ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹು-ಕೇತು ಕಾಟ ಮತ್ತು ಗ್ರಹಣ ಚಕ್ರ

By Staff
|
Google Oneindia Kannada News

Sri KRishnaಈಗ ಈ ಬರಹಕ್ಕೆ ಮುಕ್ತಾಯ ಹಾಡಕ್ಕೆ ಮುಂಚೆ ನನ್ನನ್ನ ಕೊರೀತಿರೋ ಒಂದು ವಿಷ್ಯ ಹೇಳ್ಬಿಡ್ತೀನಿ.

ಮಹಾಭಾರತದ ಯುದ್ಧದಲ್ಲಿ ಚಕ್ರವ್ಯೂಹಕ್ಕೆ ಸಿಕ್ಕಿ ಅಭಿಮನ್ಯು ಸತ್ತದ್ದು ಎಲ್ರಿಗೂ ಗೊತ್ತು. ಆಗ, ಸಿಂಧುರಾಜ ಜಯದ್ರಥ ಅಭಿಮನ್ಯುವನ್ನ ಚಕ್ರವ್ಯೂಹದೊಳಗೆ ಬಿಟ್ಟು, ಆಮೇಲೆ ಹೊರಗೆ ಹೋಗೊದಕ್ಕೆ ಬಿಡಲಿಲ್ಲವಂತೆ. ಚಿಕ್ಕ ಹುಡುಗನ್ನ ಎಲ್ಲ್ರೂ ಸೇರಿ ಕೊಂದ್ಬಿಟ್ರು. ಮತ್ತೆ ಅರ್ಜುನ ಇದನ್ನ ತಿಳ್ದ ತಕ್ಷಣ, ಮಾರನೇದಿನ ಸೂರ್ಯ ಮುಳ್ಗೋದ್ರೊಳ್ಗೆ ಜಯದ್ರಥನ್ನ ಕೊಲ್ತೀನಿ, ಇಲ್ಲ ನಾನೇ ಬೆಂಕಿಯೊಳಗೆ ಹೊಕ್ಕು ಸಾಯ್ತೀನಿ ಅಂತಾನೆ. ಇದು ಗೊತ್ತಾಗಿ, ಕೌರವರೆಲ್ಲ, ಆ ದಿವಸದ ಕಾದಾಟದಲ್ಲಿ ಜಯದ್ರಥನ್ನ ಹೊರಕ್ಕೇ ಬರ್ದಿರೋ ತರಹ ಕಾಪಾಡ್ಕೋತಾರೆ. ಸೂರ್ಯ ಮುಳುಗಿ ಸಂಜೆಯಾಗತ್ತೆ. ಆಗ ಎಲ್ರೂ, ಅವನನ್ನ ಹೊರಗೆ ತಂದು ಅರ್ಜುನಂಗೆ ತೋರ್ಸಿ, ಈಗ ಮಾಡು ಅಗ್ನಿ ಪ್ರವೇಶ ಅಂತಾರೆ. ಅಷ್ಟರಲ್ಲಿ, ಕೃಷ್ಣ ಸೂರ್ಯನ್ನ ತೋರಿಸಿ, ನೋಡಿ ಇನ್ನೂ ಸೂರ್ಯ ಮುಳುಗಿಲ್ಲ ಅಂದದ್ದೇ ತಡ, ಅರ್ಜುನ ಜಯದ್ರಥನ್ನ ಸಾಯಿಸುತ್ತಾನೆ. ಇದಕ್ಕೆ ಕೃಷ್ಣ ಸೂರ್ಯನ್ನ ಅವನ ಸುದರ್ಶನ ಚಕ್ರದಿಂದ ಮಾಯ ಮಾಡ್ಬಿಟ್ಟ ಅನ್ನೋ ಕಥೇನೂ ಕಟ್ಬಿಟ್ಟಿದ್ದಾರೆ ನಮ್ಮ ಹಿಂದಿನೋವ್ರು.

ಈಗ ಈ ವಿವರ ನೋಡಿದ್ರೆ ಇದೊಳ್ಳೆ ಪೂರ್ಣ ಸೂರ್ಯ ಗ್ರಹಣದ ತರಹವೇ ಇದೆ ಅಲ್ವಾ? ಮಹಾಭಾರತ ಯುದ್ಧದ ಕಾಲ ಕಂಡು ಹಿಡ್ಯಕ್ಕೆ ಯತ್ನಿಸಿದೋರೆಲ್ಲ, ಈ ಅಂಶದಿಂದಲೇ ಲೆಕ್ಕ ಹಾಕೋಕೆ ಶುರು ಮಾಡೋದು. ಆದರೆ ಅದು ಗ್ರಹಣವೇ ಆಗಿದ್ರೆ ಸೂರ್ಯ ಮುಳ್ಗೇ ಬಿಟ್ಟ ಅಂತ ಯಾಕಂದ್ಕೊಂಡ್ರು? ಆ ಕಾಲದಲ್ಲಿ ಅವರೆಲ್ಲ ಗ್ರಹಣಗಳನ್ನ ಕಂಡೇ ಇರಲಿಲ್ವೇ?

