ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಡರ್ ಕಣ್ಣು ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ

By Prasad
|
Google Oneindia Kannada News

Shivu K, Bangalore
ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ 'ಬೇಂದ್ರೆ ಗ್ರಂಥ ಬಹುಮಾನ-2010' ಪ್ರಕಟಿಸಿದ್ದು, ಲಲಿತ ಪ್ರಬಂಧ, ಕಾವ್ಯ, ಸಣ್ಣಕಥೆ, ಅನುವಾದ, ವಿಮರ್ಶೆ, ರಂಗಭೂಮಿ ವಿಭಾಗದಲ್ಲಿ ಬಹುಮಾನ ಗಳಿಸಿದ ಕೃತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಹುಮಾನ ಗಳಿಸಿದ ಕೃತಿಗಳು ಮತ್ತು ಲೇಖಕರ ಹೆಸರುಗಳು ಕೆಳಗಿನಂತಿವೆ.

ಅವುಗಳಲ್ಲಿ ಲಲಿತ ಪ್ರಬಂಧ ವಿಭಾಗದಲ್ಲಿ ದಟ್ಸ್ ಕನ್ನಡದ ಬರಹಗಾರ ಮತ್ತು ಓದುಗ ಶಿವು ಕೆ ಅವರ ವೆಂಡರ್ ಕಣ್ಣು ಕೃತಿಗೆ ಬಹುಮಾನ ದೊರೆತಿದೆ. ಅಕ್ಟೋಬರ್ 26ರಂದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತಿದೆ.

1. ವಿಭಾಗ : ಲಲಿತ ಪ್ರಬಂಧ, ಕೃತಿ : ವೆಂಡರ್ ಕಣ್ಣು, ಲೇಖಕರು : ಶಿವು.ಕೆ.
2. ವಿಭಾಗ : ಕಾವ್ಯ, ಕೃತಿ : ಜಂಗಮ ಪಕೀರನ ಜೋಳಿಗೆ, ಲೇಖಕರು : ಆರೀಫ್ ರಾಜ.
3. ವಿಭಾಗ : ಸಣ್ಣಕಥೆ, ಕೃತಿ : ಗೋಡೆಗೆ ಬರೆದ ನವಿಲು, ಲೇಖಕರು : ಸಂದೀಪ್ ನಾಯಕ್.
4. ವಿಭಾಗ : ಅನುವಾದ, ಕೃತಿ : ಯಜ್ಞ (ತೆಲುಗಿನಿಂದ ಕನ್ನಡಕ್ಕೆ), ಲೇಖನರು : ಚಿದಾನಂದ ಸಾಲಿ.
5. ವಿಭಾಗ : ವಿಮರ್ಶೆ, ಕೃತಿ : ವಿಸ್ತರಣಾ, ಲೇಖಕರು : ಶ್ರೀಧರ್ ಹೆಗಡೆ ಭದ್ರನ್.
6. ವಿಭಾಗ : ರಂಗಭೂಮಿ (ಜೀವನ ಚರಿತ್ರೆ), ಕೃತಿ: ದಿಗ್ಗಜ ಬಸವರಾಜ ಮನ್ಸೂರ್, ಲೇಖಕರು : ಮಾರ್ತಾಂಡಪ್ಪ ಕತ್ತಿ.

ಅಕ್ಟೋಬರ್ 26, ಮಂಗಳವಾರ ವರಕವಿ ಬೇಂದ್ರೆಯವರ ಮೂವತ್ತನೆಯ ಪುಣ್ಯಸ್ಮೃತಿ ದಿನ 10.30ಕ್ಕೆ "ಪುಸ್ತಕ ಗೌರವ" ಕಾರ್ಯಕ್ರಮವನ್ನು ಬೇಂದ್ರೆ ಭವನ[ಸಾಧನಕೇರಿಯಲ್ಲಿ ಏರ್ಪಡಿಸಿದೆ. ಜಯಂತ ಕಾಯ್ಕಿಣಿ ಮುಖ್ಯ ಅತಿಥಿಯಾಗಿರುವ ಈ ಕಾರ್ಯಕ್ರಮದಲ್ಲಿ ಆರು ಬಹುಮಾನಿತ ಪುಸ್ತಕಗಳ ಕುರಿತು ಮೌಲ್ಯ ಮಾಪಕರಾದ ಡಾ.ರಂಗರಾಜ ವನದುರ್ಗ ಮತ್ತು ಜಗದೀಶ ಮಂಗಳೂರಮಠ ಅವಲೋಕನ ಮಾಡುತ್ತಾರೆ. ಅದೇ ಸಂಜೆ ಆರುಗಂಟೆಗೆ "ಸೃಜನ" ರಂಗಮಂದಿರ[ಕರ್ನಾಟಕ ಕಾಲೇಜು ಆವರಣ]ದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಹಿರಿಯ ಸಾಹಿತಿ ಬೆಳೆಗೆರೆ ಕೃಷ್ಣಶಾಸ್ತ್ರಿಯವರು ಮುಖ್ಯ ಅತಿಥಿಗಳಾಗಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X