ದೇವರೇ ಬಂದರೂ ಅವನು ಬದುಕಲಿಲ್ಲ!

ಪ್ರಿಯರೇ, ಇತ್ತೀಚೆಗೆ ಇಮೇಲಿನಲ್ಲಿ ಬಂದ ಕಥೆಯೊಂದನ್ನು ಓದಿದೆ. ಮನಸ್ಸಿಗೆ ಮೆಚ್ಚಿಗೆಯಾಯಿತು. ನೀವೂ ಮೆಚ್ಚಬಹುದೆಂದುಕೊಂಡು ಕನ್ನಡೀಕರಿಸಿದ್ದೇನೆ.

  • ರಂಗನಾಥ, ಬೆಂಗಳೂರು

ದೇವರೇ ಬಂದರೂ ಅವನು ಬದುಕಲಿಲ್ಲ!ಒಂದಾನೊಂದು ಕಾಲದಲ್ಲಿ ಒಬ್ಬ ನಿಪುಣ ಪರ್ವತಾರೋಹಿಯಿದ್ದ. ಪ್ರಪಂಚದ ಅತೀ ಎತ್ತರವಾದ ಪರ್ವತವನ್ನೇರುವ ಮಹದಾಸೆಯಿಟ್ಟುಕೊಂಡಿದ್ದ. ಹಲವು ವರ್ಷಗಳ ಸತತ ಪರಿಶ್ರಮದಿಂದ ನಂತರ ಆ ದಿನ ಹತ್ತಿರ ಬಂತು. ಜಾಗರೂಕತೆಯಿಂದ ಸಿದ್ಧತೆಗಳನ್ನು ಮಾಡಿಕೊಂಡು ಪರ್ವತವನ್ನೇರಲು ಹೊರಟ. ಒಬ್ಬನೇ ಸಾಧನೆಗೈಯ್ಯುವ ಹಂಬಲದಿಂದ ಒಂಟಿಯಾಗೇ ಹೊರಟ.

ಮುಂಜಾನೆಯೇ ಏರಲು ಶುರು ಮಾಡಿದ. ತ್ವರಿತವಾಗಿ ಪ್ರಗತಿಯನ್ನು ಕಾಣುತ್ತಾ ಮೇಲೆ ಮೇಲೆ ಏರಿದ. ಇಡೀ ದಿನ ಏರುತ್ತಲೇ ಇದ್ದ. ನಿಧಾನವಾಗಿ ಕತ್ತಲಾಗತೊಡಗಿತು. ಆಕಾಶದಲ್ಲಿ ಮೋಡಗಳು ದಟ್ಟವಾಗಿ ಮೂಡತೊಡಗಿದವು. ನಕ್ಷತ್ರಗಳೂ ಕಾಣದಾದವು. ಚಳಿ ಶುರುವಾಯಿತು. ಆದರೆ ಈತ ಅನುಭವಿ. ಎದೆಗುಂದದೆ ತನ್ನ ಕೈಲಿದ್ದ ದೀಪದ ಬೆಳಕಿನ ಸಹಾಯದಿಂದ ಮುನ್ನಡೆದಿದ್ದ. ಬಹಳ ಮೇಲೆ ಏರಿದ್ದ. ಪರ್ವತದ ತುತ್ತ ತುದಿ ಇನ್ನೇನು ಕೆಲವೇ ಅಡಿಗಳ ಅಂತರದಲ್ಲಿದೆ ಎನ್ನುವಾಗ ಕಾಲು ಜಾರಿ ಕೆಳಗೆ ಬಿದ್ದ.

