ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಪ್ರೀತಿ ನಂಬಿಕೆ : ಏನಿವು?

By Staff
|
Google Oneindia Kannada News

Love first or trust first, a debate
ನಾಗರ ಹಾವಿನಂಥವನ(ಳ)ನ್ನು ಪ್ರೀತಿಸು ಆದರೆ ನಂಬಬೇಡ ಎಂದು ಮಾನ್ಯ ರವಿ ಬೆಳಗೆರೆ ಅವರು ತಮ್ಮ ಇತ್ತೀಚಿನ ಒಂದು ಅಂಕಣ ಬರಹದಲ್ಲಿ ಅಪ್ಪಣೆ ಕೊಡಿಸಿದ್ದಾರೆ. ಒಪ್ಪಿದರೆ ಒಪ್ಪಿ ಬಿಟ್ಟರೆ ಬಿಡಿ. ಅಥವಾ ತಪ್ಪು ಒಪ್ಪು ಆಮೇಲೆ. ಈ ಲೇಖನ ಚರ್ಚೆಗೆ ಆಹಾರವಾಗಿರುವುದಂತೂ ನಿಜ. ದಟ್ಸ್ ಕನ್ನಡ ಓದುಗರು ಇಮೇಲ್ ಮುಖಾಂತರ ತಮ್ಮ ಹಲವಾರು ಜಿಜ್ಞಾಸೆಗಳನ್ನು ತೋಡಿಕೊಂಡಿದ್ದಾರೆ.

ನಾಗರಹಾವು, ಪ್ರೀತಿ, ನಂಬಿಕೆ ಮೂರೂ ಶಬ್ದಗಳು ಭಯಂಕರ ಅರ್ಥಗಳನ್ನು ಹೊರಹೊಮ್ಮಿಸುತ್ತವೆ. ನಾಗರಹಾವು ಎಂದಾಕ್ಷಣ ಕೆಲವರು, ಕೆಲವರೇನು ಎಲ್ಲರೂ ಬೆಚ್ಚಿ ಬೀಳುತ್ತಾರೆ, ಆನಂತರ ನಿಧಾನವಾಗಿ ಸಾವರಿಸಿಕೊಂಡು ಹಾವು ತಮ್ಮ ಕಾಲಬುಡದಲ್ಲಿ ಬಂದಿಲ್ಲ ಎನ್ನುವುದನ್ನು ಖಾತರಿ ಮಾಡಿಕೊಂಡು ನಿರಾಳವಾಗಿ ಉಸಿರಾಡಲು ಶುರುಮಾಡುತ್ತಾರೆ. ಇನ್ನು ಕೆಲವರಿಗೆ ಮನೆದೇವರು ಸುಬ್ರಮಣ್ಯ ನೆನಪಾಗಿ ನಿಂತಲ್ಲಿಂದಲೇ ಅವನಿಗೆ ನಾಕಾರು ನಮಸ್ಕಾರಗಳನ್ನು ರವಾನಿಸುತ್ತಾರೆ.

ಪ್ರೀತಿ ಎಂದಾಕ್ಷಣ ಕೆಲವರಿಗೆ ಮೈ ಹಗುರವಾಗುತ್ತದೆ. ಕೆಲವರಿಗೆ ಹೊರಲಾರದ ಭಾರವಾಗುತ್ತದೆ. ನಿನ್ನೆಯ ನೆಪುಗಳು ಉಕ್ಕಿಬಂದು ಅಳು ಬರುತ್ತದೆ, ನಾಳೆಯ ರಸ ನಿಮಿಷಗಳನ್ನು ಊಹಿಸಿಕೊಂಡು ಪುಳಕವುಂಟಾಗುತ್ತದೆ. ಇನ್ನೂ ಏನೇನೋ ಆಗುತ್ತದೆ.

ನಂಬಿಕೆಯೂ ಅಷ್ಟೆ. ಯಾರೋ ಒಬ್ಬರು ಹತ್ತು ರೂಪಾಯಿಗೆ ಮೋಸಮಾಡಿದರೆ ನಮ್ಮ ಅಪನಂಬಿಕೆಗಳ ನೆಲೆ ಬೆಲೆ ಕೋಟಿ ರೂ ದಾಟುತ್ತದೆ. ಈ ಹಿನ್ನೆಲೆಗಳಲ್ಲಿ ನಾಗರಹಾವು, ಪ್ರೀತಿ ಮತ್ತು ನಂಬಿಕೆಯ ಬಗೆಗೆ ನಿಮ್ಮ ಒಲವು ನಿಲವುಗಳೇನು? ಬರೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X