದೇ? ಆದರೆ ನಿಮ್ಮ ಗುರುವಿಗೆ ಜ್ಞಾನೋದಯವಾಗಿತ್ತು ಎನ್ನುವುದು ನಿಮಗೆ ಗೊತ್ತೇ?' ಎಂದು ಕೇಳಿದಳು.

Zen Stories Disciples Shares Bad Opinion On Their Demised Master

'ಇಲ್ಲವಲ್ಲ. ನಮಗೆ ಅದು ತಿಳಿದೇ ಇಲ್ಲ. ನಿಮಗೆ ಹೇಗೆ ಗೊತ್ತು?' ಎಂದು ಶಿಷ್ಯರು ಆಕೆಯನ್ನು ಪ್ರಶ್ನಿಸಿದರು.

'ನಿಮ್ಮ ಮಧ್ಯೆ ಆತ ಬದುಕಿದ್ದ ಎಂದರೆ ಜ್ಞಾನೋದಯವಾಗಿರುವುದಕ್ಕಿಂತ ಬೇರೆ ಯಾವ ಸಾಧ್ಯತೆಯನ್ನು ಕೂಡ ನನ್ನಿಂದ ಊಹಿಸಲೂ ಸಾಧ್ಯವಿಲ್ಲ' ಎಂದು ಆಕೆ ತಣ್ಣನೆ ನುಡಿದಳು.
(ಸಂಗ್ರಹ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+