ಗಾಳಿಯಲ್ಲಿ ರಭಸವಾಗಿ ಕೆಳಗೆ ಬೀಳುತ್ತಿದ್ದಾನೆ. ಏನೂ ಕಾಣಿಸುತ್ತಿಲ್ಲ...ಸುತ್ತಲೂ ಗಾಢಾಂದಕಾರ. ಏನು ಮಾಡಲೂ ತೋಚುತ್ತಿಲ್ಲ. ತನ್ನ ಬದುಕಿನ ಇದುವರೆಗಿನ ಘಟನೆಗಳಲ್ಲಿ ಕೆಲವು ಕಣ್ಣಿನ ಮುಂದೆ ಬಂದು ಹೋದವು. ನೆಲ ಕಚ್ಚಲು ಇನ್ನೆಷ್ಟು ಮಹಾ ಕ್ಷಣಗಳು ಉಳಿದಿವೆ ಎಂದುಕೊಳ್ಳುತ್ತಿರುವಾಗಲೇ ಏನೋ ಎಳೆದು ಜಗ್ಗಿದಂತಾಯಿತು. ಇವನು ಮರೆತಿದ್ದ, ತನ್ನ ಸೊಂಟಕ್ಕೆ ಒಂದು ಹಗ್ಗವನ್ನು ಕಟ್ಟಿಕೊಂಡು ಹಗ್ಗದ ಮತ್ತೊಂದು ತುದಿಯನ್ನು ಪರ್ವತದ ಮೇಲಿನ ಒಂದು ಬಂಡೆಕಲ್ಲಿಗೆ ಭದ್ರವಾಗಿ ಕಟ್ಟಿದ್ದ. ಉದ್ದವಾದ ಹಗ್ಗ ಮುಗಿದಿತ್ತು. ಬಲವಂತವಾಗಿ ಜಗ್ಗಿದ್ದರಿಂದ ನೋವಾಗಿ "ಓ ದೇವರೆ" ಎಂದು ಕೂಗಿದ.

ಕೆಲವು ಕ್ಷಣಗಳು ನಿಶ್ಯಬ್ದವಾಗಿ ಕಳೆದವು. ನಂತರ "ಕೂಗಿದೆಯಾ ಮಗನೆ" ಎಂದು ದೇವರ ಮಾರುತ್ತರ ಬಂತು. ಇವನಿಗೆ ಆಶ್ಚರ್ಯ!
"ಹಾ ದೇವರೆ! ನನ್ನನ್ನು ಕಾಪಾಡು" ಎಂದ. ದೇವರು ಕೇಳಿದ, "ನಾನು ನಿನ್ನನ್ನು ಕಾಪಾಡಬಲ್ಲೆನೆಂಬ ಭರವಸೆ ನಿನಗಿದೆಯೆ?"

ಇವನು ತನ್ನ ಸ್ವಂತ ಶಕ್ತಿಯ ಮೇಲೆ ನಂಬಿಕೆಯಿಟ್ಟವನು. ದೇವರನ್ನೆಂದೂ ಪ್ರಾರ್ಥಿಸಿದವನಲ್ಲ. ಹೇಳಿದ, "ಹೌದು ದೇವರೇ. ನೀನು ನನ್ನನ್ನು ಕಾಪಾಡಬಲ್ಲೆ. ದಯವಿಟ್ಟು ಕಾಪಾಡು".

'ಸರಿ ಕಾಪಾಡುತ್ತೇನೆ. ಮೊದಲು ನಿನ್ನ ಜೇಬಿನಿಂದ ಚಾಕುವನ್ನು ತೆಗೆದು, ನೇತು ಹಾಕಿಕೊಂಡಿರುವ ಹಗ್ಗವನ್ನು ತುಂಡರಿಸು' ಎಂದು ದೇವರು ಸಲಹೆ ನೀಡಿದ. ಇವನಿಗೆ ಆಶ್ಚರ್ಯ, ದುಃಖ ಎರಡೂ ಒಟ್ಟಿಗೆ ಆಯಿತು. ಹಗ್ಗದ ಸಹಾಯದಿಂದಲೇ ತಾನು ಬದುಕುಳಿದಿದ್ದೇನೆ. ಅದನ್ನೇ ತುಂಡರಿಸುವುದೆ! ದೇವರನ್ನು ನಂಬದಾದ. ಕೆಲಕಾಲ ಮೌನ ಮುಂದುವರೆಯಿತು. ಇವ ಹಗ್ಗದಲ್ಲಿಯೆ ನೇತಾಡಿಕೊಂಡಿರಲು ನಿರ್ಧರಿಸಿದ.

ಮಾರನೆಯ ಬೆಳಗ್ಗೆ ಅಲ್ಲಿನ ರಕ್ಷಕರು ಬಂದು ನೋಡುತ್ತಾರೆ, ಇವ ಶವವಾಗಿದ್ದಾನೆ. ದೇಹ ಕೊರೆಯುತ್ತಿದೆ. ಆಶ್ಚರ್ಯವೆಂದರೆ ಶವ ನೆಲದಿಂದ ಕೇವಲ ಎರಡಡಿ ಮೇಲೆ ನೇತಾಡುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+