ಲೇ ಹುಡುಗಿ, ಮತ್ಯಾಕ ಭೆಟ್ಯಾದಿ ನೀ ಇಂದು ಎಂಜಿ ರೋಡಿನಲ್ಲಿ ?
*ರಾಜಶೇಖರ ಹೀರೇಮಠ್
ರಮ್ಮು ಬ್ರ್ಯಾಂಡಿಗಳಿಗೆ ಏರದ ನಶೆ, ಏರಿತ್ತು ಬರಿ
ಬೀರಿಗೆ
ಏಕೆಂದರೆ ಬೆರೆತಿತ್ತು ಅವಳ ನಶೆ ಅದರೊಂದಿಗೆ
ಬರಿ ನಶೆಯಾಗಿ ಕಾಡುವ ಆ ಹುಡುಗಿ
ಬರಲಿಲ್ಲ ಅವಳು ಮರಳಿ ಹೋದಾಕಿ ಅಂದು ನೀರಿಗೆ
ಪ್ರೇಮ ಪ್ರೀತಿಗೆ ಗಾವುದ ದೂರ ಇರುವವನ
ಮಾಡಿದ್ದೆ ನೀ ಅಂದು ಮರುಳ
ಅಂದು ನಾನರಿಯಲಿಲ್ಲ ನಿನ್ನ ಒಲುಮೆಯ
ಅಂತರಂಗದ ತಿರುಳ
ಕೂಡಿ ಕಲಿತಿದ್ದ ಕೂಡಿ ನಲಿದಿದ್ದ ಆ
ನೆನಪುಗಳು ಇನ್ನು ಹಸಿರ
ದಿನವು ಕಳೆದಂತೆ, ವರುಷ ಕಳೆದಂತೆ
ಚಿಗುರುವವವು ಅವು ಮಾಮರದ ಚಿಗುರಿನಂತೆ
ಆದರೂ ಮರೆತಿದ್ದೆ ಲೇ ಹುಡುಗಿ ಆ ದಿನಗಳನು
ಮತ್ಯಾಕ ಭೆಟ್ಯಾದಿ ನೀ ಇಂದು ಎಂಜಿ ರೋಡಿನಲ್ಲಿ ?
ಅಲ್ಲಿಂದ ಬಂದವನೆ ಕುಂತಿರುವೆ ನಾನೀಗ
ನನ್ನ ಪ್ರೀತಿಯ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ...












Click it and Unblock the Notifications