ಸಾಮಾನ್ಯಳಿಗೋಸ್ಕರ ಕಾದು ನಿಂತ ಅಸಾಮಾನ್ಯ

ಮೂರ್ತಿಯನ್ನು ಕಾಯುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಆದರೆ ಜೆ ಆರ್ ಡಿಯವರು ನನ್ನ ಜೊತೆ ಕಾಯುತ್ತಿದ್ದುದು ತುಂಬಾ ಮುಜುಗರವಾಗುತಿತ್ತು. ನಾನು ಆತಂಕಪೀಡಿತಳಾಗಿದ್ದೆ. ನನ್ನ ಕಣ್ಣಿನ ತುದಿಯಿಂದ ಅವರನ್ನು ನೋಡಿದೆ. ಅವರು ಸಾದಾ ಬಿಳಿ ಅಂಗಿ ಮತ್ತು ಪ್ಯಾಂಟನ್ನು ಧರಿಸಿದ್ದರು. ಅವರಿಗೆ ವಯಸ್ಸಾಗಿತ್ತು, ಆದರೂ ಅವರ ಮುಖ ವರ್ಚಸ್ಸಿನಿಂದ ಹೊಳೆಯುತ್ತಿತ್ತು. ಅವರೇನೂ ಗರ್ವದಿಂದ ಬೀಗುತ್ತಿರಲಿಲ್ಲ. ನಾನು ಯೋಚಿಸುತ್ತಿದ್ದೆ, ಈ ಮನುಷ್ಯ ನಿಜವಾಗಿಯೂ ಅಸಾಮಾನ್ಯ! ಇವರು ದೊಡ್ಡ ಕಂಪೆನಿಗಳ ಸಮುಚ್ಚಯದ ಮುಖ್ಯಸ್ಥರು, ಇಡೀ ದೇಶವೇ ಗೌರವಿಸುವಂತಹ ವ್ಯಕ್ತಿತ್ವ ಉಳ್ಳವರು. ಈಗ ಒಬ್ಬ ಸಾಮಾನ್ಯ ನೌಕರಳಿಗೋಸ್ಕರ ಕಾಯುತ್ತಾ ನಿಂತಿದ್ದಾರೆ!
ಆಗ ಮೂರ್ತಿ ಹೊರಗಡೆ ಬಂದರು. ನಾನೂ ಹೋಗಲು ತೊಡಗಿದೆ. ಆಗ ಜೆ ಆರ್ ಡಿ ಹೇಳಿದರು "ಇನ್ನು ಮುಂದೆ ಹೆಂಡತಿಯನ್ನು ಕಾಯಿಸಬಾರದಾಗಿ ನಿನ್ನ ಗಂಡನಿಗೆ ಹೇಳು".
ನಾನು 1982ರಲ್ಲಿ ಟೆಲ್ಕೋಗೆ ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು. ನನಗೆ ಆ ಕಂಪನಿಯನ್ನು ಬಿಡಲು ಕಿಂಚಿತ್ತೂ ಇಷ್ಟವಿರಲಿಲ್ಲ. ಆದರೆ ನನಗೆ ಬೇರೆ ದಾರಿಯಿರಲಿಲ್ಲ. ನಾನು ನನ್ನ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಬಾಂಬೆ ಹೌಸ್ ನ ಮೆಟ್ಟಿಲಿಳಿದು ಹೊರಬರುತ್ತಿದ್ದಾಗ ಜೆ ಆರ್ ಡಿ ಯವರು ಕಾಣಿಸಿಕೊಂಡರು. ಅವರು ಯಾವುದೋ ಆಲೋಚನೆಯಲ್ಲಿ ಮುಳುಗಿದಂತೆ ಕಂಡರು. ವಿದಾಯ ಹೇಳಲು ನಿಂತುಕೊಂಡೆ. ನನ್ನನ್ನು ನೋಡಿ ಅವರೂ ನಿಂತರು.
ಮೆಲ್ಲಗೆ ಹೇಳಿದರು "ಶ್ರೀಮತಿ ಕುಲಕರ್ಣಿಯವರೇ, ನೀವೇನು ಮಾಡುತ್ತಿರುವಿರಿ?" (ಅವರು ಹಾಗೆಯೇ ನನ್ನನ್ನು ಸಂಬೋಧಿಸುತ್ತಿದ್ದರು)
ಸಾರ್, ನಾನು ಟೆಲ್ಕೋ ಬಿಡುತ್ತಿದ್ದೇನೆ ಎಂದೆ.
"ನೀವೆಲ್ಲಿಗೆ ಹೋಗುತ್ತಿರುವಿರಿ?" ಎಂದು ಕೇಳಿದರು.
ಪುಣೆಗೆ ಸರ್. ನಮ್ಮ ಯಜಮಾನರು ಇನ್ಫೋಸಿಸ್ ಎಂಬ ಕಂಪನಿಯನ್ನು ಶುರು ಮಾಡಿದ್ದಾರೆ. ಹೀಗಾಗಿ ನಾವು ಪುಣೆಗೆ ಹೋಗುತ್ತಿದ್ದೇವೆ.
"ಓಹ್, ಹೌದಾ? ನೀವು ಯಶಸ್ಸು ಗಳಿಸಿದ ನಂತರ ಏನು ಮಾಡುವಿರಿ?"
ನಾನು ಹೇಳಿದೆ- ಸರ್, ನಮಗೆ ಯಶಸ್ಸು ದೊರಕುವುದೋ ಇಲ್ಲವೋ ನನಗೆ ತಿಳಿದಿಲ್ಲ"
"ಅಪನಂಬಿಕೆ ಬೇಡ. ಸದಾ ಆತ್ಮವಿಶ್ವಾಸದಿಂದ ಕೆಲಸವನ್ನು ಆರಂಭಿಸಿರಿ. ಯಶಸ್ಸು ಖಂಡಿತ ಸಿಗುತ್ತದೆ. ಯಶಸ್ಸು ಲಭ್ಯವಾದ ಮೇಲೆ ನಾವು ಸಮಾಜದ ಋಣವನ್ನು ತೀರಿಸಬೇಕು. ಸಮಾಜ ನಮಗೆ ಎಷ್ಟೊಂದು ಕೊಡುತ್ತದೆ; ನಾವದನ್ನು ಮರೆಯದೇ ಹಿಂತಿರುಗಿಸಬೇಕು. ನಿಮಗೆಲ್ಲಾ ಒಳ್ಳೆಯದಾಗಲಿ". ಹೀಗೆ ಹೇಳುತ್ತಾ ಜೆ ಆರ್ ಡಿ ಮೆಟ್ಟಿಲೇರತೊಡಗಿದರು. ನಾನು ಅಲ್ಲಿಯೇ ನಿಂತಿದ್ದೆ. ಹಾಗೇ ಎಷ್ಟು ಹೊತ್ತು ನಿಂತಿದ್ದೆನೋ ನನಗೆ ತಿಳಿಯದು. ಅವರನ್ನು ನಾನು ನೋಡಿದುದು ಅದೇ ಕೊನೆಯ ಸಲ.











Click it and Unblock the Notifications