ಆಚಾರ್ಯ ವಿ.ಸೀ ಗೆ ನಮೋ ನಮ:

Subscribe to Oneindia Kannada
Veesi wtih Karanth
ವಿ.ಸೀ. ಎಂದೆ ಖ್ಯಾತರಾದ ವಿ.ಸೀತಾರಾಮಯ್ಯನವರು 1899ರ ಅಕ್ಟೋಬರ್ 2ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ, ತಾಯಿ ದೊಡ್ಡವೆಂಕಟಮ್ಮ. ಮೈಸೂರು ಮಹಾರಾಜಾ ಕಾಲೇಜಿನಿಂದ 1920ರಲ್ಲಿ ಬಿ.ಎ. ಪದವಿಯನ್ನೂ, 1922ರಲ್ಲಿ ಎಮ್.ಎ. ಪದವಿಯನ್ನೂ ಪಡೆದರು. 1923 ರಿಂದ 1928 ರವರೆಗೆ ಮೈಸೂರಿನ ಶಾರದಾವಿಲಾಸ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದರು. 1928 ರಿಂದ 1955 ರವರೆಗೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 1956ರಿಂದ1958ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. 1964ರಿಂದ 1968 ರವರೆಗೆ ಹೊನ್ನಾವರ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

ವಿ.ಸೀ. ಅವರ ಆರು ಕವನಸಂಗ್ರಹಗಳು ಈ ರೀತಿಯಾಗಿವೆ: ದೀಪಗಳು, ಗೀತಗಳು, ನೆಳಲು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆ ಪಾಡು, ಅರಲು-ಬರಲು. (ಅರಲು-ಬರಲು ಕೃತಿಗೆ 1973 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.)

ಲಲಿತ ಪ್ರಬಂಧಗಳ ಸಂಕಲನಗಳು: ಬೆಳದಿಂಗಳು, ಸೀಕರಣೆ

ನಾಟಕಗಳು: ಆಗ್ರಹ, ಸೊಹ್ರಾಬ್ ರುಸ್ತುಮ್, ಶ್ರೀಶೈಲ ಶಿಖರ ( ಈ ನಾಟಕವು ' ಪಾಪ ಪುಣ್ಯ" ಹೆಸರಿನ ಚಲನಚಿತ್ರವಾಗಿದೆ.)

ಸೃಜನಾತ್ಮಕ ರಚನೆಗಳು: ಮಹನೀಯರು, ಕಾಲೇಜು ದಿನಗಳು, ಅಶ್ವತ್ಥಾಮನ್, ಕವಿ ಕಾವ್ಯ ದೃಷ್ಟಿ, ಹಣಪ್ರಪಂಚ, ಸಾಹಿತ್ಯ ಮತ್ತು ಮೌಲ್ಯ, ಸಾಹಿತ್ಯಾವಲೋಕನ, ಕಲಾನುಭವ (ಇದು ವಿ.ಸೀ.ಯವರ ಕೆಲವು ಉಪನ್ಯಾಸಗಳ ಸಂಗ್ರಹ).

ಅನುವಾದಿತ ಕೃತಿಗಳು: ಪಿಗ್ಮ್ಯಾಲಿಯನ್, ಮೇಜರ ಬಾರ್ಬರ, ಬಂಗಾಳಿ ಸಾಹಿತ್ಯ ಚರಿತ್ರೆ.

ಸಂಪಾದಿತ ಕೃತಿಗಳು: ಕವಿರಾಜಮಾರ್ಗ, ವಡ್ಡಾರಾಧನೆ, ವ್ಯಾಕರಣಗಳು, ಯಕ್ಷಗಾನ, ಜನಪದ ಸಾಹಿತ್ಯ.

*1954 ರಲ್ಲಿ ಕುಮಟೆಯಲ್ಲಿ ಜರುಗಿದ 36 ನೆಯ ಸಾಹಿತ್ಯಸಮ್ಮೇಳನಕ್ಕೆ ವಿ.ಸೀ.ಯವರು ಅಧ್ಯಕ್ಷರಾಗಿದ್ದರು.

*1983ರಂದು ಕನ್ನಡ ಸಾಹಿತ್ಯ ಲೋಕ ಪರಿಚಾರಕ ಇಹಲೋಕದ ವ್ಯಾಪಾರ ಮುಗಿಸಿದರು.

ಮಾಹಿತಿ ಕೃಪೆ : ಸುಜನ್ ಕುಮಾರ್ ಶೆಟ್ಟಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...