• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್ ಕಳ್ಳರ ಪತ್ತೆಗೆ ಗೂಢಾಚಾರಿ

By Staff
|
ದೈನಂದಿನ ಜೀವನದ ಅತ್ಯಂತ ಅವಶ್ಯಕ ವಸ್ತುವಾಗಿ ಎಷ್ಟೋ ಜನರಿಗೆ ಜೀವನಾನೆ ಮೊಬೈಲ್ ಆಗಿರುವುದಂತೂ ಸುಳ್ಳಲ್ಲ. ಮೊಬೈಲ್ ಫೋನ್ ಕಳೆದುಕೊಂಡಾಗ ಹೇಗಿರುತ್ತೆ ಅದು ಊಹೆಗೂ ನಿಲುಕದ್ದು ಅಂತಾ ಭಟ್ಟರು ಇತ್ತೀಚೆಗೆ ಲೇಖನದಲ್ಲಿ ಹೇಳಿದ್ದರು. ಅದರಂತೆ ಈಗ ಮೊಬೈಲ್ ಕೇವಲ ಸಂಭಾಷಣೆಗೆ ಮಾತ್ರವಲ್ಲದೆ ಹತ್ತು ಹಲವು ಸೌಲಭ್ಯಗಳನ್ನು ಅಂಗೈಗೆ ನಿಲುಕುವಂತೆ ಮಾಡಿರುವ ಮಾಂತ್ರಿಕ ಪರಿಕರ. ಒಮ್ಮೆ ಕಳೆದುಕೊಂಡರೆ ಮೊಬೈಲ್ ನಲ್ಲಿದ್ದ ಸ್ವವಿವರಗಳು, ಅಸಂಖ್ಯ ಸಂಪರ್ಕಮಾಹಿತಿ, ಚಿತ್ರಗಳು, ವಿಡಿಯೋ..ಇತ್ಯಾದಿಗಳು ಅಮೂಲ್ಯ ಡಾಟಾ ನಾಶವಾದಂತೆ, ಹೆಚ್ಚೆಂದರೆ ಅದೇ ಸಿಮ್ (ಫೋನ್ ನಂಬರ್) ಪಡೆಯಬಹುದು.

ಪೊಲೀಸರು ಇದುವರೆವಿಗೂ ಮೊಬೈಲ್ ಕಳ್ಳರನ್ನು ಹಿಡಿದು ಕಳೆದುಕೊಂಡವರಿಗೆ ಹಿಂದಿರುಗಿಸಿದ್ದು ವಿರಳ. ಪರಿಸ್ಥಿತಿ ಹೀಗಿರುವಾಗ, ಮೊಬೈಲ್ ಫೋನ್ ಸುರಕ್ಷತೆಗಾಗಿ ಆನ್ ವರ್ಡ್ ಮೊಬಿಲಿಟಿ ಎಂಬ ಸಂಸ್ಥೆ ಹಲವು ಉಪಯುಕ್ತ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಪ್ರಯೋಗಿಕ ಹಂತದಲ್ಲಿರುವ ಮೊಬಿಕಾಪ್, ಮೊಬಿಕಾಪಿ, ಟ್ರಾಕ್ 007, ಮೊಬಿಮೇಟ್ ತಂತ್ರಾಂಶಗಳು ಸಾರ್ವಜನಿಕರ ಉಪಯೋಗಕ್ಕೆ ಸದ್ಯದಲ್ಲೇ ಲಭ್ಯವಾಗಲಿದೆ. ಇದಕ್ಕೂ ಮುನ್ನ ಮೊಬೈಲ್ ಕಳ್ಳರ ಜಾಡು ಹಿಡಿಯಬಲ್ಲ ಈ ಗೂಢಾಚಾರಿ ತಂತ್ರಾಂಶದ ಮೇಲೆ ಒಂದು ನೋಟ

ಮಾಹಿತಿ: ಮಹೇಶ್ ಮಲ್ನಾಡ್

ಪ್ರಮುಖ ಉತ್ಪನ್ನಗಳು:

1. ಮೊಬಿಕಾಪ್ :

ಇದು ನಿಮ್ಮ ಮೊಬೈಲ್ ಕಳ್ಳತನವಾದಲ್ಲಿ ಇಲ್ಲವೆ ನೀವು ಅದನ್ನು ಕಳೆದುಕೊಂಡಲ್ಲಿ ಅದು ಎಲ್ಲಿದೆಯೆಂದು ಪತ್ತೆ ಹಚ್ಚಬಲ್ಲ ಒಂದು ಸರಳ ಸಾಫ್ಟವೇರ್. ಇದೊಂದು ಗುಪ್ತ ಪ್ರಯೋಗವಾಗಿದ್ದು, ನೀವು ಪಾಸ್ ವರ್ಡ್ ಬಳಸುವ ಮೂಲಕ ಮಾತ್ರ ಇದರ ಲಾಭ ಪಡೆಯಬಹುದು. ನಿಮ್ಮ ಫೋನ್ ಟ್ರ್ಯಾಕ್ ಮಾಡುವ ಜೊತೆಗೆ ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಇಲ್ಲವೆ ಮುಕ್ತವಾಗಿಡಲು ಮೊಬಿಕಾಪ್ ಅವಕಾಶ ಕಲ್ಪಿಸುತ್ತದೆ.

ಲಕ್ಷಣಗಳು:

* ಖಾಸಗಿ ಮಾಹಿತಿ ನಿರ್ವಹಣೆ : ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಇಲ್ಲವೆ ಮುಕ್ತವಾಗಿಡಲು ಮೊಬಿಕಾಪ್ ಅವಕಾಶ ಕಲ್ಪಿಸುತ್ತದೆ.

* ಸಿಮ್ ಬದಲಾವಣೆಯ ಮಾಹಿತಿ : ಮೊಬಿಕಾಪ್ ನಿಮ್ಮ ಮೊಬೈಲ್ ಗೆ ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ನಿಮ್ಮ ಇನ್ನೊಂದು ನಂಬರಿಗೆ ಮಾಹಿತಿ ರವಾನಿಸುವ ಮೂಲಕ ಫೋನ್ ಎಲ್ಲಿದೆಯೆಂದು ಪತ್ತೆಹಚ್ಚುವಲ್ಲಿ ಸಹಾಯ ಮಾಡುತ್ತದೆ.

* ಫೋನ್ ಪತ್ತೆಹಚ್ಚುವದು ಮತ್ತು ನಿಗಾ ವಹಿಸುವುದು : ನಿಮ್ಮ ಮೊಬೈಲ್ ಗೆ ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ಬದಲಾದ ಸಿಮ್ ನಂಬರ್, ಆ ದೇಶದ ಕೋಡ್, ಸ್ಥಳದ ಕೋಡ್, ನೆಟ್ ವರ್ಕ್ ಐಡಿ, ಸೆಲ್ ಐಡಿ ಮತ್ತು ಸೆಲ್ ಬ್ರೊಡ್ಕಾಸ್ಟ್ ಮೆಸ್ಸೆಜ್ ಕುರಿತ ಮಾಹಿತಿಯನ್ನು ನಿಮಗೆ ತಲುಪಿಸುತ್ತದೆ.

* ಮಾಹಿತಿ ರಕ್ಷಣೆ : ಮೊಬಿಕಾಪ್ ನಿಮ್ಮ ಎಸ್ ಎಮ್ ಎಸ್ ಡಾಟಾ, ಫೋನ್ ಬುಕ್, ಇಮೇಜ್ ಗಳು, ವಿಡಿಯೊ ಮುಂತಾದವನ್ನು ಕಾಪಾಡುತ್ತದೆ. ಸಿಮ್ ಕಾರ್ಡ್ ಬದಲಿಸಿದಲ್ಲಿ ನಿಮ್ಮ ಮಾಹಿತಿ ಯಾಂತ್ರಿಕವಾಗಿ ಗುಪ್ತ ಸ್ಥಿತಿಗೆ ಹೊರಟುಹೋಗುತ್ತದೆ. ಅದನ್ನು ನೀವೇ ಆಯ್ಕೆಮಾಡಿದ ಪಾಸ್ ವರ್ಡ್ ಎಂಟರ್ ಮಾಡುವ ಮೂಲಕ ಮರಳಿ ಪಡೆಯಬಹುದು.

* ಮೆಮೊರಿ ಕಾರ್ಡ್ ರಕ್ಷಣೆ : ಸಿಮ್ ಕಾರ್ಡ್ ಬದಲಿಸಿದಲ್ಲಿ ಮೊಬಿಕಾಪ್ ಯಾಂತ್ರಿಕವಾಗಿ ನಿಮ್ಮ ಮೆಮೊರಿ ಕಾರ್ಡನಲ್ಲಿರುವ ಮಾಹಿತಿ ಪ್ರದರ್ಶಿತವಾಗದಂತೆ ತಡೆಯುತ್ತದೆ.

* ಕಳೆದುಹೋದ ನಿಮ್ಮ ಫೊನ್ ಗೆ ಲಗ್ಗೆ ಹಾಕಿ : ಒಂದು ಸರಳ ಎಸ್ ಎಮ್ ಎಸ್ ಮೂಲಕ ನಿಮ್ಮ ಮೊಬೈಲ್ ನ್ನು ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಸುಪ್ತ ಸ್ಥಿತಿಯಲ್ಲಿಡಬಹುದು. ಇದರಿಂದ ನಿಮ್ಮ ಫೊನ್ ಲಾಕ್ ಆಗುವುದಲ್ಲದೆ ಯರಾದರೂ ಬಳಸಲು ಯತ್ನಿಸಿದಲ್ಲಿ ಸೈರನ್ ಮೊಳಗುವುದು.

* ರಿಮೊಟ್ ಸ್ಪೈಯಿಂಗ್ : ಮೊಬಿಕಾಪ್ ಕದ್ದವನಿಗೆ ತಿಳಿಯದಂತೆ ನಿಮ್ಮ ಫೋನ್ ನಿಂದ ಮಾಡಿದ ಕರೆಯ ಮಾಹಿತಿ, ಕಳಿಸಿದ ಎಸ್ ಎಮ್ ಎಸ್ ಪ್ರತಿಯನ್ನು ನಿಮಗೆ ಕಳುಹಿಸುತ್ತದೆ.

* ಸೈರನ್ ಅಲಾರಮ್ : ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ಸೈರನ್ ಅಲಾರಮ್ ಮೊಳಗುವುದು ಅಲ್ಲದೆ ಮೊಬೈಲ್ ರಿಸ್ಟಾರ್ಟ್ ಮಾಡಿದರೆ ಅದು ಮುಂದುವರೆಯುವುದು.

* ಫೊನ್ ಬುಕ್ ರೆಟ್ರೈವಲ್ : ಮೊಬಿಕಾಪ್ ನಿಮ್ಮ ಕಳೆದುಹೋದ ಫೊನ್ ಬುಕ್ ನ್ನು ಎಸ್ ಎಮ್ ಎಸ್ ಮೂಲಕ ಇಲ್ಲವೆ ಜಿ ಪಿ ಆರ್ ಎಸ್ ಮೂಲಕ ಆನ್ ಲೈನ್ ಸರ್ವರ್ ನಿಂದ ಪಡೆಯುವ ಸೌಲಭ್ಯ ಒದಗಿಸುತ್ತದೆ.

* ಕಸ್ಟಮೈಸ್ಡ್ ಮೆಸ್ಸೆಜ್ ಗಳು ಮತ್ತು ರಿಂಗ್ ಟೋನ್ ಗಳು : ಮೊಬಿಕಾಪ್ ಸಿಮ್ ಕಾರ್ಡ್ ಬದಲಾವಣೆ ಪತ್ತೆ ಹಚ್ಚುವುದಲ್ಲದೇ ಕೀಪ್ಯಾಡ್ ಲಾಕ್ ಮಾಡಿ ಪೂರ್ವ ನಿಯೋಜಿತ ಮೆಸ್ಸೆಜನ್ನು ಸ್ಕ್ರೀನ್ ಮೇಲೆ ಡಿಸ್ಪ್ಲೇ ಮಾಡುವ ಮೂಲಕ ಫೋನ್ ಮೇಲೆ ಸ್ವಯಂ ದಾಳಿ ಮಾಡುತ್ತದೆ. ಅಲ್ಲದೆ ಮೊಬಿಕಾಪ್ ರಿಂಗ್ ಟೋನ್ ಅಕ್ಟಿವೇಟ್ ಆಗುವ ಮೂಲಕ ಕಳ್ಳನಿಗೆ ಪ್ರತಿ ಬಾರಿ ಕರೆ ಬಂದಾಗಲೂ ಅದು ಮೊಳಗುತ್ತದೆ.

2. ಮೊಬಿಕಾಪಿ :

ನಿಮ್ಮ ಕಾಂಟ್ಯಾಕ್ಟ್ ಗಳನ್ನು ಎಸ್ ಎಮ್ ಎಸ್ ಮೂಲಕ ಇಲ್ಲವೆ ಜಿ ಪಿ ಆರ್ ಎಸ್ ಮೂಲಕ ಆನ್ ಲೈನ್ ಸರ್ವರ್ ನಿಂದ ಪಡೆಯುವ ಸೌಲಭ್ಯ ಒದಗಿಸುವುದು ಮೊಬಿಕಾಪಿಯ ವಿಶೇಷತೆಯಾಗಿದೆ. ನಿಮ್ಮ ಫೊನ್ ಬುಕ್ ಕಳೆದುಹೋದರೂ ಸರಳವಾಗಿ ಕಾಂಟ್ಯಾಕ್ಟ್ ಗಳನ್ನು ಮತ್ತೆ ಪಡೆಯಬಹುದು. ಕಾಲ ಕಾಲಕ್ಕೆ ಬ್ಯಾಕ್ ಅಪ್ ಪಡೆಯಲು ಗಣಕ ಯಂತ್ರದಲ್ಲಿ ಅವಕಾಶ ಒದಗಿಸುತ್ತದೆ. ಸರ್ವರ್ ಗೆ ಬ್ಯಾಕ್ ಅಪ್ ಪಡೆಯಲು ಜಿ ಪಿ ಆರ್ ಎಸ್ ಅವಶ್ಯಕತೆಯೂ ಇಲ್ಲಾ. ಇದೊಂದು ಸಾಮಾನ್ಯ ಪ್ರಯೋಗವಾಗಿದ್ದು ಯವುದೇ ಜಿ ಎಸ್ ಎಮ್/ ಸಿ ಡಿ ಎಮ್ ಎ ಫೋನ್ ನಲ್ಲೂ ಅಳವಡಿಸಬಹುದು.

*ಎಸ್ ಎಮ್ ಎಸ್ ಮೂಲಕ ಬ್ಯಾಕ್ ಅಪ್ ಪಡೆಯುವುದು: ನೀವು ಬ್ಯಾಕ್ ಅಪ್ ಲಿಂಕ್ ಕ್ಲಿಕ್ಮಾಡಿದಾಗ ಅದರೊಂದಿಗೆ ಮೊಬಿಕಾಪಿ ನಿಮ್ಮ ಫೊನ್ ಬುಕ್ ನ್ನು ಸ್ಕ್ಯಾನ್ ಮಾಡುತ್ತದೆ. 3-4 ಎಸ್ ಎಮ್ ಎಸ್ ಗಳನ್ನು ಜೊತೆಗೂಡಿಸಿ ಆನ್ ಲೈನ್ ಸರ್ವರ್ ಗೆ ಕಳುಹಿಸುವುದು ವಿಶೇಷ. ಪ್ರಾಥಮಿಕವಾಗಿ ಸಂಪೂರ್ಣ ಬ್ಯಾಕ್ ಅಪ್ ಪಡೆದ ನಂತರ ಫೋನ್ ಬುಕ್ ನ ಪ್ರತಿ ಹೊಸ ಎಂಟ್ರಿಯನ್ನು 24 ಗಂಟೆಗಳೊಳಗೆ ಪರೀಕ್ಷಿಸಲಾಗುವುದು ಮತ್ತು ಬದಲಾವಣೆಯನ್ನು ಬಳಕೆದಾರರಿಂದ ಖಚಿತಪಡಿಸಿದ ನಂತರ ಸರ್ವರ್ ಗೆ ಬ್ಯಾಕ್ ಅಪ್ ಪಡೆಯಲಾಗುವುದು.

* ಜಿ ಪಿ ಆರ್ ಎಸ್ ಬಳಕೆಯಿಂದ ಬ್ಯಾಕ್ ಅಪ್ ಪಡೆಯುವುದು : ಮೊಬಿಕಾಪ್ ಮಾಹಿತಿಯ ಬ್ಯಾಕ್ ಅಪ್ ಪಡೆಯಲು ಜಿ ಪಿ ಆರ್ ಎಸ್ ಕೂಡಾ ಬಳಸುತ್ತದೆ.

* ಒನ್ ಟಚ್ ರಿಸ್ಟೋರ್ : ನಿಮ್ಮ ಫೊನ್ ಬುಕ್ ಅಳಿಸಿಹೋದಲ್ಲಿ ............ ಗೆ ಲಾಗ್ ಆನ್ ಮಾಡಿ, ನಿಮ್ಮ ಯುಸರ್ ನೇಮ್ ಮತ್ತು ಪಾಸ್ ವರ್ಡ್ ಎಂಟ್ರಿ ಮಾಡಿ ರಿಸ್ಟೋರ್ ಬಾಯ್ ಎಸ್ ಎಮ್ ಎಸ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಫೋನ್ ಬುಕ್ ಮರಳಿ ಪಡೆಯಿರಿ ಮತ್ತು ಮುಂದುವರೆಯಿರಿ

3. ಟಾಕ್ 007 :

ಟಾಕ್ 007 ನಿಮ್ಮ ಧ್ವನಿಮುದ್ರಣದ ಅವಶ್ಯಕತೆಗಳನ್ನು ನೀಗಿಸಬಲ್ಲದು. ಸರಳವಾದ ಹಾಟ್ ಕೀ ಪ್ರೆಸ್ ಮಾಡುವ ಮೂಲಕ ನಿಮಗೆ ಬೇಕೆಂದಾಗೆಲ್ಲಾ ವಾಯ್ಸ್ ಮೆಮೊಗಳನ್ನು ಮತ್ತು ಕರೆಗಳನ್ನುರೆಕಾರ್ಡ್ ಮಾಡಲು ಅವಕಾಶ ಕಲ್ಪಿಸುತ್ತದೆ. ಯಾಂತ್ರಿಕವಾಗಿಯೂ ಇದು ಕರೆಗಳನ್ನು ರೆಕಾರ್ಡ್ ಮಾಡಬಲ್ಲದು. ನೀವು ರೆಕಾರ್ಡ್ ಮಾಡಿದ ಕರೆಗಳನ್ನು ಬ್ರೌಸ್ ಮಾಡಬಹುದು, ಅಳಿಸಬಹುದು ಮತ್ತು ಟ್ರಾನ್ಸ್ ಫರ್ ಕೂಡಾ ಮಾಡಬಹುದು.

* ಬೀಪ್ ಸದ್ದಿಲ್ಲದೆ ಧ್ವನಿಮುದ್ರಣ : ಧ್ವನಿಮುದ್ರಣಕ್ಕೆ ಯಾವದೇ ತೊ೦ದರೆ ಇಲ್ಲದ೦ತೆ ಬೀಪ್ ಶದ್ಬವಿಲ್ಲದೆ ನಿಮಗೆ ಬರುವ ಹಾಗು ನೀವು ಮಾಡುವ ಕರೆಗಳ ಧ್ವನಿಮುದ್ರಣ ಮಾಡಬಹುದು.

* ಅನಿಯಮಿತ ಕರೆಗಳ ಧ್ವನಿಮುದ್ರಣ : ಫೋನ್ ನ ಇಲ್ಲವೆ ಮೆಮೊರಿ ಕಾರ್ಡನ ಮೆಮೊರಿ ಲಿಮಿಟ್ ಕಡಿಮೆ ಇದ್ದಾಗ ಮಾತ್ರ ಧ್ವನಿಮುದ್ರಣ ಮಾಡಲಾಗುವದಿಲ್ಲ.

*ಡಿಕ್ಟಾಫೊನ್ ಎಬಿಲಿಟಿ : ಕೇವಲ ಒ೦ದು ಬಟನ್ ಒತ್ತುವ ಮೂಲಕ ಮೀಟಿ೦ಗ್ ಮತ್ತು ಯಾವುದೇ ಸ೦ಭಾಷಣೆಯನ್ನು ಧ್ವನಿಮುದ್ರಣ ಮಾಡಬಹುದು.

4. ಮೊಬಿಮೇಟ್ :

ಮೊಬಿಮೇಟ್ ಹಲವು ಸೌಲಭ್ಯಗಳ ಆಗರ. ಇದು ಮೆಸೆಜಿಂಗ್ ಅಸಿಸ್ಟಂಟಾಗಿ ಯಾಂತ್ರಿಕಕವಾಗಿ ಕರೆಗಳಿಗೆ ಉತ್ತರ ಕೊಡುವ ಕಾರ್ಯ, ಧ್ವನಿ ಮೂಲಕ ಉತ್ತರ ಕೊಡುವ ಕಾರ್ಯ, ಯಾಂತ್ರಿಕವಾಗಿ ಎಸ್ ಎಂ ಎಸ್ ಕಳಿಸುವ ಕಾರ್ಯ, ಯಾವುದೇ ಫೊನ್ ನಂಬರ್ ನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿ ಹಾಕುವ ಕಾರ್ಯ ಮತ್ತು ಧ್ವನಿಮುದ್ರಣ ಕಾರ್ಯ ನಿರ್ವಹಿಸುತ್ತದೆ.

* ಆನ್ಸರಿಂಗ್ ಮಶಿನ್ : ನಿಮ್ಮ ಯಾಂತ್ರಿಕ ಉತ್ತರಗಳನ್ನು ಫೋನ್ ಗೆ ಸೇರಿಸಬಹುದು ಮತ್ತು ನಿಮ್ಮ ಸ್ವಯಂ ಮೆಮೊರಿಯಲ್ಲಿ ಸೇವಾ ಸಹಾಯಕರ ಧ್ವನಿಯ ರಹಿತವಾಗಿ ವಾಯ್ಸ್ ಮೆಸೇಜ್ ಗಳನ್ನು ಸೇರಿಸಿಕೊಳ್ಳಬಹುದು.

* ಎಸ್ ಎಮ್ ಎಸ್ ರೆಸ್ಪಾನ್ಸ್: ಯಾರ ಕರೆಗಳಿಗೆ ಉತ್ತರಿಸಲಾಗಿಲ್ಲವೊ ಅವರಿಗೆ ನಿಮ್ಮ ಸ್ವಂತ ಹಾಗೂ ಪೂರ್ವನಿರ್ಧರಿತ ಎಸ್ ಎಮ್ ಎಸ್ ಕಳುಹಿಸಬಹುದು

* ಬ್ಲ್ಯಾಕ್ ಲಿಸ್ಟ್ : ಮೊದಲೇ ಉಲ್ಲೇಖಿಸಲಾದ ನಂಬರ್ ಗಳಿಗೆ ಕರೆ ಮಾಡುವುದನ್ನು ತಪ್ಪಿಸಬಹುದು.

