ಎಲ್ಲ ಮೊದಲಿನಂತಲ್ಲ ಈ ಮೊದಲು Yes, I am in Love
ಯಾರೋ ತುಟಿ ಕಚ್ಚಿದರೂ
ಒಡಲು ಕೆರಳಲಿಲ್ಲ
ಹಾಸಿಗೆಯಲ್ಲಿ ಅರಳಲಿಲ್ಲ
ಎರಡು ಬಗೆಯಲಿಲ್ಲ
ಸಂಬಂಧಕ್ಕೆದೆಯೂಡದೆ ಇರಲಿಲ್ಲ
ಪ್ರೇಮ ಕಾಮ ವಾತ್ಸಲ್ಯ ಗೆರೆ ದಾಟಲಿಲ್ಲ
ರೋಮಿಯೋ ಜ್ಯೂಲಿಯೆಟ್ ಕಾವ್ಯದಂತಿಲ್ಲ
ಉಲ್ಲಾಸದ ಹೂ ಮಳೆಯಂತೆ ಹಾಡಾಗಲಿಲ್ಲ
ಉಸಿರ ಭಾರಕ್ಕೇ ಬೆವರಾಗಲಿಲ್ಲ
ಕೆಂಪಾಗಲಿಲ್ಲ ಗುಲಾಬಿದಳದಲ್ಲಿರಲಿಲ್ಲ
ಪಾತ್ರೆ ಪಾತ್ರೆಯಂತೆ ನೀರಾಗದೆ ಉಳಿಯಲಿಲ್ಲ
ಮಾಸಕ್ಕೊಮ್ಮೆ ಬಯಲಲ್ಲಿ ಪೊರೆ ಕಳಚಿ ಹರಿಯಲಿಲ್ಲ

"ನಾ ಗಿರಿಧಾರಿ ನೀನೇ ಮೀರ" ಎನ್ನುವ ಅವನದ್ದು
ಮಾರ್ದನಿಯ ನಿನಾದ ನನ್ನದೆಂದೂ ಏಕನಾದ
ಉಪವಾಸಕ್ಕೆ ಹೊಸ ಭಾಷ್ಯ ಬರೆಯುತ್ತಿದ್ದೇವೆ ನಾವೀಗ
ಅಕಾಲದಲ್ಲಿ ಕಾಲನೊಡನೆ
ನನ್ನ ಮೊದಲ ಪ್ರೀತಿ ಪ್ರೇಮ
ಅವನೀಗ ಉಂಗುರ ಕಚ್ಚಿದ ಹಾವಿನಂತೆ
ನನ್ನ ತುಂಬಿದೆದೆಯ ಮೇಲೆಲ್ಲಾ ಹಲ್ಲಿನ ಗುರುತು
ಎಲ್ಲ ಮೊದಲಿನಂತಲ್ಲ ಈ ಮೊದಲು
Yes, I am in Love!












Click it and Unblock the Notifications