ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ ಕಂಡ ಬೆಳಕು !

By Staff
|
Google Oneindia Kannada News
ಬೆಳಗಾಯಿತು ಎದ್ದೇಳು ಎಂದೆಬ್ಬಿಸಿದಳು ಅಮ್ಮ
ಎದ್ದು ನೋಡಿದೆ ಅದು ಆರರ ಸಮಯ

ಹೊರಬಂದು ನೋಡಿದರೆ ಎಲ್ಲೆಲ್ಲೂ ಹಸಿರು
ಮಳೆಯ ಆಗಮನದಿಂದ ಧರೆಯೆಲ್ಲ ಕೆಸರು

ಮನೆಯ ಮೇಲಿಂದ ಕಂಡಿತು ಸಹ್ಯಾದ್ರಿಯ ಸರಣಿ
ನಡುವೆ ಮೂಡುತಿರುವ ಹೊಂಬಣ್ಣದ ಧರಣಿ

ಎಲೆಯ ಮೇಲ್ಗಡೆ ಬಿದ್ದ ಮಳೆಹನಿಯ ಮುತ್ತು
ಎಮ್ಮವರ ಮನವನ್ನು ಸೂರೆಗೊಳ್ಳುವಂತಿದ್ದು

ಆಹಾ! ಅದೆಂತಹ ರಮಣೀಯ ನೋಟ
ಗಿರಿಯ ಸುತ್ತಲು ಇರುವ ತೆಂಗು-ಕಂಗಿನ ತೋಟ

ಮುಗಿಲೆತ್ತರಕೆ ಬೆಳೆದು ನಿಂತಿವೆ ಕಾಡಿನ ಕಲ್ಪವೃಕ್ಷಗಳು!
ಇದನಪ್ಪುವಂತೆ ಕಾಣುತಿವೆ ಬಾಂದಳದ ಮೇಘಗಳು!

ಹಾಡುತಿರೆ ಮಧುರಂದದಿ ಪಕ್ಷಿಗಳ ಸಮುದಾಯ!
ಜುಮ್ಮೆಂದಿದೆ ಇದನಾಲಿಸಿ ಎನ್ನಯ ಈ ಹೃದಯ

ಭೋರ್ಗರೆದು ಸಾಗುತಿಹಳು ದೂರದಿ ನದಿ ತುಂಗೆ
ತನ್ನ ಮಡಿಲ ಹೊನ್ನಾಗಿಸಿ ಕರುನಾಡಿನ ಗಂಗೆ!

ಎಷ್ಟು ಸುಂದರವಾಗಿದೆ ನಮ್ಮೆಲ್ಲರ ತಾಯ್ನಾಡು
ಭಾರತಾಂಬೆಯ ಮಡಿಲ ಸಿರಿಗನ್ನಡ ನಾಡು!

ಈ ಸೊಬಗ ಕಂಡು ಎನ್ನ ಮನಸಿಗೇನೋ ಹರುಷ!
ಮೂಡುತಿರಲಿ ಬಾಳಿನಲ್ಲಿ ಇಂತಹ ರಸನಿಮಿಷ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X