ಈ ವಿಷಯದ ಬಗ್ಗೆ ನನ್ನ ಕೆಲವು ಅನುಮಾನಗಳನ್ನ ಹೀಗೆ ಹೇಳ್ಬಹುದು. 1. ಇದೊಂದು ಪೂರ್ಣ ಗ್ರಹಣ ಆಗಿತ್ತು, ಮತ್ತೆ ಸರಿಸುಮಾರು ಸಂಜೆ ಹೊತ್ತಿಗೆ, ಸೂರ್ಯ ಇನ್ನೇನು ಮುಳುಗ್ಬೇಕು, ಅನ್ನೋ ಹೊತ್ತಿಗೆ ಆಗಿತ್ತು. 2. ಅವರಲ್ಲಿ ಯಾರೂ ಪೂರ್ಣ ಸೂರ್ಯ ಗ್ರಹಣವನ್ನು ನೋಡೇ ಇರ್ಲಿಲ್ಲ/ ಕೇಳೇ ಇರ್ಲಿಲ್ಲ (ಇದರ ಸಾಧ್ಯತೆ ಬಲು ಕಡಿಮೆ!) 3. ಅವರಿಗೆ ಯಾರಿಗೂ ಇನ್ನೂ ಗ್ರಹಣಗಳು ಹೇಗೆ ಆಗತ್ವೆ ಅನ್ನೋದು ತಿಳಿದಿರಲಿಲ್ಲ - ಅಥವಾ, ಇನ್ನೂ ಗ್ರಹಣಗಳು ಇಂತಹ ದಿವ್ಸವೇ ಆಗತ್ತೆ ಅಂತ ಮೊದ್ಲೇ ತಿಳ್ಕೊಳೋದು ಹೆಚ್ಚಾಗಿ ತಿಳ್ದಿರ್ಲಿಲ್ಲ 4. ಇವೆಲ್ಲ ಗೊತ್ತಿದ್ದೂ (ಒಂದು ವೇಳೆ), ಇಷ್ಟು ಹೊತ್ತು ಸೂರ್ಯ ಕಾಣಲ್ಲ, ಆಮೇಲೆ ನೆರಳಿಂದ ಹೊರಬರತ್ತೆ ಅನ್ನೋ ಲೆಕ್ಕಾಚಾರ ಗೊತ್ತಿಲ್ದಿದ್ದ್ರೆ, ಸುಮಾರು ಮುಳುಗೋ ಹಂತದಲ್ಲಿರೋ ಸೂರ್ಯ, ಮುಳ್ಗಕ್ಕೆ ಮುಂಚೆ ನೆರಳಿಂದ ಹೊರಬಂದು ತನ್ ಮುಖ ತೋರ್ಸ್ತಾನೆ ಅನ್ನೋದು ಗೊತ್ತಿಲ್ದಿದ್ರೂ ಇರಬಹುದು. ಹಾಗಾದ್ರೆ, ಇದರಲ್ಲಿ ಕೃಷ್ಣನದೇನು ಹೆಚ್ಚುಗಾರಿಕೆ ಇತ್ತು? ಒಂದುವೇಳೆ ಕೃಷ್ಣನಿಗೆ ಮಾತ್ರ ಮರುದಿನ ಗ್ರಹಣ ಆಗತ್ತೆ ಅನ್ನೋದು ಗೊತ್ತಿದ್ರೆ? ಅದಕ್ಕೇ ಅವನು ಅರ್ಜುನನ್ನ ಆ ತರಹ ಆಣೆ ಇಡಕ್ಕೆ ಹೇಳಿದ್ರೆ? ಅದೂ ಸಾಧ್ಯ ಅಲ್ವೇ? ಅಂತಹ ಸಂದರ್ಭದಲ್ಲಿ, ಗ್ರಹಣವಾದಾಗ ಸೂರ್ಯನೇ ಮುಳುಗಿದ ಅಥವಾ ಗ್ರಹಣ ಬಿಟ್ಟು ಸೂರ್ಯ ಕಾಣೋ ಹೊತ್ತಿಗೆ ಸೂರ್ಯ ಮುಳುಗೇ ಹೋಗ್ತಾನೆ ಅಂತ ಕೌರವರು ಅಂದ್ಕೊಂಡಿದ್ರೂ ಆಶ್ಚರ್ಯ ಇಲ್ಲ!

