ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆಮನೆಯಲ್ಲಿ ಕ್ರಾಂತಿ ಮಾಡಿದ ಮೈಕ್ರೋವೇವ್ ಓವನ್

By Staff
|
Google Oneindia Kannada News

* ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ

ಕೆಲವೇ ವರ್ಷಗಳ ಹಿಂದೆ ಹಳ್ಳಿಗರು ಪಟ್ಟಣಕ್ಕೆ ತಮ್ಮ ಮಕ್ಕಳ ಮನೆಗೆ ಭೇಟಿ ನೀಡಿದಾಗ ಅಡುಗೆಮನೆಯ ಸೌಕರ್ಯಗಳನ್ನು ಮಾತಾಡಿಕೊಳ್ಳುತ್ತಿದ್ದರು, "ಇನ್ನು ಮೇಲೆ ಕುರ್ಚಿ ಮೇಲೆ ಕುತುಕೊಂಡ್ ಹಾಗೆ ಊಟ ಮಾಡ್ಸಿ ಬಾಯಿ ತೊಳಸಿ ಸೇವೆ ಮಾಡುವ ಮಿಶನ್ ಗಳನ್ನೂ ಕಂಡು ಹಿಡೀತಾರೇನೋ" ಅವರ ಮಾತಿಗೆ ನಾವು ಅಂದು ಹಳ್ಳಿಯವರೆ೦ದುಕೊ೦ಡು ನಕ್ಕರೂ ಇಂದಿನ ವಿಜ್ಞಾನದ/ತಾಂತ್ರಿಕತೆಯ ಓಟ ನೋಡಿದಾಗ, ಫುಟ್ಬಾಲ್ ಆಡುವ ರೋಬಾಟ್ ಗಳನ್ನು ನೋಡಿದಾಗ ಇಂಥ ಮೆಶೀನ್ ಗಳು ಬರುವ ದಿನಗಳು ದೂರ ಇಲ್ಲವೇನೋ ಅನ್ನಿಸಿಬಿಡುತ್ತದೆ, ಅವರು ಹೇಳಿದ್ದು ನಿಜವೇನೋ ಎ೦ದೆನಿಸುತ್ತದೆ.

ಹೊಸ ತಂತ್ರಜ್ಞಾನಗಳು ಹೇಗೆ ಅಡುಗೆ ಮನೆಯನ್ನು ಸುಲಭವಾಗಿ ಪ್ರವೇಶಿಸುತ್ತಾ ಇವೆ ನೋಡಿ. Safety valve ತತ್ವ ಉಪಯೋಗಿಸಿಕೊಂಡು ಪ್ರೆಶರ್ ಕುಕ್ಕರ್ ಬಂದಿತು. Stirrer ಮಜ್ಜಿಗೆ ಕಡೆಯುವ ಯಂತ್ರವಾಯಿತು, ಕೈಗಾರಿಕಾ ಓವನ್ ಗಳು ಅಡುಗೆ ಓವನ್/ಗ್ರಿಲ್ ಗಳಾದವು. ಇವೆಲ್ಲ ಕೈಗಾರಿಕಾ ಕ್ಷೇತ್ರದಿಂದ ಅಡುಗೆ ಮನೆಯನ್ನು ಹೊಕ್ಕರೆ, ಮೈಕ್ರೊವೇವ್ ಓವನ್ ಮಾತ್ರ ಅಡುಗೆ ಮನೆಯಿಂದ ಕೈಗಾರಿಕಾ ಕ್ಷೇತ್ರಕ್ಕೆ ಹೋಯಿತೆಂದರೆ ನಂಬುತ್ತೀರ? ಇದು ಆಶ್ಚರ್ಯಕರ ಸತ್ಯ.

