ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಸುತ್ತುಗದೆಡೆ ಚಿಮ್ಮಿದ ಇಸ್ರೋದ ಬಾನಬಂಡಿ

By ಪ್ರಶಾಂತ ಸೊರಟೂರ
|
Google Oneindia Kannada News

ಗ್ರಾಂತಿಕ ಬಾಶೆಯನ್ನು ಅತ್ಲಾಗಿಟ್ಟು ಆಡುಮಾತಿನಲ್ಲೇ ಬರೆದ ಬರಹವನ್ನು ಓದುವುದೇ ಒಂದು ಆನಂದ. ಇದು ವಿಚಿತ್ರವೆನಿಸಬಹುದು. ಆದರೆ, ಅಚ್ಚಕನ್ನಡದ ಪದಗಳನ್ನೇ ಬಳಸಿ ಲೇಕನಗಳನ್ನು ಬರೆಯುವ 'ಎಲ್ಲರಕನ್ನಡ' ಎಂಬ ಚಳುವಳಿಯೊಂದು ಅಂತರಜಾಲದಲ್ಲಿ ಆರಂಭವಾಗಿದೆ. ಮಂಗಳಯಾನ ಕುರಿತ ಲೇಕನವನ್ನು ಕೂಡ ಅದೇ ಬಾಶೆಯನ್ನು ಬಳಸಿ ಬರೆಯಲಾಗಿದೆ. ಗ್ರಾಂತಿಕ ಬಾಶೆಯನ್ನು ಇಶ್ಟಪಡುವವರು ಇಲ್ಲಿ ಕಾಗುಣಿತ ತಪ್ಪುಗಳನ್ನು ಹುಡುಕುವ ಬದಲು ಓದುವ ಆನಂದದಲ್ಲಿ ತಲ್ಲೀನರಾಗಬೇಕೆಂದು ವಿನಂತಿ. - ಸಂಪಾದಕ.

ಮಂಗಳವಾರ, 05.11.2013, ಏರುಹೊತ್ತು 2.38ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ ಕಸುವನ್ನು ಎತ್ತಿ ತೋರಿಸಲಿದೆ. ಇಸ್ರೋ ಕಯ್ಗೊಂಡಿರುವ ಈ ಹಮ್ಮುಗೆಯ ಕುರಿತು ತಿಳಿದುಕೊಳ್ಳುವ ಮುನ್ನ ಮಂಗಳ ಸುತ್ತುಗದ ಬಗ್ಗೆ ತುಸು ತಿಳಿದುಕೊಳ್ಳೋಣ ಬನ್ನಿ.

Mars mission by ISRO : All you need to know - part1

ಮಂಗಳ, ನೇಸರ ಕೂಟದಲ್ಲಿನ (solar system) ಎರಡನೇ ಚಿಕ್ಕ ಸುತ್ತುಗ. (ಬುದ ಎಲ್ಲಕ್ಕಿಂತ ಚಿಕ್ಕದು) ನೆಲಕ್ಕಿಂತ ಮಂಗಳವು ನೇಸರನಿಂದ ಹೆಚ್ಚಿಗೆ ದೂರದಲ್ಲಿದ್ದು, ನೇಸರನಿಂದ ಅದರ ಸರಾಸರಿ ದೂರ 1.5 ಬಾನಳತೆ (Astronomical Unit - AU) ಅಂದರೆ ಸುಮಾರು 23,00,00,000 ಕಿಲೋ ಮೀಟರಗಳಾಗಿವೆ.

ಮಂಗಳ ತನ್ನದೇ ಸುತ್ತ ಒಂದು ಸುತ್ತ ತಿರುಗಲು ಸರಿ ಸುಮಾರು ನೆಲದಶ್ಟೇ ಹೊತ್ತನ್ನು ತೆಗೆದುಕೊಳ್ಳುವುದರಿಂದ, ಅದರ ಒಂದು ದಿನ ಸುಮಾರು ನೆಲದಶ್ಟು ಅಂದರೆ 24 ಗಂಟೆಗಳ ಗಡುವು ಹೊಂದಿದೆ. ನೇಸರನ ಸುತ್ತ ಒಂದು ಸುತ್ತು ಹಾಕಲು ಮಂಗಳಕ್ಕೆ ಸುಮಾರು 687 ದಿನಗಳು ಬೇಕು. ಹಾಗಾಗಿ ಅದರ ಒಂದು ವರುಶದಲ್ಲಿ 687 ದಿನಗಳಿರುತ್ತವೆ. ದುಂಡಳತೆಯಲ್ಲಿ ನೆಲಕ್ಕಿಂತ ಸುಮಾರು ಅರ‍್ದದಶ್ಟಿರುವ ಮಂಗಳದ ರಾಶಿ (mass) ನೆಲದ 11% ರಶ್ಟಿದೆ.

ಮಂಗಳದ ಮೇಲ್ಮೆ ತುಂಬಾ ಚಳಿಯಿಂದ ಕೂಡಿದ್ದು, ಅದರ ಸರಾಸರಿ ಬಿಸುಪು (temperature) -63 ಡಿ.ಸೆ. ಆಗಿದೆ. ನೆಲದಂತೆ ಮಂಗಳವೂ ಕೂಡ ಹಲವಾರು ಬಗೆಯ ಜಲ್ಲಿ, ಅದಿರುಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಮಂಗಳ ಸುತ್ತುಗದ ಮೇಲ್ಮೆಯ ಹೆಚ್ಚಿನ ಪಾಲು ಕಬ್ಬಿಣದ ಆಕ್ಸಾಯಡ್‍ನಿಂದ ಕೂಡಿದುದರಿಂದಾಗಿ ಅದರ ಮಯ್ ಬಣ್ಣ ಕೆಂಪಾಗಿ ಕಾಣುತ್ತದೆ. ಹಾಗಾಗಿ ಇದನ್ನು 'ಕೆಂಪು ಸುತ್ತುಗ' (Red Planet) ಅಂತಾನೂ ಕರೆಯುತ್ತಾರೆ.

English summary
Mars mission by ISRO : All you need to know. ISRO launched PSLV C-25 on 5th November to explore Mars from Sriharikota, Andhra Pradesh. Honalu.net, a Kannada blog dedicated to Kannada language throws more light on the mission. Enjoy reading different kind of Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X