ಏನು ಹೇಳಲಿ ಅವಳ ವೈಯ್ಯಾರ?
ಬೆಳಕಿನ ಸುಳಿ ತರುವುದು ಈ ದೀಪಾವಳಿ...ಎಲ್ಲೆಡೆ ಮೂಡಿಸುತ್ತಾ ಬೆಳಕಿನ ಪ್ರಭಾವಳಿ..
- ಮಲೆನಾಡಿಗ
ಅಂಧಕಾರದಿ ತುಂಬಿದ್ದ ನನ್ನ ಮನಕ್ಕೆ ನೀ ಜ್ಯೋತಿಯಾದೆ
ಹರುಷದ ಹೊನಲು ಹರಿದಿದೆ ಇಂದು
ಮುದದಿ ನಲಿಯುತಿಹರು ಚಿಣ್ಣರು ನಿನ್ನ ಹಿಂದು ಮುಂದು
ಬೆಳಕಿನ ಹಬ್ಬವ ಸ್ವಾಗತಿಸುವ ಪರಿಯ ನಾ ಅರಿಯೆ
ತಾಮಸ ಜಗದಿ ಬಂಧಿತನಾಗಿದ್ದ ನಾ ಮರೆಯೆ
ನೀ ತಂದೆ ನನ್ನ ಬಾಳಿಗೆ ಬೆಳಕಿನ ಸಿರಿ
ನನ್ನ ಕತ್ತಲ ಬದುಕಿಗೆ ಜ್ಞಾನ ಬೆಳಕ ಹರಿಸಿದೆ
ಮನದ ದುಗುಡವ ಮರೆಯಲು ಸರಿ ಹಬ್ಬವ ಆಚರಿಸಿದೆ
ಆಗಸದಿ ತಾರೆಗಳು ಮಂಕಾದವು ಪಟಾಕಿಯ ಬೆಳಕಿಗೆ
ಸಿಹಿ ತಿನಿಸಿನ ರಸದೌತಣ ನೀಡಿದೆ ಎಲ್ಲರ ಉದರಕೆ
ಹೊಸ ದಿರಿಸು ಧರಿಸಿ ಕಣ್ಮನ ಸೆಳೆಯುವ ಬಾಲೆಯರು
ಬೊಗಸೆ ತುಂಬಾ ದೀಪವ ಹಿಡಿದು ಕತ್ತಲೆಯ ನೀಗಿಸಲು ನಿಂತಿಹರು
ದೀಪಾವಳಿಯೆಂದರೆ ಚಿಣ್ಣರಿಗೆ ಪಟಾಕಿ, ಹೊಸ ದಿರಿಸಿನ ನೆನಪು
ನನಗೆ ಮಾತ್ರ ನೆನಪಿರುವುದು ನನ್ನಾಕೆಯ ಸಂಭ್ರಮದ ಒನಪು












Click it and Unblock the Notifications