ನಿಮ್ಮ ನೆಚ್ಚಿನ ಮೊಬೈಲ್ ಫೊನ್ ನನ್ನು ಸಂಪೂರ್ಣ ಕಾಪಾಡುವ ಈ ಎಲ್ಲಾ ಸೌಲಭ್ಯಗಳು ಶೀಘ್ರದಲ್ಲೇ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲಿವೆ. ಈ ಸೌಲಭ್ಯಗಳನ್ನು ಪಡೆಯುವ ಮೂಲಕ ನೀವು ಹೆಮ್ಮೆಯಿಂದ ಬೀಗುವಿರಲ್ಲದೆ ನಿಮ್ಮ ಫೊನ್ ನನ್ನು ಕಳೆದುಕೊಳ್ಳುವ ಭಯವಿಲ್ಲದೆ ನಿಶ್ಚಿಂತರಾಗಿ ಸಂಪೂರ್ಣ ಬಳಸಬಹುದು. ಈ ಹಿಂದೆ ಮೊಬೈಲ್ ಫೊನ್ ಮತ್ತು ಮಾಹಿತಿಯನ್ನು ಕಳೆದುಕೊಂಡವರು ಆನ್ ವರ್ಡ್ ಮೊಬಿಲಿಟಿ ಸಂಪರ್ಕಿಸಿ ಅವರ ಸೇವೆಯ

ಲಾಭ ಪಡೆಯಬಹುದು ಎಂದು ಸಂಸ್ಥೆಯ ಮಾರಾಟ ವಿಭಾಗದಮುಖ್ಯಸ್ಥ ಬಾಬು ಹೇಳುತ್ತಾರೆ

ಅಭಿವೃದ್ಧಿ ಹೊಂದುತ್ತಿರುವ ಹೊಸ ಪೀಳಿಗೆಯ ಕಂಪೆನಿಯಾದ ಆನ್‌ವರ್ಡ್ ಮೊಬಿಲಿಟಿ, ಮೊಬೈಲ್ ಆರೋಗ್ಯ ಸೇವೆಯ ಕುರಿತು ಹೊಸ ತರಹದ ಪರಿಹಾರವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ದೂರದ ಗ್ರಾಮಸ್ಥರಿಗೆ ವೈದ್ಯಕೀಯ ಸೇವೆ ಒದಗಿಸುವುದು, ಅವಶ್ಯಕತೆಯಿರುವ ವಿದ್ಯಾರ್ಥಿಗಳಿಗೆ ವಿದ್ಯಾದಾನ, ತಾಯ್ನೆಲದ ರಕ್ಷಣೆಗೆ ಮೊಬೈಲ್ ಹೊಮ್ ಲ್ಯಾಂಡ್ ಸೆಕ್ಯುರಿಟಿ ಒದಗಿಸುವುದು ಇವರ ಉದ್ದೇಶ. ಮೊಬೈಲ್ ಸಾಫ್ಟವೇರ್ ಕ್ಷೇತ್ರಕ್ಕೆ ಒಂದು ಭರವಸೆಯ ಭವಿಷ್ಯವನ್ನು ನೀಡುವ ಆಶಾಭಾವನೆ ಈ ಕಂಪೆನಿ ಹೊಂದಿದೆ ಮತ್ತು ವಿಶ್ವದ ಅತಿದೊಡ್ಡ ಬಿನ್ ಸಲೇಮ್ ಇರ್ವಹಿತ ಅರಬ್ ಕಂಪನಿ ಬಿ ಎಸ್ ಟೆಕ್ನಾಲಜಿಯೊಂದಿಗೆ ಜಂಟಿ ಉದ್ಯೋಗದ ಸಹಭಾಗಿತ್ವ ಇದ್ದಾಗ್ಯೂ ಇತ್ತೀಚೆಗಷ್ಟೇ ತನ್ನ ಪ್ರಥಮ ಕೊಡುಗೆಯಾದ ಮೊಬಿಕಾಪ್ ಅನ್ನು ಯುರೋಪ್, ಮಧ್ಯ ಪ್ರಾಚ್ಯ, ಅಫ್ರಿಕಾ ಮತ್ತು ರಷಿಯಾದಲ್ಲಿ ಬಿಡುಗಡೆಗೊಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- ದೂರವಾಣಿ : +919986 777612

http://www.onwardmobility.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more