ಮಂಗಳ, ಮನುಶ್ಯರ ಕುತೂಹಲ ಕೆರಳಿಸುತ್ತಿರುವ ಸುತ್ತುಗ
[ಓದುವ ಮುನ್ನ : ಇದು ಅಚ್ಚಕನ್ನಡದ ಆಡುಭಾಷೆ] ಮಂಗಳ, ನೆಲದಾಚೆಗಿನ ಬದುಕಿನ ಹುಡುಕಾಟದಲ್ಲಿ ಮನುಶ್ಯರ ಕುತೂಹಲ ಆಗಾಗ ಕೆರಳಿಸುತ್ತಿರುವ ಸುತ್ತುಗ. ಬದುಕಿಗೆ ಎಲ್ಲಕ್ಕಿಂತ ಮುಕ್ಯವಾಗಿ ಬೇಕಾದ ನೀರು, ಮಂಗಳದಲ್ಲಿ ಇರಬಹುದು ಇಲ್ಲವೇ ಒಂದು ಕಾಲಕ್ಕೆ ಇದ್ದಿರಬಹುದು ಅನ್ನುವಂತ ವಿಶಯಗಳು ಅರಕೆಯಲ್ಲಿ ಆಗಾಗ ಕಂಡುಬಂದಿವೆ. ಆದರೆ ಮಂಗಳದಲ್ಲಿರುವ ತುಂಬಾ ಕಡಿಮೆ ಒತ್ತಡದಿಂದಾಗಿ ನೀರು ಒಂದು ವೇಳೆ ಇದ್ದರೂ, ಅದು ತುಂಬಾ ಗಟ್ಟಿ ರೂಪದಲ್ಲಿಯೇ ಇರಬಹುದು. ಇದರಿಂದಾಗಿ ಜೀವಿಗಳು ಹುಟ್ಟಲು ಮತ್ತು ಬದುಕುಳಿಯಲು ತುಂಬಾ ಪಾಡು ಪಡಬೇಕಾಗುತ್ತದೆ.
ಬದುಕು, ಬದುಕುಳಿಯುವಲ್ಲಿ ಏನೇ ತೊಡಕುಗಳಿದ್ದರೂ ಮಂಗಳ ಕುರಿತಾದ ಅರಕೆಯಂತೂ ಇನ್ನೂ ಬಿರುಸಾಗಿಯೇ ಮುಂದುವರೆಯುತ್ತಿದೆ. ಇದಕ್ಕೆ ಮುಕ್ಯ ಕಾರಣವೆಂದರೆ ನೇಸರ ಕೂಟದಲ್ಲಿ ಬದುಕುಳಿಯಲು ಬೇಕಾದಂತಹ ತಕ್ಕಮಟ್ಟಿನ ಸುತ್ತಣವನ್ನು ಹೊಂದಿರಬಹುದಾದ 'ನೆಲೆಯೊಡಲು' (habitable zone) ಶುಕ್ರ ಸುತ್ತುಗದಿಂದ ಹಿಡಿದು ಮಂಗಳದ ಅರ‍್ದ ಬಾಗದವರೆಗೆ ಹರಡಿಕೊಂಡಿರುವುದು.

'ಮಂಗಳ ಸುತ್ತುವ ಹಮ್ಮುಗೆ' (Mars Orbiter Mission - MOM) ಎಂದು ಹೆಸರಿಸಲಾಗಿರುವ ಈ ಹಮ್ಮುಗೆಯಲ್ಲಿ, ಬಾನಬಂಡಿ ಸುಮಾರು 299 ದಿನಗಳ ಪಯಣದ ನಂತರ ಮಂಗಳದ ತಿರುಗುದಾರಿಯನ್ನು ಸೇರಲಿದ್ದು, ಆ ತಿರುಗುದಾರಿಯಲ್ಲಿ ಸುತ್ತುತ್ತಾ ಮಂಗಳದ ಕುರಿತು ವಿಶಯಗಳನ್ನು ತಿಳಿಸಲಿದೆ.
ನೆಲದಾಚೆಗೆ ಇಶ್ಟೊಂದು ದೂರದಲ್ಲಿ ಬಾನಬಂಡಿಯನ್ನು ಕಳಿಸುತ್ತಿರುವುದು ಇಸ್ರೋದ ಮಟ್ಟಿಗೆ ಇದೇ ಮೊದಲು. ಹಾಗಾಗಿ ಮಂಗಳ ಸುತ್ತುಗದ ಕುರಿತಾಗಿ ತಿಳಿದುಕೊಳ್ಳುವುದರ ಜತೆಗೆ ಅಲ್ಲಿಗೆ ಬಾನಬಂಡಿಯನ್ನು ಕಳುಹಿಸಲು ಮತ್ತು ಅಶ್ಟು ದೂರದವರೆಗೆ ಬಾನಬಂಡಿಯೊಂದಿಗೆ ಒಡನಾಡಲು ಬೇಕಾದ ಚಳಕಗಳನ್ನು ಕಯ್ಗೂಡಿಸಿಕೊಳ್ಳುವುದು ಇಸ್ರೋದ ಮುಕ್ಯ ಗುರಿ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications