ಮಂಗಳದ ತಿರುಗುದಾರಿಯಲ್ಲಿ ಮೂರು ಹಂತದ ಕೆಲಸ
[ಓದುವ ಮುನ್ನ : ಇದು ಅಚ್ಚಕನ್ನಡದ ಆಡುಭಾಷೆ] ಬಾನಬಂಡಿಯನ್ನು ಮಂಗಳದ ತಿರುಗುದಾರಿಯಲ್ಲಿ ಸೇರಿಸುವ ಕೆಲಸ ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರು ಹಂತಗಳನ್ನು ಕೆಳಗಿನ ತಿಟ್ಟದಲ್ಲಿ ತೋರಿಸಲಾಗಿದೆ.
1. ನೆಲ ನಡುವಣದ ಹಂತ (Geo Centric Phase): ಈ ಹಂತದಲ್ಲಿ ಏರುಬಂಡಿ ತನ್ನ 6 ಮುಕ್ಯ ಬಿಣಿಗೆಗಳ ನೆರವಿನೊಂದಿಗೆ ಬಾನಬಂಡಿಯನ್ನು 918,347 ಕಿ.ಲೋ. ದೂರದಲ್ಲಿ ನೆಲದಂಚಿನ ಮೊಟ್ಟೆಯಾಕಾರದ ತಿರುಗುದಾರಿಯಲ್ಲಿ ಚಿಮ್ಮಲಿದೆ. ಅಲ್ಲಿಂದ ಬಾನಬಂಡಿ ತನ್ನದೇ ಕಸುವಿನಿಂದ ಮಂಗಳದೆಡೆಗೆ ಸಾಗಬೇಕು. ಇಸ್ರೋದ ಮುಂದಿರುವ ದೊಡ್ಡ ಸವಾಲೆಂದರೆ ತುಂಬಾ ಕಡಿಮೆ ಉರುವಲು ಬಳಸಿ ಬಾನಬಂಡಿಯನ್ನು ಮಂಗಳದ ತಿರುಗುದಾರಿಯವರೆಗೆ ಸಾಗಿಸುವುದು.
ಇದಕ್ಕಾಗಿ 'ಹೋಮನ್ ಸಾಗಾಣಿಕೆಯ ತಿರುಗುದಾರಿ' (Hohmann transfer orbit) ಇಲ್ಲವೇ 'ಎಲ್ಲಕ್ಕಿಂತ ಕಡಿಮೆ ಕಸುವಿನ ಸಾಗಾಣಿಕೆಯ ತಿರುಗದಾರಿ' (minimum energy transfer orbit) ಎಂದು ಕರೆಯಲಾಗುವ ಬಗೆಯನ್ನು ಇಸ್ರೋ ಆಯ್ದುಕೊಂಡಿದೆ. ಈ ಬಗೆಯಲ್ಲಿ ಬಾನಬಂಡಿಯು 'ಮೊಟ್ಟೆಯಾಕಾರದ' (elliptical) ದಾರಿಯಲ್ಲಿ ಸಾಗಿ ನೆಲಕ್ಕಿಂತ ಬೇರೆ ಎತ್ತರದಲ್ಲಿರುವ ಮಂಗಳದ ತಿರುಗುದಾರಿಯನ್ನು ಸೇರಲಿದೆ.

2. ನೇಸರ ನಡುವಣದ ಹಂತ (Helio Centric Phase): ತನ್ನ ಪಯಣದ ಕೊನೆಯಲ್ಲಿ ಬಾನಬಂಡಿಯು ಮಂಗಳದ ತಿರುಗುದಾರಿಯನ್ನು, ಮಂಗಳ ಅಲ್ಲಿರುವಾಗಲೇ ಸೇರಲಿದೆ. ಈ ಬಗೆಯಲ್ಲಿ ಮಂಗಳ ಹತ್ತಿರವಾಗುವುದು ಎರಡು ವರಶಕ್ಕೊಮ್ಮೆ. ನೇಸರ, ನೆಲ ಮತ್ತು ಮಂಗಳ ಒಂದಕ್ಕೊಂದು 44 ಡಿಗ್ರಿ ಕೋನದಲ್ಲಿ ಬಂದಾಗ ಇಂತ ಆಗುಹ ನಡೆಯುತ್ತದೆ.
3. ಮಂಗಳಿಗರ ಹಂತ (Martian Phase): ಜಗತ್ತಿನ ಹಲವಾರು ಕಟ್ಟುಕತೆಗಳಲ್ಲಿ ಮಂಗಳದಲ್ಲಿ ನಮ್ಮಂತೆ ಜೀವಿಗಳಿವೆ ಅನ್ನುವ ಕತೆಗಳನ್ನು ಹೆಣೆಯಲಾಗಿದ್ದು, ಮಂಗಳದ ಜೀವಿಗಳನ್ನು ಮಂಗಳಿಗರು (Martians) ಅಂತಾ ಕರೆಯಲಾಗುತ್ತದೆ. ಅರಿಮೆಯ ನೆಲದಲ್ಲಿ ಈ ಪದವನ್ನು ಮಂಗಳದ ಎಲ್ಲೆಯನ್ನು ಗುರುತಿಸಲು ಬಳಸಲಾಗುತ್ತದೆ.
ಈ ಎಲ್ಲೆ ಮಂಗಳದ ಸುತ್ತ 5,73,473 ಕಿ.ಮೀ.ವರೆಗೆ ಹರಡಿಕೊಂಡಿದೆ. ಇಸ್ರೋದ ಬಾನಬಂಡಿ ತನ್ನ ಮೂರನೇ ಹಂತದಲ್ಲಿ ಮಂಗಳಿಗರ ಈ ಪ್ರದೇಶವನ್ನು ಹೊಕ್ಕಲಿದ್ದು, ಅಲ್ಲಿಂದ ಮಂಗಳದ ಸುತ್ತ ತಿರುಗುತ್ತ ತನ್ನ ಕೆಲಸವನ್ನು ಆರಂಬಿಸಲಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications