ಎದೆಗೆ ಸಂದ ಮಳೆಬಿಲ್ಲು
- ರಘುನಾಥ ಚ.ಹ.
[email protected]
ಜೋರು ಮಳೆ ಸುರೀತಿದೆಧಾರೆಗೆ ಮಯ್ಯಾಡ್ಡಿಕೊಂಡು ಬಿಗಿದುಕೊಂಡಿರುವ
ಕೋಣದಂಥ ಕಲ್ಲು ಗುಂಡಿನ ಮೇಲೆ
ಒಬ್ಬಳು ಹುಡುಗಿ
ಹುಡುಗರಿಬ್ಬರು
ಮೂವರ ತಲೆಮೇಲೆ
ಕಪ್ಪು ಕೊಡೆಗಳೆರಡು ಆಡುತಿದಾವೆ
ಮಾತಾಡಿಕೋತ ನಗೆ ಹಂಚಿಕೋತ
ಮಳೆಯ ಇರುವು ಮರೆತಿದಾರೆ
ಅದೇ ಹೊತ್ತಿಗೆ ಹೆಬ್ಬಾವಿನಂಥ
ಹೆದ್ದಾರಿಯ ಮೇಲೆ ಸಾಗಿ ಬರುತ್ತೆ ಬಸ್ಸು
ಕಿಟಕಿ ಬದಿ ಕೂತು
ನೀರಿಳಿವ ಗಾಜ ಹೊರಗೆ ಕಣ್ಣು ಹಾಯಿಸಿದವರಿಗೆ
ಆ ಮೂವರು ಕಾಣುತಾರೆ
ಹುಚ್ಚರಂತೆ ಉಢಾಳರಂತೆ ಬೇವಾರ್ಸಿಗಳಂತೆ
ಒಂದೊಂದು ಥರ ಒಬ್ಬೊಬ್ಬರಿಗೆ
ಸ್ವೆಟರಿನೊಳಗೆ ಜೀವ ಹುದುಗಿಸಿ ಕೂತ
ಸಂಜೆ ವಯಸ್ಸಿನವರೊಬ್ಬರಿಗೆ ಮಾತ್ರ
ಮಳೆ ಮರೆತು ಕೂತ ಅವರ ಕಂಡು
ಎದೆಯಾಳಗೆ ಮಳೆ ಸುರಿಯುತ್ತದೆ.












Click it and Unblock the Notifications