ಮಕ್ಕಳ ದಿನಾಚರಣೆಯಂದು ಶಿಶುಗೀತೆಗಳ ಕಾಣಿಕೆ

ನವೆಂಬರ್ 14ಕ್ಕೆ ಮಕ್ಕಳಿಗೆ ಏನು ಉಡುಗೊರೆ ಕೊಡೋದು ಎಂದು ಯೋಚಿಸುತ್ತಿರುವಾಗ ಚಕ್ಕಂತ ಕೆಂಗೇರಿಯ ಮಿತ್ರ ಪಟವರ್ಧನ್ ಅವರಿಂದ ಒಂದು ಇಮೇಲ್ ಬಂತು. ಯುಟ್ಯೂಬ್ ನಲ್ಲಿರುವ ಒಂದು ಕನ್ನಡದ ಕೊಂಡಿಯನ್ನು ಅವರು ಹೆಕ್ಕಿ ನಮಗೆ ಕಳಿಸಿದ್ದರು. ಲಿಂಕ್ ತೆಗೆದು ನೋಡಿದರೆ ಪರಮಾಶ್ಚರ್ಯವಾಯಿತು. ಅಪ್ಪಟ ಕನ್ನಡ ಶಿಶುಗೀತೆಗಳ ಗುಚ್ಛ ಮನ ಸೆಳೆಯಿತು. ಸುಮಾರು 59 ಕನ್ನಡ ಗೀತೆಗಳನ್ನು ಅನಿಮೇಷನ್ ಜತೆ ಯಾರೋ ಪುಣ್ಯಾತ್ಮರು ಅಲ್ಲಿ ಹಾಕಿದ್ದಾರೆ. ಗೀತೆಯನ್ನು ಕಲೆಹಾಕಿ, ಚಿತ್ರಗಳೊಂದಿಗೆ ಇಂಟರ್ನೆಟ್ಟಿಗೆ ಹಾಕಿದವರಿಗೆ ದಟ್ಸ್ ಕನ್ನಡ ಶುಭಾಶಯ ಹೇಳುತ್ತದೆ.
ಅರ್ಥವತ್ತಾದ ಶಿಶುಗೀತೆಗಳು, ಇಂಪಾದ ಹಾಡು ಮತ್ತು ಕನ್ನಡ ಸೊಗಡಿನ ಕಾರ್ಟೂನ್ ಗಳು ಈ ಕೊಂಡಿಯ ಮೂಲಕ ನಿಮ್ಮದಾಗಲಿ. ಮಕ್ಕಳಿಗೆ ತೋರಿಸಿ ನಲಿಸಿರಿ. ಮಕ್ಕಳು ಆನಂದತುಂದಿಲರಾಗುತ್ತಾರೆ. ದೊಡ್ಡವರಲ್ಲಿನ ಮಗು ಮನಸ್ಸು ಕೂಡ ಸಂತಸಪಡುತ್ತದೆ. ನಮಸ್ಕಾರ.
ಯುಟ್ಯೂಬ್ ಕನ್ನಡ ಗೀತೆಗಳನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿ












Click it and Unblock the Notifications