‘ಕನ್ನಡ- ಕನ್ನಡ, ಬರ್ರಿನಮ್ಮ ಸಂಗಡ’ ಮತ್ತು ತ್ರಿವೇಣಿ ಸಂಸ್ಮರಣೆ
ಬೆಂಗಳೂರು : ತಮ್ಮ ಕಾದಂಬರಿಗಳು ಚಲನಚಿತ್ರವಾಗಬೇಕು ಅನ್ನುವ ಆಸೆಯನ್ನು ತ್ರಿವೇಣಿ ಹೊಂದಿದ್ದರು. ಅವರು ಜೀವಂತವಿದ್ದಾಗ ಅವರ ಕಾದಂಬರಿಗಳು ಸಿನಿಮಾ ಆಗಲಿಲ್ಲ . ನಿಧನಾನಂತರ ಕೆಲವು ಕಾದಂಬರಿಗಳು ಸಿನಿಮಾ ಆದರೂ, ಅವರ ಬಹುತೇಕ ಕಾದಂಬರಿಗಳಿಗೆ ಸಿನಿಮಾ ಮಾಧ್ಯಮದಲ್ಲಿ ನ್ಯಾಯ ದೊರೆತಿಲ್ಲ ಎಂದು ಲೇಖಕಿ ಆರ್ಯಾಂಬ ಪಟ್ಟಾಭಿ ವಿಷಾದಿಸಿದ್ದಾರೆ.
ತ್ರಿವೇಣಿ ಸಂಸ್ಮರಣೆ ಹಾಗೂ ಸಾಹಿತಿ ಚಂದ್ರಶೇಖರ ಪಾಟೀಲ ಅವರ ‘ಕನ್ನಡ- ಕನ್ನಡ, ಬರ್ರಿ ನಮ್ಮ ಸಂಗಡ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಆರ್ಯಾಂಬ ಪಟ್ಟಾಭಿ ಮಾತನಾಡುತ್ತಿದ್ದರು. ವಿಮರ್ಶಕರ ಬಗ್ಗೆ ತ್ರಿವೇಣಿ ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ . ಓದುಗರೇ ನಿಜವಾದ ವಿಮರ್ಶಕರು ಎಂದು ಅವರು ಸದಾ ಹೇಳುತ್ತಿದ್ದುದನ್ನು ಆರ್ಯಾಂಬ ಸ್ಮರಿಸಿಕೊಂಡರು.
ಪುರುಷ ಸಾಹಿತಿಗಳು ಮಹಿಳಾ ಸಾಹಿತ್ಯದ ಬಗೆಗೆ ತಾತ್ಸಾರ ಮನೋಭಾವನೆ ವ್ಯಕ್ತಪಡಿಸುವ ಬಗ್ಗೆ ತೀವ್ರ ವಿಷಾದ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಅವರು, ಮಹಿಳಾ ಸಾಹಿತಿಗಳು ಒಂದೆಡೆ ಸೇರಿ ಚರ್ಚಿಸುವ ಉದ್ದೇಶದಿಂದ ಈ ಮುನ್ನ ನಡೆಯುತ್ತಿದ್ದ ಮಹಿಳಾ ಸಾಹಿತ್ಯ ಸಮ್ಮೇಳನಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದರು.
ಗೋಕಾಕ ಚಳವಳಿ ನೆನಪುಗಳು
‘ಕನ್ನಡ- ಕನ್ನಡ, ಬರ್ರಿ ನಮ್ಮ ಸಂಗಡ’ ಪುಸ್ತಚಕ ಬಿಡುಗಡೆ ಮಾಡಿದ ಹಿರಿಯ ಲೇಖಕ ಡಾ. ಹಂ.ಪ.ನಾಗರಾಜಯ್ಯ, ಈ ಪುಸ್ತಕದ ಮೂಲಕ ಗೋಕಾಕ್ ಚಳವಳಿಯ ನೆನಪುಗಳನ್ನು ಮೆಲುಕು ಹಾಕಬಹುದಾಗಿದೆ ಎಂದರು. ಲೇಖಕಿ ಡಾ। ಎನ್.ಗಾಯತ್ರಿ ಅವರು ತ್ರಿವೇಣಿ ಸಾಹಿತ್ಯ ಕುರಿತು ಮಾತನಾಡಿದರು.
ಸಣ್ಣ ಚೌಕಟ್ಟಿನಲ್ಲಿಯೇ ಬದುಕಿನ ವೈರುಧ್ಯಗಳನ್ನು ಮನೋಜ್ಞ ಪಾತ್ರಗಳನ್ನಾಗಿಸಿದ್ದು ತ್ರಿವೇಣಿ ಅವರ ಅಗ್ಗಳಿಕೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂಪಾ ಬಣ್ಣಿಸಿದರು. ಸಾಹಿತಿಗಳ ಬಗ್ಗೆ ಜನತೆ ಭ್ರಮೆ ಇಟ್ಟುಕೊಳ್ಳಬೇಕಿಲ್ಲ . ಸಾಹಿತಿಗಳ ಸಾಮಾನ್ಯ ಮನುಷ್ಯರೇ ಎಂಬ ತರ್ಕ ಮಂಡಿಸಿದ ಚಂಪಾ, ಬದುಕು ಹಾಗೂ ಬರಹಗಳನ್ನು ಪ್ರತ್ಯೇಕವಾಗಿ ನೋಡಬೇಕು ಎಂದರು.
ಕನ್ನಡ ಕ್ರಿಯಾ ಸಮಿತಿ ಕಾರ್ಯಾಧ್ಯಕ್ಷ ವಿ.ಎಚ್.ಚನ್ನೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications