ನಿಸಾರ್ ಅಭಿನಂದನಾ ಗ್ರಂಥದ ಬೆಲೆ ಕೇವಲ ರೂ. 1200!
ರವೀಂದ್ರ ಕಲಾಕ್ಷೇತ್ರದಲ್ಲಿ ನಿಸಾರ್ ದಂಪತಿಗಳಿಗೆ ಭಾವಪೂರ್ಣ ಅಭಿನಂದನೆ
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್‌ರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ, ಪುಸ್ತಕ ಹೊರಬಂದಿದೆ. ರೂ.1200 ಮುಖಬೆಲೆಯ ಈ ಪುಸ್ತಕದಲ್ಲಿ ನಿಸಾರ್ ಬದುಕು ಮತ್ತು ಬರಹವನ್ನು ಕುರಿತು, ನಾಡಿನ ಹಿರಿ-ಕಿರಿಯ ಲೇಖಕರು ಬರೆದಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕನ್ನಡ ವಿ.ವಿ. ಕುಲಪತಿ ಡಾ.ಬಿ.ಎ.ವಿವೇಕ ರೈ, ನಿಸಾರ್ ಆಂಗ್ಲರಂತೆ ಸೂಟುಬೂಟು ಧರಿಸಿದರೂ, ಅವರದು ಅಪ್ಪಟ ಕನ್ನಡ ಮನಸ್ಸು ಎಂದು ಶ್ಲಾಘಿಸಿದರು. ದೇಜಗೌ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನಿಸಾರ್ ಅಭಿನಂದನಾ ಸಮಿತಿ ಮತ್ತು ಸಪ್ನ ಬುಕ್ ಹೌಸ್ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದವು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications