ನಾಟಕರಂಗಕ್ಕೆ ಈ ಬ್ಲಾಗ್ ಮೀಸಲು
ಬೆಂಗಳೂರು, ಫೆ. 3 : ನಾಟಕ ಪ್ರಿಯರಿಗೊಂದು ಸಿಹಿ ಸುದ್ದಿ. ಇನ್ನು ಮುಂದೆ ನಾಟಕ ಮಿಸ್ ಆಯ್ತು, ನನಗೆ ಆ ನಾಟಕ ನೋಡಲಿಕ್ಕೆ ಆಗಲಿಲ್ಲ ಬಿಡಿ ಎನ್ನುವ ಮಾತೇ ಇಲ್ಲ ಬಿಡಿ. ಬರೀ ನಾಟಕಗಳ ಮಾಹಿತಿವುಳ್ಳ ಬ್ಲಾಗೊಂದನ್ನು ಮೇಫ್ಲವರ್ ಮೀಡಿಯಾಹೌಸ್ ಎಂಬ ಸಂಸ್ಥೆಯವರು ಆರಂಭಿಸಿದ್ದಾರೆ. ಎಲ್ಲ ತರಹದ ನಾಟಕಗಳ ಸಮಗ್ರ ವಿವರವನ್ನು ಈ ಬ್ಲಾಗ್ ಹೊಂದಿರುತ್ತದೆ.
ಕಿರುತೆರೆಯಿಂದ ಭಾರಿ ಹೊಡೆತ ವೃತ್ತಿ ರಂಗಭೂಮಿ ಹವ್ಯಾಸ ದಿನೆದಿನೇ ಕಾಣಿಯಾಗತೊಡಗಿದೆ. ಇರುವ ಬೆರಳಣಿಕೆಯಷ್ಟು ಆಸಕ್ತರಿಗೆ ಸಮಗ್ರ ವಿವರ ಒದಗಿಸುವುದು ಈ ಬ್ಲಾಗ್ ನ ಅಧ್ಯತೆ. ಇದರ ಜತೆಗೆ ನಾಟಕಗಳ ಅಭಿನಯದಲ್ಲಿ ಅಸಕ್ತಿ ಹೊಂದಿರುವವರಿಗೆ ಕೂಡಾ ಈ ವೆಬ್ ಸೈಟ್ ಮೂಲಕ ವೇದಿಕೆ ಕಲ್ಪಿಸಿಕೊಡಲು ಪ್ರಯತ್ನ ಮಾಡಲಾಗುವುದು. ಬೆಂಗಳೂರು ನಗರದಲ್ಲಿ ವಾರದ ಕೊನೆಯ ದಿನ ಹಾಗೂ ಪ್ರತಿ ನಿತ್ಯ ಎಲ್ಲೆಲ್ಲಿ ಯಾವ್ಯಾವ ನಾಟಕಗಳ ಪ್ರದರ್ಶನವಿದೆ. ಪ್ರದರ್ಶನದ ವೇಳೆ, ಅಧುನಿಕ ನಾಟಕಗಳು ಸೇರಿ ಐತಿಹಾಸಿಕ ನಾಟಕಗಳ ವಿಮರ್ಶೆ, ನಾಟಕಕ್ಕೆ ಬೇಕಿರುವ ಎಲ್ಲ ಪರಿಕರಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಈ ಬ್ಲಾಗ್ ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ
Mayflower Media House
1, First floor
Unit 5, Yamunabai Road
Madhava Nagar, Bangalore-560001
phones: 2237 4436
[email protected]
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications