Bengaluru Sub Urban Rail: ಕನಕ ಕಾರಿಡಾರ್‌ನ ಹುಸ್ಕೂರ್ ನಿಲ್ದಾಣ ಕಾಮಗಾರಿ, ಗರ್ಡರ್ ಅಳವಡಿಕೆ ಯಶಸ್ವಿ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ (BSRP) ನಾಲ್ಕನೇ ಕಾರಿಡಾರ್ 'ಕನಕ' ಮಾರ್ಗದ ಕಾಮಗಾರಿಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಹುಸ್ಕೂರ್ ರೈಲು ನಿಲ್ದಾಣಕ್ಕಾಗಿ ಟಿ- ಗರ್ಡರ್ ನಿರ್ಮಾಣ ಕೆಲಸ ಶುಕ್ರವಾರ (ಮೇ 8) ರಂದು ಪೂರ್ಣಗೊಳಿಸಲಾಗಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ತಿಳಿಸಿದೆ.

ಕೆ-ರೈಡ್ ಅಧಿಕಾರಿಗಳು ಈ ಬಗ್ಗೆ ಎಸ್‌ ಪೋಸ್ಟ್ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಒಟ್ಟು16.5 ಮೀಟರ್‍‌ ಉದ್ದವಿದ್ದು, ಇದರ ಮೇಲ್ಭಾಗವು 14.97 ಮೀಟರ್ ಇದ್ದು, ಒಟ್ಟು 1.49 ಮೀ ಎತ್ತರವಿದೆ. 5.156 ಮೆಟ್ರಿಕ್ ಟನ್ ಉಕ್ಕು ಮತ್ತು 14.90 ಮೀಟರ್ ಕಾಂಕ್ರೀಟ್‌ನಂತಹ ವಿನ್ಯಾಸಗಳನ್ನು ಒಳಗೊಂಡಿದೆ.

K-RIDE

ಬೆಂಗಳೂರು ಉಪನಗರ ರೈಲು ಯೋಜನೆಯ ಕನಕ ಕಾರಿಡಾರ್ ಮಾರ್ಗವು ಹೀಲಲಿಗೆಯಿಂದ ಕಗ್ಗದಾಸಪುರದವರೆಗಿನ 20 ಕಿಲೋ ಮೀಟರ್ ಕಾಮಗಾರಿ ಕಳೆದ 2024ರಲ್ಲಿ ಆರಂಭಿಸಲಾಯಿತು. ಸದ್ಯ ನಿಲ್ದಾಣ ಕಾಮಗಾರಿಯಲ್ಲಿ ಇಂದಿನ ಗರ್ಡರ್ ಅಳವಡಿಕೆಯು ಪ್ರಮುಖ ಬೆಳವಣಿಗೆಯನ್ನು ಸೂಚಿಸುತ್ತದೆ. ಇದೊಂದು ರಚನಾತ್ಮಕ ಪ್ರಗತಿ ಎಂದು ಕೆ-ರೈಡ್ ತಿಳಿಸಿದೆ. ಮುಂದಿನ ವರ್ಷ 2027ರ ಮಾರ್ಚ್ ತಿಂಗಳಾಂತ್ಯದ ಹೊತ್ತಿಗೆ ಈ ಮಾರ್ಗದ ನಿರ್ಮಾಣ ಕೆಲಸ ಪೂರ್ಣಗೊಳಿಸಲು ಕೆ-ರೈಡ್ ಗುರಿ ಹಾಕಿಕೊಂಡಿದೆ.

Namma Metro: ನಾಳೆ ಭಾನುವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ, ಎಲ್ಲೆಲ್ಲಿ?
Namma Metro: ನಾಳೆ ಭಾನುವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ, ಎಲ್ಲೆಲ್ಲಿ?

ಹುಸ್ಕೂರು ನಿಲ್ದಾಣವು ಹೀಲಲಿಗೆ-ರಾಜನಕುಂಟೆ ಜೋಡಣೆ ಮಾರ್ಗದಲ್ಲಿ ತಲೆ ಎತ್ತಲಿದೆ. ಈ ಪ್ರದೇಶದಲ್ಲಿ ಹಿಂದಿನ ಹಳಿ ದ್ವಿಗುಣಗೊಳಿಸುವ ಕೆಲಸಗಳು ನಡೆಯುತ್ತಿವೆ. ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿ ಬಳಿ ಪ್ರಯಾಣವನ್ನು ಸುಲಭಗೊಳಿಸುವ ಗುರಿ ಇದೆ.

ಮಲ್ಲಿಗೆ: ಐ ಗರ್ಡರ್ ಸ್ಥಾಪನೆ ಯಶಸ್ವಿ

ಇತ್ತೀಚೆಗೆ ಮಲ್ಲಿಗೆ ಕಾರಿಡಾರ್ ಮಾರ್ಗದಲ್ಲೂ ಸಹಿತ ಕೆ-ರೈಡ್ ಕಾಮಗಾರಿಯಲ್ಲಿ ಬೆಳವಣಿಗೆ ಆಗಿದ್ದು, 22.9 ಮಿಟರ್ ಉದ್ದದ ಮತ್ತು 1800ಮೀಟರ್ ಎತ್ತರದ (ಮೇಲಿನ ಅಗಲ 160 ಮಿಮೀ, ಕೆಳಭಾಗ 860 ಮಿಮೀ.) ಐ ಗರ್ಡರ್ ಅನ್ನು ಸ್ಥಾಪಿಸುವಯಲ್ಲಿ ಕೆ-ರೈಡ್ ಯಶಸ್ವಿಯಾಗಿದೆ. ಒಟ್ಟು 3.50 ಮೆಟ್ರಿಕ್ ಟನ್ ಉಕ್ಕು ಹಾಗೂ ಕಾಂಕ್ರೀಟ್ ಒಳಗೊಂಡ ಗರ್ಡರ್ ಇದಾಗಿದೆ.

ಯಶವಂತಪುರ-ಸೋಲದೇವನಹಳ್ಳಿ ಮಲ್ಲಿಗೆ ಕಾರಿಡಾರ್ ಮಾರ್ಗದಲ್ಲಿ ಪ್ರಮುಖ ಮೈಲಿಗಲ್ಲು ಇದು ಎಂದು ಕೆ-ರೈಡ್ ಬಣ್ಣಿಸಿದೆ. ಈ ಮಾರ್ಗವನ್ನು ಕಳೆದ 2024ರ ಡಿಸೆಂಬರ್ 17ರಂದು ಆರಂಭಿಸಲಾಗಿತ್ತು.

ಬಿಎಸ್‌ಆರ್ ಪಿ ಯೋಜನೆ ಗಡುವು ವಿಸ್ತರಣೆ

ಬೆಂಗಳೂರು ಉಪನಗರ ರೈಲು ಯೋಜನೆಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು 40 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ನೀಡಿದ್ದರು. ಆದರೆ ಭೂಮಿ ಸ್ವಾಧೀನ, ರೈಲ್ವೆ ಅಧಿಕಾರಿಗಳಿಂದ ಭೂಮಿ ಹಸ್ತಾಂತರ ಪ್ರಕ್ರಿಯೆ ವಿಳಂಬ, ಗುತ್ತಿಗೆದಾರರ ಬದಲಾವಣೆ, ಹಾಗೂ ಇನ್ನಿತರ ಕಾರಣಗಳಿಂದ ಕಾಮಗಾರಿ ತಡವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒದಗಿಸುವ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈ ಮಾರ್ಗವು 2030ಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತುದೆ. ಇತ್ತೀಚಿಗೆ ಆ ಗಡುವು ವಿಸ್ತರಿಸಿದ್ದು, 2031ಕ್ಕೆ ಯೋಜನೆ ಮುಗಿಸಿ ಸಂಚಾರ ಅಣಿ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+