ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 50,000 ರೂ.

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಬುಕ್‌ ಬ್ರಹ್ಮ ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ 'ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2022'ನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲಿರುವ ಕಥೆಗೆ 50,000 ರೂ, ದ್ವೀತಿಯ ಸ್ಥಾನಕ್ಕೆ 25,000 ರೂ, ತೃತೀಯ ಸ್ಥಾನಕ್ಕೆ 15,000 ರೂ. ಮತ್ತು ಉಳಿದಂತೆ ಮೂರು ಕತೆಗಳಿಗೆ ತಲಾ 5000 ರೂ. ಸಮಾಧಾನಕರ ಬಹುಮಾನ ನೀಡಲಾಗುವುದು.

ಕನ್ನಡದ ಸಮೃದ್ಧ ಕಥಾ ಪರಂಪರೆ ಇನ್ನೂ ಹೆಚ್ಚು ಶ್ರೀಮಂತವಾಗಲಿ, ಮತ್ತಷ್ಟು ಮೌಲ್ಯಯುತವಾದ ಕಥೆಗಳು ಹೊರಹೊಮ್ಮಲಿ ಎನ್ನುವುದೇ 'ಬುಕ್ ಬ್ರಹ್ಮ- ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ'ಯ ಮೂಲ ಉದ್ದೇಶವಾಗಿದೆ.

Book Brahma Independence Day Story Competition: First Prize of Rs. 50,000

ಕನ್ನಡ ಕಥಾ ಪ್ರಪಂಚದಲ್ಲಿ ಹಲವು ಮಹತ್ವದ ವಾರ್ಷಿಕ ಸ್ಪರ್ಧೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆ ಝುಳು ಝುಳು ಹರಿವ ನದಿಗೆ ಹೊಸದಾಗಿ ಈಗ 'ಬುಕ್ ಬ್ರಹ್ಮ' ತೊರೆ ಸೇರಲಿದೆ. ಪ್ರತಿ ವರ್ಷ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಸಂಸ್ಥೆಯು ನಡೆಸಲಿದೆ. ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ.

1. ಕತೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.
2. ಕತೆಯು ಅಪ್ರಕಟಿತವಾಗಿರಬೇಕು. ಮುದ್ರಣ ಅಥವಾ ಯಾವುದೇ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
3. ಕತೆಯು 5000 ಪದಗಳಿಗೆ ಮೀರದಂತಿರಬೇಕು.
4. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇಲ್ಲ.
5. ಹಸ್ತಪ್ರತಿ ಅಥವಾ ಟೈಪ್ ಮಾಡಿದ ಕತೆಯಿರುವ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಬಾರದು. ಕತೆ ಮುಗಿದ ನಂತರ ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು.
6. ಕತೆಗಾರರು ನಿಬಂಧನೆಗಳಿಗೆ ಒಪ್ಪಿದ ಮತ್ತು ಸಹಿ ಮಾಡಿದ ಪ್ರತ್ಯೇಕ ಒಂದು ಪತ್ರ ಇಡಬೇಕು.
7. ಬುಕ್‌ಬ್ರಹ್ಮ ಪ್ರೈವೇಟ್ ಲಿಮಿಟೆಡ್ (Book Brahma Private Limited), ಫರ್ಬೆಂಡನ್ ಪ್ರೈವೇಟ್ ಲಿಮಿಟೆಡ್ (Verbinden Private Limited) ಮತ್ತು ಕಾಗ್ನಿಕ್ವೆಸ್ಟ್ ಪ್ರೈವೇಟ್ ಲಿಮಿಟೆಡ್ (Cogniquest Private Limited) ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

Book Brahma Independence Day Story Competition: First Prize of Rs. 50,000

8. ಕನ್ನಡದ ಪ್ರಮುಖ ಕತೆಗಾರರು/ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
9. ಆಯ್ಕೆಗೆ ಸಂಬಂಧಿಸಿದಂತೆ 'ಬುಕ್ ಬ್ರಹ್ಮ' ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.
10. ಕತೆಗಳನ್ನು ಕಳುಹಿಸಲು ಕೊನೆಯ ದಿನ ಬುಧವಾರ, ಜೂನ್‌ 15, 2022.
11. ಶುಕ್ರವಾರ, ಆಗಸ್ಟ್‌ 5, 2022 ರಂದು ಅಂತಿಮ ಸುತ್ತನ್ನು ಪ್ರವೇಶಿಸುವ 20 ಕಥೆಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
12. ಸೋಮವಾರ, ಆಗಸ್ಟ್ 15, 2022 ರಂದು ನಡೆಯಲಿರುವ ಸಮಾರಂಭದಲ್ಲಿ ಅಂತಿಮ ಸುತ್ತಿನ ನಂತರ ಪ್ರಶಸ್ತಿಗಳಿಗೆ ಅರ್ಹವಾದ ಕತೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.

13. ಅಂತಿಮ ಸುತ್ತಿಗೆ ಆಯ್ಕೆಯಾದ 20 ಕತೆಗಳನ್ನು 'ಬುಕ್ ಬ್ರಹ್ಮ' ವೆಬ್‌ಸೈಟ್‌ನಲ್ಲಿ ಹಾಗೂ ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ 20 ಕತೆಗಳ ಪೈಕಿ ಬಹುಮಾನ ಪಡೆಯದೇ ಉಳಿಯುವ 14 ಕತೆಗಳಿಗೆ ತಲಾ 1000 ರೂ. ಗೌರವ ಧನ ನೀಡಲಾಗುವುದು. ಈ ಎಲ್ಲ 20 ಕತೆಗಳ ಹಕ್ಕುಸ್ವಾಮ್ಯ ಕತೆಗಾರರು ಮತ್ತು ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಬ್ಬರಿಗೂ ಜಂಟಿಯಾಗಿ (ಶೇಕಡಾ 50) ಸೇರಿರುತ್ತದೆ.

14. ಒಬ್ಬರು ಒಂದು ಕತೆಯನ್ನು ಮಾತ್ರ ಕಳಿಸಬೇಕು.
15. ಕತೆಗಳನ್ನು ಈ-ಮೇಲ್ ಮೂಲಕ (ನುಡಿ/ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ) [email protected] ಅಥವಾ ಹಸ್ತಪ್ರತಿಯನ್ನು
'ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ
ಮೂರನೇ ಮಹಡಿ, ಆರ್.ಕೆ. ಕಾಂಪ್ಲೆಕ್ಸ್
ಕೆಎಸ್ಎಸ್ಐಡಿಸಿ ಕಾಂಪೌಂಡ್,
ಎಲೆಕ್ಟ್ರಾನಿಕ್ಸ್ ಸಿಟಿ, ಮೊದಲ ಹಂತ,
ಬೆಂಗಳೂರು-560100ಕ್ಕೆ ಕಳುಹಿಸಿಕೊಡಬಹುದು.

English summary
The Book Brahma Independence Day Story Competition 2022 has been organized on the occasion of the 75th Independence Day of India and the third anniversary of the Book Brahma Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X