ಮನಸು ಬೆಚ್ಚಗಾಗಿಸುವ ಕನ್ನಡ ಶಾಯರಿಗಳು

By: * ಬಾಲರಾಜ್ ತಂತ್ರಿ
Subscribe to Oneindia Kannada
True friendship
ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ
ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..

***

ಜೀವನ ಎಲ್ಲರಿಗೂ ಸಿಗಲೇಬೇಕೆನ್ನುವುದು ಅವಶ್ಯಕವಲ್ಲ, ಸ್ನೇಹ ಎಲ್ಲರಿಗೂ ಸಿಗಬೇಕೆನ್ನುವುದು ಅವಶ್ಯಕವಲ್ಲ
ಕೆಲವೊಂದು ವ್ಯಕ್ತಿಗಳು ನಮಗೆ ತುಂಬಾ ಕಾಡುತ್ತಿದ್ದರೂ, ನಾವು ಅವರಿಗೆ ನೆನಪಿಗೆ ಬರಬೇಕೆನ್ನುವುದು ಅವಶ್ಯಕವಲ್ಲ

***

ಬದುಕಿನ ಒಂದು ವಿಚಿತ್ರ ನಿಯಮ..
ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ..
ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ...

***

ಹೃದಯದ ಬಡಿತದಲ್ಲಿ ಯಾರದ್ದೋ ನೆನಪು..
ಉಸಿರಾಡುವ ಉಸಿರಿನಲ್ಲಿ ಯಾರದ್ದೋ ಮಾತು..
ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ..
ಖಂಡಿತ ಅದು.. ಆಷಾಡದಲ್ಲಿನ ದೆವ್ವದ ಸ್ಪರ್ಷ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...