ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಶ್ವತ ಸಾಹಿತ್ಯ ಮತ್ತು ದಿನಕರ್‌ ಪುಸ್ತಕ

By Staff
|
Google Oneindia Kannada News

*ಸಿ.ಎನ್‌. ಕೃಷ್ಣಮಾಚಾರ್‌

Veerappans prize Catch : Rajkumar - Most discussed book nowಬರೆದದ್ದು ಬಿಕರಿಯಾಗದೆ ಕಪಾಟಿನಲ್ಲಿ ಕೊಳೆಯುವುದೇ ಶಾಶ್ವತ ಸಾಹಿತ್ಯ ಎನ್ನುತ್ತಿದ್ದರು ರಾಜರತ್ನಂ. ಕರೆದಲ್ಲಿಗೆ ಹೋಗಿ ಭಾಷಣ ಮಾಡುವುದಷ್ಟೇ ಅಲ್ಲ. ತಮ್ಮ ಪುಸ್ತಕಗಳನ್ನು ಅಷ್ಟೋ ಇಷ್ಟೋ ಮಾರಾಟ ಮಾಡಿ ಖರ್ಚು ವೆಚ್ಚವನ್ನು ಅಲ್ಲಲ್ಲಿಗೆ ಸರಿದೂಗಿಸುತ್ತಿದ್ದರು. ಅವರ ಹಾದಿಯನ್ನೇ ತುಳಿದು ಸುನಾಯಾಸವಾಗಿ ಪ್ರಕಟಣೆಯ ವೆಚ್ಚವನ್ನೂ ಗಳಿಸಿ, ಮೇಲೊಂದಿಷ್ಟು ಗಿಟ್ಟಿಸುವ ಕಲೆ ಪಳಗಿಸಿಕೊಂಡವರು ನನ್ನ ಹಿರಿಯ ಮಿತ್ರ ಬಿ. ಎಸ್‌. ಕೇಶವ ರಾವ್‌. ತಮ್ಮ ಉಪನ್ಯಾಸ ಬೇಷರತ್‌ ಚೆನ್ನಾಗಿ ಆಗಬೇಕೆಂದು ಪಟ್ಟು ಹಿಡಿದು ಲೇಖಕರಾಗಿ ತಮ್ಮ ಆರ್ಥಿಕ ಸುಸ್ಥಿತಿಯನ್ನು ಸುಭದ್ರಗೊಳಿಸಿಕೊಂಡಿದ್ದಾರೆ. ಅಭಿನಂದನೆಗಳು.

ಕನ್ನಡ ಲೇಖಕರೇ ತಮ್ಮ ಅಸ್ತಿತ್ವಕ್ಕೆ ಹೀಗೆ ಹೆಣಗಾಡ ಬೇಕಾದರೆ ಇನ್ನು ಸಂಸ್ಕೃತದ ಪಾಡೇನು ? ಮೊನ್ನೆ ಮಹಾಕವಿ ಬಾಲಧ್ವನಿ ಜಗುವಕುಳ ಭೂಷಣರ ಆರು ಕೃತಿಗಳನ್ನು ಪ್ಯಾಕೇಜ್‌ ಡೀಲ್‌ನಲ್ಲಿ ಅರ್ಧಬೆಲೆಗೆ ಕೊಂಡುಕೊಂಡೆ. ಆಯೋಜಕಿ ಡಾ. ಎಸ್‌. ಆರ್‌. ಲೀಲಾ ಹೇಳುತ್ತಾರೆ. ‘ಇಂತಹ ಅಮೂಲ್ಯ ಪುಸ್ತಕಗಳ ಮಾರಾಟಕ್ಕೆ ಕವಿಯ ಶತಮಾನೋತ್ಸವದಂತಹ ಸೂಕ್ತ ಸಂದರ್ಭಗಳಿಗೆ ಕಾಯಬೇಕಾಗಿದೆ. ದಿನವಹಿ ಮಾರಾಟಕ್ಕೆ ಮಾರ್ಗವೆಲ್ಲಿ’ ಕೇಳಿ ಕರುಳು ಚುರುಕ್‌ ಎನ್ನುತ್ತೆ. ಮಹಾಕವಿಗೆ ನಾವು ಕೊಡುವ ಗೌರವ ಇಷ್ಟೇನೆ..?

