ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನಬಂಡಿಯಲ್ಲಿನ ಸಲಕರಣೆಗಳು ಏನು ಮಾಡಲಿವೆ

By ಪ್ರಶಾಂತ ಸೊರಟೂರ
|
Google Oneindia Kannada News

[ಓದುವ ಮುನ್ನ : ಇದು ಅಚ್ಚಕನ್ನಡದ ಆಡುಭಾಷೆ] ಬಾನಬಂಡಿಯನ್ನು ನಡೆಸಲು ಬೇಕಾದ ಕಸುವು ನೀಡುವ ನೇಸರ ಪಟ್ಟಿಗಳು, ಉರುವಲು ತೊಟ್ಟಿ ಮತ್ತು ಇಸ್ರೋ ನೆಲೆಯೊಂದಿಗೆ ಒಡನಾಡಲು ಬೇಕಾದ ನಿಲುಕುಗಳ ಜತೆಗೆ ಬಾನಬಂಡಿಯಲ್ಲಿ ಕೆಳಗಿನ ಸಲಕರಣೆಗಳನ್ನು ಅಳವಡಿಸಲಾಗಿದೆ.

1. ಲೇಮನ್ ಅಲ್ಪಾ ಬೆಳಕಿನಳಕ (Lyman-Alpha Photometer-LAP): ಈ ಸಲಕರಣೆಯು ಮಂಗಳದ ಸುತ್ತಣದಲ್ಲಿ ಡಿಟೋರಿಯಮ್ ಮತ್ತು ಹಯಡ್ರೋಜನ್‍ಗಳ ಪ್ರಮಾಣವನ್ನು ಅಳೆಯಲಿದೆ. ಇದರಿಂದಾಗಿ ಮಂಗಳದಲ್ಲಿರುವ ನೀರು ಕಾಣಿಯಾದ ಬಗೆಯನ್ನು ತಿಳಿಯಲು ನೆರವಾಗುತ್ತದೆ.

2. ಮಂಗಳದ ಮಿತೇನ್ ತಿಳಿಯುಕ (Methane sensor for Mars-MSM): ಈ ಸಲಕರಣೆಯಿಂದ ಮಂಗಳದ ಮೇಲ್ಮೆಯಲ್ಲಿರುವ ಮಿತೇನ್ ಪ್ರಮಾಣವನ್ನು ಅಳೆಯಲಾಗುವುದು.

Mars mission by ISRO : All you need to know

3. ಮಂಗಳ ಹೊರಸುತ್ತಣ ಒರೆಹಚ್ಚುಕ (Mars exospheric neutral composition analyzer-MENCA): ಇದು ಮಂಗಳದ ಹೊರ ಹೊದಿಕೆಯಲ್ಲಿನ ವಸ್ತುಗಳನ್ನು ಒರೆಗೆಹಚ್ಚಲಿದೆ.

4. ಮಂಗಳದ ಬಣ್ಣದ ತಿಟ್ಟುಕ (Mars color camera-MCC): ಇದನ್ನು ಬಳಸಿ ಮಂಗಳ ಮೇಲ್ಮೆ ಮತ್ತು ಅದರ ಸುತ್ತಣದಲ್ಲಿ ಕಂಡುಬರುವ ಇತರ‍ ವಸ್ತುಗಳ ತಿಟ್ಟಗಳನ್ನು ಸೆರೆಹಿಡಿಯಲಾಗುವುದು. ಜತೆಗೆ ಮಂಗಳದ ಮರಿ-ಸುತ್ತುಗಗಳಾದ ಪೋಬೋಸ್ ಮತ್ತು ಡಿಮೋಸ್ ಕುರಿತಾಗಿಯೂ ಮಾಹಿತಿಯನ್ನು ಕಲೆಹಾಕಲಾಗುವುದು.

5. ಬಿಸುಪು ಸೂಸಳೆಯುಕ (Thermal infrared imaging spectrometer-TIS): ಇದರಿಂದ ಮಂಗಳದ ಮೇಲ್ಮೆ ಸೂಸುವ ಬಿಸುಪು ಅಳೆಯಲಾಗುವುದು. ಇದರ ನೆರವಿನಿಂದ ಮಂಗಳದಲ್ಲಿರುವ ಮಣ್ಣು ಮತ್ತು ಅದಿರುಗಳ ಗುಣಗಳನ್ನು ತಿಳಿದುಕೊಳ್ಳಲಾಗುವುದು.

ಬಾನರಿಮೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಿಡಲು ಅಣಿಯಾಗಿರುವ ನಮ್ಮ ಇಸ್ರೋ ಕೂಟಕ್ಕೆ ಗೆಲುವಾಗಲೆಂದು ಹಾರಯ್ಸೋಣ.

(ತಿಳಿವಿನ ಮತ್ತು ತಿಟ್ಟಗಳ ಸೆಲೆಗಳು: ಇಸ್ರೋ ಮಿಂಬಲೆದಾಣ, ವಿಕಿಪೀಡಿಯಾ) [ಕೃಪೆ : ಹೊನಲು ಡಾಟ್ ನೆಟ್]

English summary
Mars mission by ISRO : All you need to know. ISRO launched PSLV C-25 on 5th November to explore Mars from Sriharikota, Andhra Pradesh. Honalu.net, a Kannada blog dedicated to Kannada language throws more light on the mission. Enjoy reading different kind of Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X