10 ಲಕ್ಷಕ್ಕೂ ಅಧಿಕ ಪುಸ್ತಕಗಳು ನಿಮ್ಮ ಬೆರಳತುದಿಗೆ
ನವದೆಹಲಿ : ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು, ಹತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಡಿಜಿಟಲ್ ಲೈಬ್ರರಿಗೆ ಸೇರ್ಪಡೆಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಿದೆ.
ಈ ಪರಿಣಾಮ ಹಲವು ಪುಸ್ತಕಗಳು ಜನಸಾಮಾನ್ಯರ ಬೆರಳ ತುದಿಯಲ್ಲೇ ದೊರೆಯಲಿವೆ. ಅಲ್ಲದೆ ಇದು ಸಾಂಪ್ರದಾಯಿಕ ವೆಬ್ ಸೈಟ್ ಅಥವಾ ಪೋರ್ಟಲ್‌ನಂತೆ ಇರುವುದಿಲ್ಲ. ವಿಶಿಷ್ಟ ಬಗೆಯಲ್ಲಿ ರೂಪುಗೊಳ್ಳಲಿದೆ.
ದೇಶದ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಂಶೋಧನಾ ಸಂಸ್ಥೆಗಳು, ಐಐಟಿಗಳು, ಸಾರ್ವಜನಿಕ ಪತ್ರಾಗಾರ ಮತ್ತು ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿರುವ ಅಮೂಲ್ಯ ಜ್ಞಾನ ಸಂಪತ್ತನ್ನು ಮೊದಲ ಹಂತದಲ್ಲಿ ಕ್ರೋಡೀಕರಿಸಲಾಗುವುದು. ಆನಂತರ ಕಂಪ್ಯೂಟರ್‌ನಲ್ಲಿ ಸ್ಕ್ಯಾನ್ ಮಾಡಿ, ದೇಶಾದ್ಯಂತ ದೊರೆಯುವಂತೆ ಮಾಡಲಾಗುವುದು.
ಇದಕ್ಕಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಕೇಂದ್ರ ಆರಂಭಿಸಿದೆ. ಇದು ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯದ ಕಾರ್ಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಿದೆ.
(ಏಜನ್ಸೀಸ್)












Click it and Unblock the Notifications