ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!

|
Google Oneindia Kannada News

Flood affected Tinthini village, Gulbarga
ಪ್ರವಾಹದ ಪರಿಣಾಮ ಮತ್ತು ಇಲ್ಲಿಯವರೆಗಿನ ಪರಿಹಾರ ಕಾರ್ಯಗಳು :

ಉತ್ತರ ಕರ್ನಾಟಕ ಅಷ್ಟೇನೂ ಅಭಿವೃದ್ಧಿ ಕಾಣದ, ವ್ಯವಸಾಯವನ್ನು ಅವಲಂಬಿಸಿ ಬದುಕುವ ಜನರ ಪ್ರದೇಶ. ನಾವು ಭೇಟಿ ಕೊಟ್ಟ ಗ್ರಾಮದಲ್ಲಿನವರು ಮೂಲತಃ ವ್ಯವಸಾಯ ಹಾಗು ದಿನಗೂಲಿಯಿಂದ ತಮ್ಮ ಜೀವನ ಸಾಗಿಸುತ್ತಾರೆ. ಇವರ ಮನೆಗಳು ಸುಮಾರು 1 ಚದರದಷ್ಟಿದ್ದು, ಒಂದು ದಿನಕ್ಕೆ 80 ರೂ. ಆದಾಯ ಉಳ್ಳವರು. ಆ ದಿನದ ದುಡಿಮೆ ಅಂದಿಗೆ ಸಾಕಾಗುತ್ತದೆ, ಅಲ್ಲದೆ ಅಲ್ಲಿಯೇ ದೊರಕುವ ಮಣ್ಣು ಕಲ್ಲುಗಳಿಂದ ಕಟ್ಟಿರುವ ಇವರ ಮನೆಗಳು ಸಹ ಇಂಥಹ ಪ್ರವಾಹಗಳನ್ನು ಎದುರಿಸುವಷ್ಟು ಶಕ್ತಿಯವಲ್ಲ.

ಇಂಥಹ ಗ್ರಾಮಕ್ಕೆ ನೆರೆ ಬಂದಾಗ ಇವರುಗಳು ತಮ್ಮ ಮನೆ, ಜಾನುವಾರು, ಹೊಲ-ಗದ್ದೆಗಳಲ್ಲಿನ ಬೆಳೆ ಕಳೆದುಕೊಳ್ಳಬೇಕಾಯ್ತು. ಈ ಸಮಯದಲ್ಲಿ ತಮ್ಮ ನೆಲೆ ಬಿಟ್ಟು ದೂರದ ಊರುಗಳಲ್ಲಿನ ಶಾಲೆ, ದೇವಸ್ಥಾನ ಹಾಗು ಸಂಬಂಧಿಕರ ಮನೆಗಳಲ್ಲಿ ಸ್ವಲ್ಪ ಕಾಲದವರೆಗೆ ಆಶ್ರೆಯ ಪಡೆದಿದ್ದರು.

ಸರ್ಕಾರದಿಂದ ಇವರಿಗೆ ದೊರೆತಿರುವ ಸಹಾಯ ಮೊತ್ತ ಕೇವಲ ರು. 2,500! ಅವರೇ ಹೇಳುವಂತೆ, ಬಿದ್ದಿರುವ ಮನೆಗಳ ಅವಶೇಷಗಳನ್ನು ತಗೆಯಲು ಸಹ ಈ ಮೊತ್ತ ಸಾಲುವುದಿಲ್ಲ. ಮನೆಗಳು ನೀರಿನಲ್ಲಿ ಹೆಚ್ಚು ನೆನೆದಿರುವುದರಿಂದ ನೆಲವೆಲ್ಲ ಹಸಿಯಾಗಿದೆ ಹಾಗು ಇರುವ ಗೋಡೆಗಳು ಬಿರುಕು ಬಿಟ್ಟಿವೆ. ನೀರಿನ ಮಟ್ಟ ಈಗ ಸಹಜ ಸ್ಥಿತಿಗೆ ಬಂದಿರುವುದರಿಂದ ಮೊದಲಿನಂತೆ ಬದುಕಲು ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಆದರೆ ಅಲ್ಲಿ ಅವರಿಗೆ ಇರಲು ಮನೆಗಳಿಲ್ಲ, ಈಗಲೂ ದೇವಸ್ಥಾನ, ಪಕ್ಕದ ಮನೆಗಳನ್ನು ಆಶ್ರೆಯಿಸಿದ್ದಾರೆ. ಕೆಲವರು ದಾನಿಗಳು ಕಳಿಸಿರುವ ಜಮಖಾನೆ, ಚಾಪೆಗಳ ಮೇಲೆ ತಮ್ಮ ಮುರುಕು ಮನೆಗಳಲ್ಲೇ ವಾಸ ಮಾಡುತ್ತಿದ್ದರೆ.

ಮುಂದೆ ಓದಿ : ಸಂತ್ರಸ್ತರಿಗೆ ಸದ್ಯದ ತುರ್ತು ಅವಶ್ಯಕತೆ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X