ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಲ್ಲಿ ಚಿತ್ಪಾವನ ಮೇಳ

By Staff
|
Google Oneindia Kannada News
  • ದಟ್ಸ್‌ಕನ್ನಡ ಬ್ಯೂರೋ, ಮೈಸೂರು
ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘ - ಇದರ ಆಶ್ರಯದಲ್ಲಿ ಮೈಸೂರಿನಲ್ಲಿ ಡಿಸೆಂಬರ್‌ 27, 28 (ಶನಿವಾರ-ಭಾನುವಾರ, ಸ್ವಭಾನು ಸಂವತ್ಸರದ ಪುಷ್ಯ ಶುದ್ಧ ಚತುರ್ಥಿ ಮತ್ತು ಪಂಚಮಿ) ಈ ದಿನಗಳಲ್ಲಿ ನಡೆಯಲಿರುವ 3ನೇ ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಮ್ಮೇಳನದ ಕಾರ್ಯಕ್ರಮಗಳ ವಿವರ ಇಂತಿದೆ.

***

ಸ್ಥಳ: ನಂಜರಾಜ ಬಹಾದೂರ್‌ ಛತ್ರ, ವಿನೋಬಾ ರಸ್ತೆ, ಮೈಸೂರು
ದಿನಾಂಕ 27 ಡಿಸೆಂಬರ್‌ 2003; ಶನಿವಾರ
ಉದ್ಘಾಟನಾ ಸಮಾರಂಭ - ಬೆಳಿಗ್ಗೆ 8:45ಕ್ಕೆ

Chitpavan Brahmin Conference on Dec. 27, 28thಆಶೀರ್ವಚನ: ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ; ಎಡನೀರು ಮಠ, ಕಾಸರಗೋಡು
ಉದ್ಘಾಟನೆ: ಪ್ರೊ।ದಿಲೀಪ್‌ ಫಡ್ಕೆ; ಅಧ್ಯಕ್ಷರು, ಅಖಿಲ ಭಾರತ ಚಿತ್ಪಾವನ ಬ್ರಾಹ್ಮಣ ಮಹಾಸಂಘ, ನಾಸಿಕ್‌
ಸಮ್ಮೇಳನಾಧ್ಯಕ್ಷತೆ: ವೇದರತ್ನ ವೇದಕೋವಿದ ಶ್ರೀ ಕೇಶವ ಭಟ್‌ ಜೋಗಳೇಕರ್‌; ಗೋಕರ್ಣ
ಮುಖ್ಯ ಅತಿಥಿಗಳು: ಬಿ.ಎನ್‌.ವಿ ಸುಬ್ರಹ್ಮಣ್ಯ; ಅಧ್ಯಕ್ಷರು, ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು
ಎಚ್‌ ಎಸ್‌ ಲಕ್ಷ್ಮೀನಾರಾಯಣ ಭಟ್ಟ; ಉಪಾಧ್ಯಕ್ಷರು, ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು.
ಚಿತ್ಪಾವನಿಯಲ್ಲಿ ಭಾಷಣ : ಶ್ರೀಧರ ಭಿಡೆ
ಡೈರೆಕ್ಟರಿ ಮತ್ತು ’ಭಾರ್ಗವವಾಣಿ’ ವಿಶೇಷ ಸಂಚಿಕೆಯ ಬಿಡುಗಡೆ: ವಿಜಯ್‌ ಗೋರೆ; ಐ.ಎ.ಎಸ್‌
ವಸ್ತುಪ್ರದರ್ಶನ ಉದ್ಘಾಟನೆ: ವಿಜಯಾ ವಿಷ್ಣುಭಟ್‌ ಡೋಂಗ್ರೆ; ಅಧ್ಯಕ್ಷೆ, ಕಾವೇರಿ ಸ್ತ್ರೀಶಕ್ತಿ ಪ್ರತಿಷ್ಠಾನ, ಕೊಡಗು.

ಕಾರ್ಯಾಗಾರ - 1 : ಚಿತ್ಪಾವನ - ಭಾಷೆ, ಸಂಸ್ಕೃತಿ ಮತ್ತು ಪರಂಪರೆ (ಸಮಯ: ಉದ್ಘಾಟನಾ ಸಮಾರಂಭದ ಬಳಿಕ)

ನಿರ್ವಾಹಕ : ಎಂ.ದಿವಾಕರ ಡೋಂಗ್ರೆ, ಬೆಂಗಳೂರು.

ಭಾಗವಹಿಸುವವರು:
ಡಾ। ಎಂ ಪ್ರಭಾಕರ ಜೋಶಿ; ಮಂಗಳೂರು
ಡಾ। ಸ್ಮಿತಾ ಚಿಪಳೂಣಕರ್‌; ಮಂಗಳೂರು
ಕೆ ಶ್ರೀಕರ ಭಟ್‌ ಮರಾಠೆ; ಬೆಂಗಳೂರು
ಸೀತಾ ರಾಮಕೃಷ್ಣ ಬಾಪಟ್‌; ಸಾಗರ
ಪ್ರಕಾಶ್‌ ಬಾಪಟ್‌; ಬೆಳಗಾವಿ
ರತ್ನಾ ಪಟವರ್ಧನ್‌; ಬೆಂಗಳೂರು
ಎನ್‌ ಟಿ ಪರಾಂಜಪೆ; ಧಾರವಾಡ

ಕಾರ್ಯಾಗಾರ - 2 : ಸನಾತನ ಧರ್ಮ - ಸಹಚಿಂತನ (ಸಮಯ: ಅಪರಾಹ್ನ 2:30)

ನಿರ್ವಾಹಕ : ವಿದ್ವಾನ್‌ ಶ್ರೀ ವಾಸುದೇವ ಪರಾಂಜಪೆ; ಮೈಸೂರು

ಭಾಗವಹಿಸುವವರು:
ವಿದ್ವಾನ್‌ ಶ್ರೀ ತಲಾರೆ ಗಣಪತಿ ಭಟ್‌; ಬೆಂಗಳೂರು
ಡಾ। ಉಷಾ ಫಾಟಕ್‌; ಮೈಸೂರು
ಮಂಜುನಾಥ ಬಾಪಟ್‌; ಜೋಗ
ಮಲೆಹಿತ್ಲು ಪದ್ಮನಾಭ ಮರಾಠೆ; ದುರ್ಗ
ಗಣೇಶ ನಾರಾಯಣ ರಾವ್‌ ಕೇಳ್ಕರ್‌; ಪುಣೆ
ಲಕ್ಷ್ಮಣದಾಸ್‌ ವೇಳಣ್‌ಕರ್‌; ಬೆಂಗಳೂರು

ಕಾರ್ಯಾಗಾರ - 3 : ಕರ್ನಾಟಕದಲ್ಲಿ ಚಿತ್ಪಾವನ ಸಂಘಟನೆ (ಸಮಯ: ಅಪರಾಹ್ನ 2:30; ಸಮಾನಾಂತರ ಕಾರ್ಯಾಗಾರ)

ಅಧ್ಯಕ್ಷತೆ: ವಿ ಕೆ ಕೇಳ್ಕರ್‌; ಹಾವೇರಿ

ನಿರ್ವಾಹಕ: ಮನೋಹರ್‌ ಗೋಖಲೆ; ಬೆಂಗಳೂರು

ಸಾಂಸ್ಕೃತಿಕ ಕಾರ್ಯಕ್ರಮಗಳು (ಸಂಜೆ 6:00 ರಿಂದ)

***

ದಿನಾಂಕ 28 ಡಿಸೆಂಬರ್‌ 2003; ಭಾನುವಾರ

ಕಾರ್ಯಾಗಾರ - 4 : ಸ್ವ ಉದ್ಯೋಗ (ಸಮಯ: ಬೆಳಿಗ್ಗೆ 9:00)

ನಿರ್ವಾಹಕ: ಜಿ ರಾಮಚಂದ್ರ ಮೆಹೆಂದಳೆ; ಬೆಂಗಳೂರು

ಭಾಗವಹಿಸುವವರು:
ದಿವಾಕರ ದಾಮ್ಲೆ; ಉಜಿರೆ
ಸಮೀರ್‌ ಭಟ್‌ ಗೋರೆ; ಬಾಸ್ಟನ್‌, ಅಮೆರಿಕಾ
ಡಿ ಪಿ ದಿವಾಕರ ಚಿಪಳೂಣಕರ್‌; ಕಾರ್ಕಳ
ಮಾಧುರಿ ಬಾಪಟ್‌; ಸಾಗರ
ಶೈಲಜಾ ಲಿಮಯೆ; ರಾಣೆಬೆನ್ನೂರು
ಎಂ ಗೋವಿಂದ ಮರಾಠೆ; ಮಾಳ
ಸಂತೋಷ ಕುಮಾರ್‌ ಮೆಹೆಂದಳೆ; ಕಾರವಾರ
ಎಂ ವಿ ಬಾಪಟ್‌; ನಾಸಿಕ್‌

ಕಾರ್ಯಾಗಾರ - 5 : ಸ್ತ್ರೀ ಶಕ್ತಿ (ಸಮಯ: ಬೆಳಿಗ್ಗೆ 11:00)

ನಿರ್ವಹಣೆ: ವಿಜಯಾ ವಿಷ್ಣು ಭಟ್‌ ಡೋಂಗ್ರೆ; ವಿರಾಜಪೇಟೆ, ಕೊಡಗು

ಭಾಗವಹಿಸುವವರು:
ಲಲಿತಾ ಡೋಂಗ್ರೆ; ಶಿವಮೊಗ್ಗ
ಸಮೀರ್‌ ಸುನೀಲ್‌ ಜೋಶಿ; ಬಿಜಾಪುರ
ವಿದ್ಯಾ ಭಿಡೆ; ದಾವಣಗೆರೆ
ಸರೋಜಾ ಸತ್ಯೆ; ಧಾರವಾಡ
ಮಂಗಲಾ ತಾಮ್ಹನ್‌ಕರ್‌; ಹುಬ್ಬಳ್ಳಿ
ಸುಶೀಲಾ ಬಾಯ್‌ ಮರಾಠೆ; ಕಾರ್ಕಳ

ವಧು-ವರ ಸಮಾವೇಶ (ಸಮಯ: ಅಪರಾಹ್ನ 2:30)

ಲಂಗರುಗಾರ: ಚೈತನ್ಯ ಜೋಶಿ; ಕಾರವಾರ
ವಿಶೇಷ ಭಾಷಣ: ಎನ್‌ ಕೆ ಜೋಗಳೇಕರ್‌; ಧಾರವಾಡ

ಸಮಾರೋಪ ಸಮಾರಂಭ (ಸಮಯ: ಸಾಯಂ 4:00)

ಅಧ್ಯಕ್ಷತೆ: ವೇದರತ್ನ ವೇದಕೋವಿದ ಕೇಶವ ಭಟ್‌ ಜೋಗಳೇಕರ್‌; ಗೋಕರ್ಣ

‘ಚಿತ್ಪ್ರಭಾ’ ಸಂಸ್ಮರಣ ಸಂಚಿಕೆಯ ಬಿಡುಗಡೆ : ಡಾ।ಅಜಿತ್‌ ಜೋಶಿ; ಪುಣೆ

ಮುಖ್ಯ ಅತಿಥಿಗಳು:
ಸುಮಾ ವಸಂತ್‌; ಸಚಿವರು, ಮುಜರಾಯಿ ಖಾತೆ
ಅನಂತ್‌ ಕುಮಾರ್‌; ಸಂಸತ್ಸದಸ್ಯ
ಎ ರಾಮದಾಸ್‌; ಶಾಸಕ, ವಿಧಾನಸಭಾ ಕ್ಷೇತ್ರ ಮೈಸೂರು
ಶತಾವಧಾನಿ ಆರ್‌ ಗಣೇಶ್‌; ಬೆಂಗಳೂರು
ಜ್ಯೋತ್ಸ್ನಾ ಬೋಡಸ್‌; ಪುಣೆ
ಕರುಣಾಕರ ಗೋಗಟೆ; ಹೊಸಮಠ

ಸಮಾರೋಪ ಭಾಷಣ: ರಾಮನಾಥ ಭಟ್‌ ಗೋರೆ; ಮೈಸೂರು

- ಶಾಂತಿ ಪಾಠ -

***

ಸಮ್ಮೇಳನದ ಸ್ವಾಗತ ಸಮಿತಿ:

ವಿಜಯ್‌ ಗೋರೆ; ಗೌರವಾಧ್ಯಕ್ಷ
ಎಂ ಬಾಲಚಂದ್ರ ಡೋಂಗ್ರೆ; ಅಧ್ಯಕ್ಷ
ವಿ ಕೆ ಕೇಳ್ಕರ್‌; ಗೌರವಾಧ್ಯಕ್ಷ; ಅ.ಕ.ಚಿ.ಬ್ರಾಹ್ಮಣ ಸಂಘ, ಹುಬ್ಬಳ್ಳಿ
ಡಿ ಹೃಷಿಕೇಶ ಹೆಬ್ಬಾರ್‌ ಗೋಗಟೆ; ಕಾರ್ಯದರ್ಶಿ
ಚೈತನ್ಯ ಜೋಶಿ; ಕಾರ್ಯದರ್ಶಿ, ಅ.ಕ.ಚಿ.ಬ್ರಾಹ್ಮಣ ಸಂಘ, ಹುಬ್ಬಳ್ಳಿ
ಇತರ ಎಲ್ಲ ಸದಸ್ಯರು

***

ಸಮ್ಮೇಳನದ ಬಗ್ಗೆ ಇತರ ಕೆಲವು ವಿವರಗಳು:

  • ಸಮ್ಮೇಳನದ ಶುಭಾರಂಭವು ಪೂರ್ಣಕುಂಭಸ್ವಾಗತದೊಂದಿಗೆ. ಅದಾದ ಬಳಿಕ, ಪ್ರಾರ್ಥನೆಯ ಬದಲಿಗೆ ಒಂದು ನೃತ್ಯ ವೈಭವ.
  • ಚಿತ್ಪಾವನ ಸಂಪ್ರದಾಯದ ವಸ್ತುಗಳ ಪ್ರದರ್ಶನ ಮತ್ತು ಚಿತ್ಪಾವನಿ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಮಾರಾಟ ಮಳಿಗೆಗಳಿರುತ್ತವೆ.
  • ಸಮ್ಮೇಳನ ನಡೆಯುವ ಸ್ಥಳವು ಮೈಸೂರು ನಗರದ ಹೃದಯ ಭಾಗದಲ್ಲೇ ಇದ್ದು , ರೈಲ್ವೆ ನಿಲ್ದಾಣಕ್ಕೂ ಸಮೀಪದಲ್ಲೇ ಇದೆ. ಈ ಛತ್ರವು ಸುಮಾರು 120 ವರ್ಷ ಹಳೆಯ ಕಟ್ಟಡವಾಗಿದ್ದು ರಾಜಮನೆತನದ ಶೈಲಿಯಲ್ಲಿದೆ. ವಿಪುಲ ಪಾರ್ಕಿಂಗ್‌ ವ್ಯವಸ್ಥೆಯಿದೆ. ನೀರು ಸರಬರಾಜಿನ ತೊಂದರೆಯಿಲ್ಲ. ಸದ್ಯೋಭವಿಷ್ಯದಲ್ಲಿ ರಾಜಕೀಯ ಚಳುವಳಿಗಳಾವುವೂ ನಿರೀಕ್ಷಿತವಿಲ್ಲ.
  • ಊಟ/ತಿಂಡಿ ವ್ಯವಸ್ಥೆ ಡಿ 26 ರ ಸಂಜೆಯಿಂದ 28ರ ರಾತ್ರೆಯವರೆಗೂ ಇದೆ.
  • ಛತ್ರವು ಡಿ 26 ಬೆಳಿಗ್ಗೆಯಿಂದ ಡಿ 29 ಸಂಜೆಯವರೆಗೂ ಲಭ್ಯವಿದ್ದು , ಸಮ್ಮೇಳನಾನಂತರ ಮೈಸೂರುದರ್ಶನ ಮಾಡಬಯಸುವವರಿಗೂ ಅನುಕೂಲವಿದೆ.
ನಿಖರ ಮಾಹಿತಿಯೇನಾದರೂ ಬೇಕಿದ್ದರೆ ಸಂಪರ್ಕಿಸಲು ಇ-ವಿಳಾಸ :
[email protected]


ಇದನ್ನೂ ಓದಿ-
ಸಂಧ್ಯಾವಂದನೆಗೆ ವೈಜ್ಞಾನಿಕ ಆಧಾರವಿದೆ-ಲಕ್ಷ್ಮೀನಾರಾಯಣ ಭಟ್‌


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X