ಯೂಟ್ಯೂಬ್‌ನಲ್ಲೂ AI-ಚಾಲಿತ ಸಂವಾದಾತ್ಮಕ ಸರ್ಚ್‌ ಟೂಲ್‌: ಏನಿದು ತಿಳಿಯಿರಿ "ಆಸ್ಕ್ YouTube" ಫೀಚರ್‌

ಕಂಪ್ಯೂಟರ್‌ ಯುಗ ಹೋಗಿದೆ, ಇದೀಗ ಏನಿದ್ದರೂ ಕೃತಕ ಬುದ್ದಿಮತ್ತೆಯ ಕಾಲ. ಕೃತಕ ಬುದ್ದಿ ಮತ್ತೆ ಎಲ್ಲಾ ಕ್ಷೇತ್ರಗಳಿಗೂ ಪ್ರವೇಶ ಮಾಡಿದೆ. ಯೂಟ್ಯೂಬ್‌ ಕೂಡಾ ಇದಕ್ಕೆ ಹೊರತಲ್ಲ. ಕೃತಕ ಬುದ್ದಿ ಮತ್ತೆ ಬಳಸಿ ಗ್ರಾಹಕರಿಗೆ ಹೊಸ ಫೀಚರ್‌ ನೀಡಲು ಯೂಟ್ಯೂಬ್‌ ಇದೀಗ ಮುಂದಾಗಿದೆ. AI ಆಧಾರಿತ ಸಂವಾದಾತ್ಮಕ ಟೂಲ್‌ ಹೊರ ತರಲು ಯೂಟ್ಯೂಬ್‌ ಪ್ರಯತ್ನಿಸುತ್ತಿದೆ.

ಹೌದು, YouTube ಹೊಸ AI-ಚಾಲಿತ ಫೀಚರ್‌ ಹೊರತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬಳಕೆದಾರರ ಕೆಲಸವನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಈಗ ಆಸ್ಕ್ YouTube ಎಂಬ ಹೊಸ AI-ಚಾಲಿತ ಸಂವಾದಾತ್ಮಕ ಸರ್ಚ್‌ ಟೂಲ್‌ ನ ಟೆಸ್ಟಿಂಗ್‌ ನಡೆಸುತ್ತಿದೆ. ಅಂದರೆ ಇನ್ನು ಮುಂದೆ ಬಳಕೆದಾರರು ತಮಗೆ ಬೇಕಾದ ವಿಷಯದ ಬಗ್ಗೆ ಕೀ ವರ್ಡ್‌ ಗಳನ್ನು ಹಾಕಿ ಸರ್ಚ್‌ ಮಾಡುವ ಅವಶ್ಯಕತೆಯಿರುವುದಿಲ್ಲ. ಬದಲಾಗಿ ತಮ್ಮ ಮಾತಿನ ದಾಟಿಯಲ್ಲಿಯೇ ತಮ್ಮ ಸರಳ ಭಾಷೆಯ ಮೂಲಕ ಪ್ರಶ್ನೆಗಳನ್ನು ಕೇಳಬಹುದು. ನಮ್ಮ ಪ್ರಶ್ನೆಗೆ ಅನುಗುಣವಾಗಿ AI-ರಚಿತ ಪಠ್ಯ ಸಾರಾಂಶಗಳು, ಸಣ್ಣ ಕ್ಲಿಪ್‌ಗಳು ಮತ್ತು ದೀರ್ಘ ವೀಡಿಯೊಗಳನ್ನು ಪಡೆಯಬಹುದು. ಇಲ್ಲಿ ಸರ್ಚ್‌ ಮಾಡುವ ವೇಳೆ ನಾವು ಯಾರ ಜೊತೆಗೋ ಸಂಭಾಷಣೆ ನಡೆಸುವಂತೆ ಭಾಸವಾಗುತ್ತದೆ. ಅಂದರೆ ನಾವು ಸರ್ಚ್‌ ಮಾಡುವ ವಿಷಯದ ಆಧಾರದಲ್ಲಿ ಒಂದು ವೇಳೆ ವಿಡಿಯೋ ಅಥವಾ ಕ್ಲಿಪ್‌ ಗಳು ಸಿಗದೇ ಹೋದರೆ ನಮ್ಮ ಮುಂದಿನ ಪ್ರಶ್ನೆಗಳನ್ನು ಕೇಳಲು ಇದು ಅನುವು ಮಾಡಿಕೊಡುತ್ತದೆ.

YouTube AI Feature

ಹೊಸ ಆಸ್ಕ್ ಯೂಟ್ಯೂಬ್ ಟೂಲ್‌, ಪ್ಲಾಟ್‌ಫಾರ್ಮ್‌ನ ಯೂಟ್ಯೂಬ್ ಲ್ಯಾಬ್ಸ್ ನಲ್ಲಿ ಲಭ್ಯವಿದೆ. ಸದ್ಯಕ್ಕೆ ಇದರ ಆಕ್ಸೆಸ್‌ ಅನ್ನು ಯುಎಸ್‌ನಲ್ಲಿರುವ ಪ್ರೀಮಿಯಂ ಚಂದಾದಾರರಿಗೆ ಮಾತ್ರ ನೀಡಲಾಗಿದೆ. ಅವರು ಲ್ಯಾಬ್ಸ್ ವೆಬ್‌ಸೈಟ್ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಈ ಟೆಸ್ಟಿಂಗ್‌ ಅವಧಿಯು ಜೂನ್ 8, 2026 ರವರೆಗೆ ಇರಲಿದೆ. ಎಲ್ಲರಿಗೂ ಈ ಹೊಸ ಫೀಚರ್‌ ಅನ್ನು ಬಿಡುಗಡೆ ಮಾಡುವ ಮುನ್ನ ಗ್ರಾಹಕರ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಕೆಲವೇ ಗ್ರಾಹರಿಗೆ ಅಂದರೆ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಇದರ ಬಳಕೆಯನ್ನು ಸೀಮಿತಗೊಳಿಸಲಾಗಿದೆ.

