ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದೇಶ ಕಾಲ’ ದ ಜೊತೆಯ ಸಹಯಾತ್ರೆಗೆ ಸ್ವಾಗತ

By Super
|
Google Oneindia Kannada News

ಕರ್ನಾಟಕ ಮತ್ತು ಕನ್ನಡವೆಂಬುದು ಭೌಗೋಳಿಕ ಗಡಿಗಳನ್ನೂ ಮೀರಿ, ಮನಸ್ಸಿನ ಜಾಗವಾಗಿದೆಯೆಂದು ನಿಮ್ಮಲ್ಲಿ ಹಲವರಿಗಾದರೂ ಅನಿಸಿರಬಹುದು. ಅಂಥ ಮನಸ್ಸುಗಳು 'ದೇಶ ಕಾಲ'ದಲ್ಲಿ ಪ್ರಕಟವಾಗುವ ಸಾಹಿತ್ಯ, ನಡೆಯುವ ಚರ್ಚೆ ಮಂಥನಗಳಿಗೆ ತೆರೆದುಕೊಳ್ಳಬೇಕೆಂಬುದು ನಮ್ಮ ಹಂಬಲ. ಈ ಪಾಲ್ಗೊಳ್ಳುವಿಕೆಯಿಂದ ಕನ್ನಡದ ಒಳಹರಿವು ಹೆಚ್ಚಾಗುವುದು ಮತ್ತು ಒಳನೋಟಗಳು ಗಾಢವೂ ವಿಸ್ತಾರವೂ ಆಗುವವು ಎಂಬ ನಂಬಿಕೆಯಿಂದ 'ದೇಶ ಕಾಲ'ವನ್ನು ಜಗತ್ತಿನಾದ್ಯಂತ ಇರುವ ಆಸಕ್ತ ಓದುಗರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ.

ಹೊರನಾಡಿನ ಓದುಗರಿಗೆ 'ದೇಶ ಕಾಲ'ದ ವಾರ್ಷಿಕ ಚಂದಾ ರೂಪಾಯಿ 700(ಏಳುನೂರು). ಇದರಲ್ಲಿ ಚಂದಾ, ಅಂಚೆ ಮತ್ತು ನಿರ್ವಹಣೆಯ ವೆಚ್ಚವೂ ಸೇರಿದೆ. ನಮ್ಮ ಸಂಚಿಕೆಯ ಪುಟಗಾತ್ರಗಳಲ್ಲಿ ಆಗುವ ಬದಲಾವಣೆ, ಅದರಿಂದ ಅಂಚೆಯ ದರದಲ್ಲಿ ಆಗಬಹುದಾದ ವ್ಯತ್ಯಾಸವನ್ನು ಗಮನದಲ್ಲಿರಿಸಿ ಈ ದರ ನಿಗದಿಪಡಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ:

1. ಭಾರತದ ಯಾವುದೇ ಬ್ಯಾಂಕಿನ ಚೆಕ್‌ ಅಥವಾ ಡ್ರಾಫ್ಟ್‌ ಮೂಲಕ ನೀವು ಭಾರತೀಯ ರೂಪಾಯಿಗಳಲ್ಲಿ ಹಣ (ರೂ. 700) ಕಳಿಸಬಹುದು. ಸದ್ಯಕ್ಕೆ ಡಾಲರ್‌ಗಳಲ್ಲಿ ಅಥವಾ ಇತರ ಯಾವುದೇ ಕರೆನ್ಸಿಯಲ್ಲಿ ಹಣ ಸ್ವೀಕರಿಸುವ ವ್ಯವಸ್ಥೆ ಇಲ್ಲ.

2. ಚೆಕ್‌ ಅಥವಾ ಡ್ರಾಫ್ಟ್‌ಗಳು 'ದೇಶಕಾಲ' ದ ಹೆಸರಿನಲ್ಲಿರಬೇಕು. ಈ ಕೆಳಗಿನ ವಿಳಾಸಕ್ಕೆ ಕಳಿಸಿ:

Desha Kaala,
D-1, Victorian Villa,
Alexandra Street,
Richmond Town,
Bangalore 560025, INDIA

3. ಸಂಚಿಕೆಗಳನ್ನು ಕಳಿಸಬೇಕಾದ ವಿಳಾಸ ಮತ್ತು ನಿಮ್ಮ ಇಮೇಲ್‌ ವಿವರವನ್ನು ದಯವಿಟ್ಟು ಸ್ಪಷ್ಟವಾಗಿ ಬರೆಯಿರಿ.

4. ಪ್ರತಿಗಳನ್ನು ನಿಮಗೆ ಪೋಸ್ಟ್‌ ಮಾಡಿದ ದಿನಾಂಕದಂದು ಆ ಕುರಿತು ನಿಮಗೆ ಇಮೇಲ್‌ ಕಳಿಸಲಾಗುವುದು. ಏರ್‌ಮೇಲ್‌ನಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಪ್ರತಿ ತಲುಪುವುದು. ಇದಕ್ಕೂ ತಡವಾದರೆ ನಮ್ಮನ್ನು ಸಂಪರ್ಕಿಸಿ. ನಮ್ಮ ಇಮೇಲ್‌ ವಿಳಾಸ:

English summary
Desha Kaala Overseas subscription information by Vivek Shanbhag, Desha Kaala Editor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X