Microwave oven inventor Percy Spencer
1940ರಲ್ಲಿ ಅಮೆರಿಕದ ಪರ್ಸಿ ಸ್ಪೆನ್ಸರ್ ತನ್ನಪಾಡಿಗೆ ಕಾರ್ಖಾನೆಯ ಕಾರ್ಯಗಾರದಲ್ಲಿ ರೆಡಾರ್ ಉಪಕರಣದ ಮೇಲೆ ಏನೋ ಪರೀಕ್ಷೆ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಕಿಸೆಯ ಹತ್ತಿರ ಬಿಸಿಯಾಯಿತು. ಮುಟ್ಟಿನೋಡಿದರೆ ಬಿಸಿಯ ತಾಪಮಾನಕ್ಕೆ ಜೇಬಿನಲ್ಲಿದ್ದ ಚಾಕಲೇಟ್ ಬಾರ್ ಕರಗಿ ಹೋಗಿತ್ತು! ನಂತರ ಚಕಿತನಾಗಿ ಮತ್ತೊಮ್ಮೆ ಸ್ವಲ್ಪ ಜೋಳದ ಕಾಳುಗಳನ್ನು ಹತ್ತಿರ ಇಟ್ಟು ರೆಡಾರ್ ಆನ್ ಮಾಡಿದ. ಕೆಲವೇ ನಿಮಿಷಗಳ ನಂತರ ಜೋಳದ ಕಾಳುಗಳು 'ಪಾಪ್ ಕಾರ್ನ್' ಆಗಿ ಚಟಪಟನೆ ಅಳಕಾಳು ಹುರಿದಂತೆ ಪುಟಿಯ ತೊಡಗಿತು. ಅದರೊಂದಿಗೆ ಪರ್ಸಿಯ ಕಣ್ಣುಗಳೂ ಪ್ರಕಾಶಮಾನವಾಯಿತು. ಆಕಸ್ಮಿಕವಾಗಿ ಜಗತ್ತಿನ ಪ್ರಪ್ರಥಮ ಮೈಕ್ರೋವೇವ್ ಓವನ್ನನ್ನು ಕಂಡು ಹಿಡಿದಿದ್ದ!

ಪರ್ಸಿ ಲಿಬ್ಯಾರನ್ ಸ್ಪೆನ್ಸರ್ ಹುಟ್ಟಿದ್ದು 1894ರಲ್ಲಿ ಅಮೆರಿಕದ ಮೇನ್ ಎಂಬ ಪ್ರಾಂತ್ಯದ ಗ್ರಾಮೀಣ ಪ್ರದೇಶವೊಂದರಲ್ಲಿ. ಮೂರು ವರ್ಷದವನಾಗಿದ್ದಾಗಲೇ ತಂದೆ ಸ್ವರ್ಗಸ್ತರಾದರು, ತಾಯಿ ಮಗುವನ್ನು ಹತ್ತಿರದ ಸಂಬಂಧಿಯೊಬ್ಬರಲ್ಲಿ ಪೋಷಣೆಗೆಂದು ಬಿಟ್ಟು ಬೇರೆಲ್ಲೋ ಹೋದಳು, ಪಾಪ, ಪರ್ಸಿ ಅನಾಥನಾಗಿಹೋದ. ಮತ್ತೈದು ವರ್ಷಕ್ಕೆ ಸಾಕು ತಂದೆಯೂ ತೀರಿಹೋದರು. ಸರಿಯಾಗಿ ಹೈಸ್ಕೂಲ್ ಕೂಡ ಓದಲಾಗಲಿಲ್ಲ. ಕಟ್ಟಿಗೆ ಕಡಿಯುವುದು, ಚರ್ಮಹದ ಮಾಡುವುದು ಕಲಿತುಕೊಂಡ.

ಅದರೇನು ಮನುಷ್ಯನಿಗೆ ಛಲವೊ೦ದಿದ್ದರೆ ಏನು ಬೇಕಾದರೂ ಮಾಡಬಲ್ಲನಂತೆ. ಛಲಹೊತ್ತ ಹನ್ನೆರಡು ವರ್ಷದ ಹುಡುಗ ಹೊಟ್ಟೆಪಾಡಿಗಾಗಿ ಹತ್ತಿರದ ಗಿರಣಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಆರುವರ್ಷ ಅಲ್ಲಿ ಇಲ್ಲಿ ದುಡಿದ ನಂತರ ಹದಿನೆಂಟು ವರ್ಷಕ್ಕೆ ನೌಕಾದಳದಲ್ಲಿ ಅಪ್ರೆಂಟಿಸ್ ಗೆ ಸೇರಿಕೊಂಡು Radio Telegraphy ವಿಭಾಗದಲ್ಲಿ ತರಬೇತಿ ತೆಗೆದುಕೊಂಡ. ನಂತರ ಇನ್ನೊಂದು ರೆಡಾರ್ ಬಿಡಿಭಾಗ ತಯಾರು ಮಾಡುವ ಕಂಪೆನಿಗೆ ಸೇರಿಕೊಂಡ. ಕೆಲ ಸಮಯದ ನಂತರ 'ರೇಥಿಯಾನ್' ಎಂಬ ರೆಡಾರ್ ಉಪಕರಣ ತಯಾರಿಕಾ ಸಂಸ್ಥೆಗೆ ಸೇರಿಕೊಂಡಿದ್ದಾಯಿತು, ಆಗ ವಯಸ್ಸು 26, ನಮ್ಮ ಭಗವದ್ಗೀತೆಯ ತತ್ವವಾದ "ಕರ್ಮಣ್ಯೇವಾದಿಕಾರಸ್ತೇ ಮಾಫಲೇಶು ಕದಾಚನಾ..." ಫಲಾಫಲಗಳನ್ನು ಅಪೇಕ್ಷಿಸದೆ ಕೆಲಸವನ್ನು ಶ್ರದ್ದೆಯಿಂದ ಪಾಲಿಸುತ್ತಾ ಸತತ ಪರಿಶ್ರಮದ ಜೊತೆಯಲ್ಲಿ ಬುದ್ದಿವಂತಿಕೆ ಉಪಯೋಗಿಸಿ ಕೆಲವು ವರ್ಷಗಳ ನಂತರ ಅಪ್ರೆಂಟಿಸ್ ಮಟ್ಟದ ಹುಡುಗ ಎಂಜಿನಿಯರ್ ಆದ. ಆದಾಗ್ಯೂ ಕಷ್ಟಪಟ್ಟರೆ ಫಲವುಂಟು ಎಂಬ ಹಿರಿಯರ ನಾಣ್ಣುಡಿಯಂತೆ ಕಷ್ಟಪಟ್ಟಿದ್ದು ಫಲಕಾರಿಯಾಯಿತು. ಇಂದು ನಾವು ನೋಡುವ ಟಿ ವಿ ಪರದೆಯ 'tube' ಕಂಡು ಹಿಡಿಯಲು ಇವರು ಅಂದು ಮಾಡಿದ ಪ್ರಯೋಗಗಳು ಸಹಕಾರಿಯಾಗಿದ್ದವು.

ಪ್ರಥಮ ವಿಶ್ವ ಯುದ್ಧದಲ್ಲಿ ರೇಡಿಯೋ ಟ್ರಾನ್ಸ್ಮೀಟರ್ ನ ಉಪಯೋಗ ಮತ್ತು ದುರಸ್ತಿಗೆ ಅಮೆರಿಕದ ಸೇನೆ ಇವರ ಸಹಾಯ ಪಡೆಯುತ್ತಿದ್ದಿತು. ರೆಡಾರ್ ನ ಹೃದಯಭಾಗವಾದ 'ಮ್ಯಾಗ್ನಟ್ರಾನ್' ಉಪಕರಣವನ್ನು ದಿನಕ್ಕೆ 15 ತಯಾರು ಮಾಡಲು ಹೆಣಗಾಡುತ್ತಿದ್ದ ಒ೦ದು ಸಂಸ್ಥೆ ಇವರು ಅಭಿವೃದ್ದಿಪಡಿಸಿದ ತಂತ್ರಜ್ಞಾನದಿಂದಾಗಿ ಕ್ರಮೇಣ ದಿನಕ್ಕೆ 2600 ಸಂಖ್ಯೆಗಳನ್ನು ತಲುಪಿದರು! ಇವರ ಈ ತಂತ್ರಜ್ಞಾನವನ್ನು ಮೋಟರ್ ಮತ್ತು ಎಲೆಕ್ಟ್ರಿಕ್ ಜನರೇಟರ್ ತಯಾರಿಕೆಯಲ್ಲಿ ಇಂದಿಗೂ ಬಳಸಿಕೊಳ್ಳುತ್ತಿದ್ದಾರೆ.

ಮೈಕ್ರೋವೇವ್ ಓವನ್ ಆವಿಷ್ಕಾರ ಆಗಿದ್ದು ಹೇಗೆ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X