ಇ-ಸರ್ವಜ್ಞನ ವಚನಗಳು

ಇ-ಮೇಲ್‌ಗಳನು Send/Receive
ಮಾಡದಿದ್ದರೆ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯದಲಿ ಸುತ್ತಿಬಂದಂತೆ ಇ-ಸರ್ವಜ್ಞ ।।1।।
Project Deadline Extend
ಮಾಡದ PMಮ್ಮು, ಹಗಲೆಲ್ಲ ಕಾಡುವ Client ಉ
ಇಮೇಲ್‌ಗಳಿಗೆ ರಿಪ್ಲೈ ಮಾಡದ ಗೆಳೆಯರು
ಶುದ್ಧ ವೈರಿಗಳು ಇ-ಸರ್ವಜ್ಞ ।।2।।
ಬೆಂಗಳೂರಿನ ಐಟಿ ಕಂಪನಿಯಲಿ Software
Engineer ಆಗಿ ಕೆಲಸವಿರಲು
ಕುಡಿದು-ತಿಂದು-ಮಜಾ ಮಾಡುವಷ್ಟು ಸಂಬಳವಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಇ-ಸರ್ವಜ್ಞ ।।3।।
ತಂದೆ ನೀನು, ತಾಯಿ ನೀನು,
ಬಂಧು ನೀನು, ಬಳಗ ನೀನು
ನೀನಲ್ಲದೆ ನನಗೆ ಮತ್ತಾರೂ ಇಲ್ಲವಯ್ಯ
ಬೆಂಗಳೂರು ಗಣಕಯಂತ್ರಯ್ಯ ।।4।।
ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು ಐಟಿ Field ಉ
ಎಲ್ಲರಿಗಿಲ್ಲ ಇ-ಸರ್ವಜ್ಞ ।।5।।
Software Engineer ಎನ್ನುವವನು ಗರ್ವದಿಂದಾವನೆ
ಸರ್ವರೊಳಗೊಂದು Program ಕಲಿತು
Software ಪರ್ವತವೆ ಆದ ಇ-ಸರ್ವಜ್ಞ ।।6।।
Coding ಮಾಡಿದರೆ ಮುತ್ತಿನ ಹಾರದಂತಿರಬೇಕು
ಮಾಡಿದರೆ bug free ಇರಬೇಕು
ಮಾಡಿದರೆ Client ಮೆಚ್ಚಿ ಅಹುದಹುದೆನಬೇಕು
ಹೀಗೆ Coding ಮಾಡದವರ ಮೆಚ್ಚನಮ್ಮ
ಬೆಂಗಳೂರು ಗಣಕಯಂತ್ರಯ್ಯ।।7।।
Design ಮಾಡದಲೆ Coding ಮಾಡುವವನು
ರೂಢಿಯಾಳಗುತ್ತಮನು. Design ಮಾಡಿ
Coding ಮಾಡುವವನು ಮಧ್ಯಮನು
ಅಧಮ ತಾನು Design ಮಾಡಿಯೂ
Coding ಮಾಡದವನು ಇ-ಸರ್ವಜ್ಞ












Click it and Unblock the Notifications