ಹಾವು ಕಡಿತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮದ್ದು
ವಿಷಕಾರಿ ಹಾವುಗಳಿಂದ ವಾರ್ಷಿಕವಾಗಿ ಸುಮಾರು 100,000 ಸಾವಿನ ಪ್ರಕರಣಗಳು ಕಂಡು ಬಂದಿದ್ದು, ಈ ಸಂಖ್ಯೆಯನ್ನು ತಗ್ಗಿಸಲು ಈ ವೆಬ್ ಸೈಟ್ ಶ್ರಮಿಸಲಿದೆ. ಪ್ರತಿ ವರ್ಷವಿಷಕಾರಿ ಹಾವಿನ ಕಡಿತಕ್ಕೆ ಒಳಗಾಗುವ ಸುಮಾರು 2.5 ಮಿಲಿಯನ್ ಜನರಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಿಯ ಸಂಪೂರ್ಣ ದತ್ತಾಂಶವನ್ನು ಈ ವೈಬ್ ಸೈಟ್ ಹೊಂದಿರುತ್ತದೆ ಎಂದು ಯುಎನ್ ಆರೋಗ್ಯ ಏಜೆನ್ಸಿ ಹೇಳಿದೆ.
ಈಗ ಹಾವು ಕಡಿತಕ್ಕೆ ಲಭ್ಯವಿರುವ ಅನೇಕ ಔಷಧಿಗಳಲ್ಲಿ (Anti venoms) ಹೆಚ್ಚಿನವು ಮಾನ್ಯತೆ ಪಡೆದಿಲ್ಲ. ಅಲ್ಲದೆ ಅವು ರೋಗಿ ಹಾಗೂ ವೈದ್ಯರಿಗೆ ವಿಶ್ವಾಸ ಮೂಡಿಸುವ ಹಾಗಿಲ್ಲ. ಆದ್ದರಿಂದ, ಪರಿಣಾಮಕಾರಿ ಔಷಧಗಳ ಪಟ್ಟಿಯನ್ನು ತಯಾರಿಸಲಾಗಿದೆ . ಆಫ್ರಿಕಾ, ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಈ ಔಷಧಗಳಿಗೆ ಭಾರಿ ಬೇಡಿಕೆಯಿದೆ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ನಂಜು ನಿರೋಧಕ ಔಷಧ ತಜ್ಞೆ ಅನಾ ಪಡಿಲ್ಲಾ.
ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತರೆ, ಹಾವಿನ ಕಡಿತದಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಬಹುದು. ಜನರು ಹಾವಿನ ವಿಷಕ್ಕಿಂತ, ಹೆದರಿಕೆಗೆ ಅರ್ಧ ಜೀವ ಕಳೆದುಕೊಳ್ಳುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.













Click it and Unblock the Notifications