ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಮಲ್ಲಿಗೆ ಮುಡಿಗೇರಿದ ಕ್ಷಣ..

By Staff
|
Google Oneindia Kannada News

Mangalore Jasmine
ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು. ಮೊನ್ನೆ ಮೊನ್ನೆ ಊರಿಗೆ ಹೋದೆ. ಹೋಗುವಾಗಲೇ ಪೇಟೆಯಲ್ಲಿ ಇಳಿದು ಮಲ್ಲಿಗೆ ತಕೊಂಡು ಹೊರಟೆ.

* ಚಿತ್ರಾ ಕರ್ಕೇರಾ

ನಾನು ಶಾಲೆಗೆ ಹೋಗುತ್ತಿದ್ದಾಗಲೂ ಅಷ್ಟೇ ತುಂಬಾ ಹೂವು ಮುಡಿಯೋ ಹುಚ್ಚು. ಅದರಲ್ಲೂ ಮಲ್ಲಿಗೆ ಅಂದ್ರೆ ಜಡೆಗಿಂತಲೂ ಜಾಸ್ತಿ ಮಲ್ಲಿಗೆ ಮುಡಿಯುತ್ತಿದ್ದೆ. ಆವಾಗ ನಮ್ಮ ಹೆಡ್ ಮಾಸ್ತರು ಯಾವಾಗಲೂ ಹೂವು ಮುಡಿದಿದ್ದಕ್ಕೆ ರೇಗಿಸುತ್ತಿದ್ದು ಈಗಲೂ ನೆನಪಿದೆ. ಹೈಸ್ಕೂಲು-ಕಾಲೇಜಿನಲ್ಲೂ ಅಷ್ಟೇ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅಮ್ಮ ಎರಡು ಜಡೆ ಕಟ್ಟಿ. ಎರಡೂ ಜಡೆಗೂ ಮಲ್ಲಿಗೆ ಮುಡಿಸಿ ಕಳುಹಿಸುತ್ತಿದ್ದರು. ಆ ಮಲ್ಲಿಗೆ ಮುಡಿದು ಕ್ಲಾಸಿನಲ್ಲಿದ್ದವರಿಗೆಲ್ಲ ಅಸೂಯೆ ಬರಿಸೋದು ನನ್ ಕೆಲಸ. ಅದೆಷ್ಟೋ ಹುಡುಗಿಯರು ನನ್ ಮಲ್ಲಿಗೆ ಮೇಲೆ ಕಣ್ಣು ಹಾಕಿದ್ದಾರೋ? ಕಂಡವರಂತೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು.ನಮ್ಮೂರಿನ ಪ್ರತಿ ಹಬ್ಬ ಅಥವಾ ಯಾವುದೇ ಸಮಾರಂಭಗಳಲ್ಲಿ ಮಲ್ಲಿಗೆ ತಂದೇ ತರುತ್ತಾರೆ. ವಧುವಿಗೆ ಮಲ್ಲಿಗೆ ಮುಡಿಸಿದರೇನೇ ಚೆನ್ನ ಕಾಣೋದು. ಅಷ್ಟೇ ಅಲ್ಲ, ತಲೆಯಲ್ಲಿ ಆ ಮಲ್ಲಿಗೇನ ನೋಡೋದು ಕಣ್ಣಿಗೆ ಒಂಥರಾ ಹಬ್ಬ.

ಅದೇ ಮೊನ್ನೆ ನಾನು ಊರಿಗೆ ಹೋದನ್ನಲ್ಲಾ..ಬೆಂಗಳೂರಿಗೆ ವಾಪಾಸು ಬರುವಾಗಲೂ ಮಲ್ಲಿಗೆ ತಕೋ ಬಂದೆ. ಇತರ ಮಲ್ಲಿಗೆಗಳಿಗಿಂತ ಇದು ದುಬಾರಿ. ಮನೆಯಿಂದ ಹೊರಟು 10 ಗಂಟೆ ಪ್ರಯಾಣಿಸಿದವಳು ಮಲ್ಲಿಗೇನ ಜೋಪಾನವಾಗಿ ತಕೊಂಡು ಬಂದೆ. ಇಡೀ ಬಸ್ಸೇ ಘಮ್ಮೆನ್ನುತ್ತಿತ್ತು. ಮಲ್ಲಿಗೆ ತಂದ್ರೆ ಬೆಂಗಳೂರಿನ ನಮ್ಮನೆ ಬಿಡೀ ಇಡೀ ಬಿಲ್ಡಿಂಗೇ ಘಮ್ ಅನ್ನಬೇಕೇ? ಪಕ್ಕದ ಮನೆ ಆಂಟಿ ಬಂದು ಕೇಳಿದ್ರು...ತುಂಡು ಮಾಡಿ ಕೊಟ್ಟೆ. ಅವರ ಮಕ್ಕಳು, ಮರಿಗಳೆಲ್ಲಾ ಮುಡಿಸಿದ್ರು. ನಾಲ್ಕು ಮನೆಗೆ ಹಂಚಿದೆ. ಎಲ್ರ ಬಾಯಲ್ಲೂ ಮಂಗ್ಳೂರ ಮಲ್ಲಿಗೆ. ನಮ್ಮನೆ ಓನರ್ ಆಂಟಿಯ ಖುಷಿಗಂತೂ ಸರಿಸಾಟಿ ಏನೂ ಇರಲಿಲ್ಲ. ಅಷ್ಟು ಖುಷಿಯಾಗಿಬಿಟ್ರು. ಎಲ್ಲರಿಗೆ ಹಂಚಿ ಪುಟ್ಟದೊಂದು ತುಂಡು ಉಳಿಯಿತು. ದೇವರ ಫೋಟೋಗೆ ಹಾಕಿ ಮಲಗುವಾಗ ಮುಡಿದುಕೊಂಡೇ ಮಲಗಿದೆ. ಹಂಗೇ ನಮ್ಮೂರ ಮಲ್ಲಿಗೆ ಅಂದ್ರೆ ತುಂಬಾ ಚಂದ..ನೋಡಕ್ಕೂ ಮುಡಿಯಕ್ಕೂ. ನೀವು ನೋಡಿದ್ರೂನೂ ಇಷ್ಟಪಡ್ತೀರ..ತುಂಬಾ ಪ್ರೀತಿ ಮಾಡ್ತೀರಾ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X