ಆದರೆ ಇಂಗ್ಲಿಷಿನಲ್ಲಿ Veerappan’s prize catch : Rajkumar ಅಂತಹ ಸೆನ್ಸೇಷನ್‌ ಸಾಹಿತ್ಯಕ್ಕೆ ಜನ ಮೈಲುಗಟ್ಟಲೆ ಸಾಲುಗಟ್ಟುತ್ತಾರೆ. ಪುಸ್ತಕವನ್ನು ಮುಟ್ಟುಗೋಲು ಹಾಕಿದರೆ ಕಾಳಸಂತೆಗೆ ದುಂಬಾಲುಬೀಳುತ್ತಾರೆ. ಏನಿದೀ ವಿಪರ್ಯಾಸ ! ಜತೆಗೆ ಗೆಳೆಯ ರವಿಬೆಳಗೆರೆ ಪುಸ್ತಕದ ಆವಿಷ್ಕರಣಕ್ಕೆ ಮುಂಚೆಯೇ ಮಹೋನ್ನತ ಪ್ರಸ್ತಾವನೆ ಬರೆಯುತ್ತಾರೆ.

ಬೆಲೆ ದುಬಾರಿಯಾಗದೆ ಬಿಟ್ಟೀತೆ ? ರವಿ ಬೆಳಗೆರೆಯ ಬರಹ ಬೇರೆ ಸಂದರ್ಭಗಳಲ್ಲಿ ಖುಷಿ ಕೊಡುವುದಕ್ಕೆ ಮೂರು ಕಾರಣ ಇದೆ- ಭಾಷೆ, ತರ್ಕ, ಪ್ರಾಮಾಣಿಕತೆ.

ಆದರೆ, ದಿನಕರ್‌ ಅವರ ಖಾಸಗಿ ಆಕ್ರೋಶ ಕಕ್ಕುವುದಕ್ಕೆ ರವಿ, ಈ ಮೂರು ತಂತ್ರಗಳನ್ನು ಬಳಸಿ ಸೊಪ್ಪು ಹಾಕುವ ಅಗತ್ಯವಿರಲಿಲ್ಲ. Himalayan Blunderಗೂ ಈ ಪುಸ್ತಕಕ್ಕೂ ಅಜಗಜಾಂತರ.

ದಿನಕರ್‌ ಒಬ್ಬ ಪ್ರಾಮಾಣಿಕ, ಬಂಡಾಯ ಪ್ರವೃತ್ತಿಯ ಪೊಲೀಸ್‌ ಅಧಿಕಾರಿ. ಸೆಣಸಿ ಮೇಲಕ್ಕೆ ಬಂದವರು. ಹೋರಾಡಿ ಮಹಾ ನಿರ್ದೇಶಕರಾದವರು. ಸಾಹಿತ್ಯ ಅವರಿಗೆ ಹೊಸತು. ಹಾಗಾಗಿ ಲೇಖನದ ವೃತ್ತಿ ಧರ್ಮ ಮರೆತು ಪೂವಾಗ್ರಹಕ್ಕೆ ಪಕ್ಕಾದಂತಿದೆ. ಎಲ್ಲೋ ದುಡುಕಿದಂತಿದೆ. ಡಾ. ರಾಜ್‌ಕುಮಾರ್‌ ಪ್ರಕರಣದಲ್ಲಿ ನಾಡು ಬಯಸಿದ್ದು ಒಬ್ಬ ಮಹಾನ್‌ ಕಲಾವಿದನ ಕ್ಷೇಮಪೂರ್ಣ ಸಜೀವ ವಾಪಸಾತಿ. ಆ ನಿಟ್ಟಿನಲ್ಲಿ ಸರಕಾರ ಏನೇ ಸಕ್ರಮ-ಅಕ್ರಮ ಮಾರ್ಗೋಪಾಯ ಹುಡುಕಿದರೂ ಅವೆಲ್ಲವೂ ಕ್ಷಮ್ಯ.

ಇನ್ನು ರಾಜ್‌ಕುಮಾರ್‌ - ಭಾನು ಭೇಟಿಯ ವಿವರಗಳು not in the good state. ಪ್ರಕರಣದ ತೆರೆ ಸರಿದು ಎರಡು ವರ್ಷಗಳ ನಂತರ ಕೆಂಡದ ಮೇಲಿನ ಬೂದಿಗೆ ಬೀಸಣಿಗೆ ಹಾಕುವ ತುರ್ತು ಇತ್ತೇ ?

ದಿನಕರ್‌ ಸಾಹೇಬರೇ- ಸತ್ಯಂ ಬ್ರೂಯಾತ್‌, ಪ್ರಿಯಂ ಬ್ರೂಯಾತ್‌, ನಬ್ರೂಯಾತ್‌ ಸತ್ಯಮಪ್ರಿಯಂ- ಏಡಮೊಳಿ ಪುರಿಯುಂ ದಾನೆ ?!

(ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X