ಅರಮನೆ ಮೈದಾನದಲ್ಲಿ 10 ದಿನಗಳ ಪುಸ್ತಕ ಮೇಳ ಆರಂಭ


ಬೆಂಗಳೂರು : ನಗರದ ಅರಮನೆ ಮೈದಾನದ ಆವರಣದಲ್ಲಿ ಶುಕ್ರವಾರದಿಂದ ಪುಸ್ತಕ ಮೇಳ ಆರಂಭಗೊಳ್ಳಲಿದೆ. ಬೇಕಾದ ಎಲ್ಲಾ ಪುಸ್ತಕಗಳೂ ಒಂದೇ ಸೂರಿನಲ್ಲಿ ಲಭ್ಯ. ಹೀಗಾಗಿ ಪುಸ್ತಕ ಪ್ರೇಮಿಗಳಿಗೆ ಈಗ ಸುಗ್ಗಿ ಸಮಯ.

ನ.19ರವರೆಗೂ ನಡೆಯುವ ಪುಸ್ತಕ ಮೇಳಕ್ಕಾಗಿ ದೇಶದ ವಿವಿಧ ಮೂಲೆಗಳಿಂದ ಪ್ರಕಾಶಕರು, ತಮ್ಮ ಪುಸ್ತಕಗಳೊಂದಿಗೆ ಆಗಮಿಸಿದ್ದಾರೆ. ಹತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. 280ಪುಸ್ತಕ ಮಳಿಗೆಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಉರ್ದು, ಇಂಗ್ಲಿಷ್‌ ಸೇರಿದಂತೆ ವಿವಿಧ ಭಾಷೆಗಳ, ವಿವಿಧ ವಿಷಯಗಳ ಪುಸ್ತಕಗಳು ಲಭ್ಯ.

ಯಾವ ಮಳಿಗೆಯಲ್ಲಿ ಯಾವ ಪುಸ್ತಕ ಸಿಗುತ್ತದೆ ಎಂಬ ಮಾಹಿತಿಯನ್ನು, ಪುಸ್ತಕ ಮೇಳದಲ್ಲಿರುವ ಗಣಕಗಳ ಮೂಲಕ ಆಸಕ್ತರು ಹುಡುಕಬಹುದು. ಪ್ರವೇಶ ಶುಲ್ಕ 20ರೂಪಾಯಿ. ವಿದ್ಯಾರ್ಥಿಗಳಿಗೆ ರಿಯಾಯಿತಿಯೂ ಉಂಟು.

ಇಂಟರ್ನೆಟ್‌ ಮತ್ತು ದೃಶ್ಯ ಮಾಧ್ಯಮಗಳ ನಡುವೆಯೂ ಪುಸ್ತಕ ಅಭಿರುಚಿ ಕಡಿಮೆಯಾಗಿಲ್ಲ. ಪುಸ್ತಕ ಮಾರಾಟಕ್ಕೆ ಸಂಬಂಧಿಸಿದಂತೆ, ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.25ರಷ್ಟು ಹೆಚ್ಚಳ ಕಂಡು ಬಂದಿದೆ. ಅಕ್ಷರಗಳ ನಂಟು ಇನ್ನಷ್ಟು ಹೆಚ್ಚಲು, ಪುಸ್ತಕ ಮೇಳಕ್ಕೊಮ್ಮೆ ಭೇಟಿ ನೀಡಿ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು : 41132530/ 22205696.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+