ಡಾ. ಶಿವರಾಮ ಕಾರಂತರ ಸಮಗ್ರ ಸಾಹಿತ್ಯ ಪ್ರಕಟ
ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಸಮಗ್ರ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿ, ಈಗ ಮಾರಾಟಕ್ಕೆ ಸಿದ್ಧಪಡಿಸಿದೆ.
ಕಾರಂತರ ಸಾಹಿತ್ಯವನ್ನು 22 ಸಂಪುಟಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಒಂದು ಸಂಪುಟದ ಬೆಲೆ 50ರೂಪಾಯಿ. ಎಲ್ಲಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮತ್ತು ಗಾಂಧಿನಗರದ ಎಸ್‌ಬಿಎಸ್ ಪ್ರಕಾಶಕರಲ್ಲಿ ಪುಸ್ತಕಗಳು ಲಭ್ಯ.
ಆಸಕ್ತರು ಪುಸ್ತಕಗಳಿಗಾಗಿ ಸಂಪರ್ಕಿಸ ಬೇಕಾದ ವಿಳಾಸ ಹೀಗಿದೆ :
ನಿರ್ದೇಶನಾಲಯ,
ಕನ್ನಡ ಭವನ,
ಜೆ.ಸಿ.ರಸ್ತೆ,
ಬೆಂಗಳೂರು -2
ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 0802212582/ 2213530
(ಇನ್ಫೋ ವಾರ್ತೆ)












Click it and Unblock the Notifications