ಗ್ರಹಣ ಚಕ್ರ ಇನ್ನೂ ಚೆನ್ನಾಗಿ ಅರ್ಥವಾಗಿಲ್ದಿದ್ದಿರೋ ಕಾಲ ಆಗಿದ್ದಿರಬಹುದು ಅದು ಅನ್ಸತ್ತೆ. ಒಂದು ವೇಳೆ, ಐವತ್ನಾಕು ವರ್ಷ ಮೂವತ್ತು ದಿನದ ಹಿಂದೆ ಒಂದು ಗ್ರಹಣವಾಗಿದ್ದು ತಿಳಿದಿದ್ದ ಕೃಷ್ಣ ಲೆಕ್ಕಾಚಾರ ಹಾಕಿ ಗ್ರಹಣವನ್ನು ಊಹಿಸಿ ಅರ್ಜುನ ಕೈಲಿ ಆ ಶಪಥ ಮಾಡಿಸಿದ್ದನೇ? ಆ ಯುದ್ಧ ಭೂಮೀಲಿದ್ದಾಗ ಅವನಿಗೆ ಸಲಹೆ ಕೊಡೋದಕ್ಕೆ ಪಕ್ಕದಲ್ಲಿ ಯಾರೂ ಜ್ಯೋತಿಷಿ ನಿಂತಿರ್ಲಿಲ್ಲ! ಅಲ್ಲದೆ, ಹದಿನೆಂಟು ವರ್ಷ ಹತ್ತು ದಿನದ ನಂತರ ಮರಳೋ ಸೂರ್ಯ ಗ್ರಹಣ ಬೇರೆಲ್ಲೋ ಆಗತ್ತೆ. ಒಂದೇ ಸ್ಥಳದಲ್ಲಿ ಆಗಬೇಕಾದ್ರೆ, ಅದಕ್ಕೆ ಮೂರು ಗ್ರಹಣ ಚಕ್ರದಷ್ಟು ಸಮಯ ಬೇಕು. ಇದಷ್ಟೇ ಅಲ್ಲ. ಈ ಐವತ್ನಾಕು ವರ್ಷದ ನಂತರ ಆಗೋ ಗ್ರಹಣ ಎಷ್ಟೋ ನೂರಾರು ಮೈಲಿ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಆಗತ್ತೆ (ಮಹಾಭಾರತದ ಮಟ್ಟಿಗೆ, ಐವತ್ನಾಕು ವರ್ಷದ ಮೊದಲಿನ ಗ್ರಹಣ ಕುರುಕ್ಷೇತ್ರಕ್ಕಿಂತ ದಕ್ಷಿಣಕ್ಕೆ, ಅಂದ್ರೆ ಮಧ್ಯ ಭಾರತದಲ್ಲಿ ಆಗಿತ್ತಾ ಅನ್ನೋದೇ ಸಲೀಸು - ಕೃಷ್ಣನ ದ್ವಾರಕೆ ಇರೋದು ಮಧ್ಯ ಭಾರತದಲ್ಲಿ ಅನ್ನೋದೂ ಗಮನಿಸಬೇಕಾದ ಸಂಗತಿ). ಇದ್ದರೂ ಇರಬಹುದು. ಅದಕ್ಕೇ ನನ್ಗೆ ಕೃಷ್ಣ ಜ್ಯೋತಿಶ್ಶಾಸ್ತ್ರ ಪಾರಂಗತ (astronomer) ಆಗಿದ್ದಿರಬಹುದು ಅನ್ಸಿದೆ. ಹಾಗಾಗೇ ಬೇರೆಯವರಿಗೆ (ಅಂದ್ರೆ ದುರ್ಯೋಧನನ ಆಸ್ಥಾನದ ಜ್ಯೋತಿಷಿಗಳಿಗೂ) ಗೊತ್ತಿಲ್ಲದ ಗ್ರಹಣ ಚಕ್ರದ ಹಿನ್ನೆಲೆ ಅವನಿಗೆ ಗೊತ್ತಿದ್ದಿರ್ಬಹುದು. ಆ ಕಾಲಕ್ಕಿನ್ನೂ ಗ್ರಹಣ ಚಕ್ರದ ವಿಷಯ ಕೆಲವ್ರ ಮಟ್ಟಿಗೆ ಗೊತ್ತಿದ್ದ ಗುಟ್ಟಿನ ತಿಳಿವಾಗಿದ್ದಿರಬೌದು. ಅದರ ಅರಿವಿದ್ದ ಕೆಲವರಲ್ಲಿ ಕೃಷ್ಣನೂ ಒಬ್ಬನಾಗಿದ್ದಿರಬಹುದು. ಎಷ್ಟೇ ಅಂದೂ ಸಕಲಕಲಾವಲ್ಲಭ ತಾನೇ ಅವನು!

ಈ ನನ್ನ ಅನುಮಾನ ನಿಜವಾದ್ರೆ, ನಾವು ಕೃಷ್ಣನ್ನ ಭಾರತ ಹಳೇ ಜ್ಯೋತಿಷಿಗಳ ಸಾಲಿನಲ್ಲಿ ನಿಲ್ಲಿಸ್ಬೇಕಾಗತ್ತೇನೋ!

« ಹಿಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X