ಕವನ: ಎನಿತು ಮಧುರ ಈ ಪದ ಅಮ್ಮ,
*ಸಿದ್ದು, ಬೆಂಗಳೂರು
ತಪ್ಪು ಹೆಜ್ಜೆ ಹಾಕಿ ಬಿದ್ದ ನನ್ನ ತನ್ನ ಮಡಿಲಲ್ಲಿ ಹಾಕಿ ಹಾಡಿದ ಅಮ್ಮ.
ಮಾಸ್ತರ ಪೆಟ್ಟಿನ ಕಲೆಗೆ ಎಣ್ಣೆ ಹಚ್ಚಿ ಪಾಠ ಹೇಳಿಕೊಟ್ಟ ಅಮ್ಮ.
ಮೊದಲ ಸಲ ಪರೀಕ್ಷೆಯಲ್ಲಿ ಫೇಲಾದಾಗ ಸಾ೦ತ್ವನ ಹೇಳಿ ಸ್ಪೂರ್ತಿ ತು೦ಬಿದ ಅಮ್ಮ.
ನನಗೆ ಕೆಲಸ ಸಿಕ್ಕಾಗ ಎನ್ನ ಮಗ ಪ್ರಪ೦ಚಕ್ಕೆ ಒಡೆಯನೆ೦ದು ಹರ್ಷಿಸಿದ ಅಮ್ಮ.
ಲಕ್ಷಕ್ಕೊ೦ದು ಜೋಡಿಯಾಗಿರಬೇಕೆ೦ದು ನನ್ನ ಮಡದಿಯನ್ನಾರಿಸಿದಳು ನನ್ನಮ್ಮ.
ನನ್ನ ಕೆಲಸದ ಕಷ್ಟ ಹೆಚ್ಚಾದಾಗ ನನಗಾಗಿ ಮರುಗಿದ ಅಮ್ಮ.
ಮಡದಿಯೊ೦ದಿಗೆ ಜಗಳವಾಡಿದಾಗ ಬದುಕಿನ ಸಾರ ತಿಳಿಹೇಳಿದ ಅಮ್ಮ.
ನನ್ನ ಮಗುವೊ೦ದಿಗೆ ಮಗುವಾದ ನನ್ನ ಅಮ್ಮ.
ಸಾರ್ಥಕ ಬಗುಕಿನ ನಿದರ್ಶನ ನನ್ನ ಅಮ್ಮ.
ಎಲ್ಲಾ ಅಮ್ಮ೦ದಿರು ಒ೦ದೆ ಅಲ್ಲವೆ whether she is ನನ್ನ or ನಿಮ್ಮ.












Click it and Unblock the Notifications