ನಿರ್ಮಲೆ ಜೀವದ ಸೆಲೆ ನಮ್ಮಮ್ಮ

Mohanchand Patil
ಗುಡಿಯಲಿ ಕುಳಿತು ಅಭಯ ಹಸ್ತ ತೋರುವವಳಲ್ಲ ವರಗಳ ಕೊಡುವವಳಲ್ಲ
ಗದ್ದೆ ಕಚೇರಿ ಶಾಲೆ ಮನೆಮಠಗಳಲಿ ದುಡಿದು ಹಿಟ್ಟು ನಾದಿ ಹೊಟ್ಟೆಗ್ಹಾಕುವವಳು

ರುಂಡಗಳ ಚೆಂಡಾಡುವ ರಣಚೆಂಡಿಯಲ್ಲ ರಕ್ತ ಕುಡಿವ ಕಾಳಿಯಲ್ಲ
ಬೊಬ್ಬಿರಿವ ಗಾಳಿಯಲಿ ಅಬ್ಬರದ ಅಲೆಗಳಲಿ ಹೂ ನಗೆ ಬೀರುವವಳು

ಚಂಚಲ ಚಪಲೆಯಲ್ಲ ವೆಂಕಟನ ರಮಣಿಯಲ್ಲ ವೀಣಾ ವಾಣಿಯಲ್ಲ
ಸಂಸಾರದೀಜಲು ನಾಲ್ಕಕ್ಷರ ಕಲಿತವಳು ಕಾಯಕವೇ ಕೈಲಾಸವೆನುವವಳು

ವಿಶ್ವದ ಒಗಟು ಒಡೆಯುವವಳಲ್ಲ ಅಧ್ಯಾತ್ಮ ಅನುಭಾವವೆನುವವಳಲ್ಲ
ತನ್ನೊಡಲಲಿ ಬೀಜ ಮೊಳೆಸಿ ನಮ್ಮನೆಲ್ಲ ಹಡೆದು ಸಾಕಿ ಸಲಹುವವಳು

ಪಂಚಭೂತಗಳನರಿಯದೆ ಗರ್ಭದಲಿ ಹೊಸೆದು ಜೀವ ತುಂಬುವವಳಮ್ಮ
ಸಹನೆ ಶಾಂತಲೆ ಶೀತಲೆ ಕೋಮಲೆ ನಿರ್ಮಲೆ ಜೀವದ ಸೆಲೆ ನಮ್ಮಮ್ಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+