ಅರ್ಹ ಪ್ರೀಮಿಯಂ ಸದಸ್ಯರಿಗೆ ಈ ಹೊಸ ವೈಶಿಷ್ಟ್ಯಗಳನ್ನು ಪ್ರಯತ್ನಿಸುವ ಆರಂಭಿಕ ಅವಕಾಶ ನೀಡಲಾಗಿದೆ. ಪ್ರೀಮಿಯಂ ಸದಸ್ಯರು ಜಾಹೀರಾತು-ಮುಕ್ತ YouTube, ಡೌನ್‌ಲೋಡ್‌ಗಳು ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ಯುಟ್ಯೂಬ್‌ ಹೇಳಿದೆ.

ಲ್ಯಾಪ್‌ಟಾಪ್ ಚಾರ್ಜರ್‌ನಲ್ಲೊಂದು ಪುಟ್ಟ ಸಿಲಿಂಡರ್ ಇದೆ! ಅದು ಏಕೆ ಮುಖ್ಯ ಗೊತ್ತಾ?ಇಲ್ಲಿದೆ ಸಂಪೂರ್ಣ ಮಾಹಿತಿ
ಲ್ಯಾಪ್‌ಟಾಪ್ ಚಾರ್ಜರ್‌ನಲ್ಲೊಂದು ಪುಟ್ಟ ಸಿಲಿಂಡರ್ ಇದೆ! ಅದು ಏಕೆ ಮುಖ್ಯ ಗೊತ್ತಾ?ಇಲ್ಲಿದೆ ಸಂಪೂರ್ಣ ಮಾಹಿತಿ

ಆಸ್ಕ್ ಯೂಟ್ಯೂಬ್ ಟೂಲ್‌ ಅನ್ನು ಬಳಸುವುದು ಹೇಗೆ?:

ಆಸ್ಕ್ ಯೂಟ್ಯೂಬ್ ಟೂಲ್‌ ಅನ್ನು ಹೇಗೆ ಬಳಸುವುದು ಎನ್ನುವುದನ್ನು ವಿವರಿಸಲು YouTube ಸ್ಯಾಂಪಲ್‌ ಪ್ರಾಂಪ್ಟ್‌ಗಳನ್ನು ಶೇರ್‌ ಮಾಡಿದೆ. ಅವುಗಳೆಂದರೆ

* "ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಾಂತಾ ಬಾರ್ಬರಾ ನಡುವೆ 3 ದಿನಗಳ ರಸ್ತೆ ಪ್ರವಾಸ."

* "ಮರುಬಳಕೆಯ ವಸ್ತುಗಳನ್ನು ಬಳಸಿಕೊಂಡು ಲಿವಿಂಗ್‌ ರೂಮ್‌ನ ಮರುವಿನ್ಯಾಸ.

* "ಸಾಂಪ್ರದಾಯಿಕ ಫ್ರೆಂಚ್ ಆಮ್ಲೆಟ್ ಮಾಡುವುದು ಹೇಗೆ."

ಈ ಉದಾಹರಣೆಗಳು Ask YouTube ಟೂಲ್‌ ಯಾವ ರೀತಿ ನಮ್ಮ ಸರ್ಚ್‌ ಗೆ ತಕ್ಕಂತೆ ಕಟೆಂಟ್‌ ನೀಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಇದು ಜೀವನಶೈಲಿಗೆ ಸಂಬಂಧಿಸಿದ ವಿಷಯಗಳು, DIY ಯೋಜನೆಗಳು ಮತ್ತು ವಿಷಯಾದಾರಿತ ಸರ್ಚ್‌ ಅನ್ನು ಹೇಗೆ ಅರ್ಥಗರ್ಭಿತ ರೀತಿಯಲ್ಲಿ ಬೆಂಬಲಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.

ವಾಟ್ಸಾಪ್ ಪ್ಲಸ್ ಎನ್ನು ಹೊಸ ಫೀಚರ್‌ ಪರಿಚಯಿಸಿದ ಮೆಟಾ: ಸಬ್‌ಸ್ಕ್ರೈಬ್ ಆಗಬೇಕಾದರೆ ಎಷ್ಟು ಹಣ ಪಾವತಿಸಬೇಕು?
ವಾಟ್ಸಾಪ್ ಪ್ಲಸ್ ಎನ್ನು ಹೊಸ ಫೀಚರ್‌ ಪರಿಚಯಿಸಿದ ಮೆಟಾ: ಸಬ್‌ಸ್ಕ್ರೈಬ್ ಆಗಬೇಕಾದರೆ ಎಷ್ಟು ಹಣ ಪಾವತಿಸಬೇಕು?

ಇತರ AI ಪ್ರಯೋಗಗಳು:

Ask YouTube ಯೂಟ್ಯೂಬ್‌ ಲ್ಯಾಬ್‌ಗಳ ಅಡಿಯಲ್ಲಿನ AI ಪ್ರಯೋಗಗಳ ಒಂದು ಭಾಗವಾಗಿದೆ. ಇಲ್ಲಿ ಪ್ರಸ್ತುತ ಪರೀಕ್ಷಿಸಲಾಗುತ್ತಿರುವ ಇತರ ವೈಶಿಷ್ಟ್ಯಗಳು:

ಬಿಯಾಂಡ್ ದಿ ಬೀಟ್ (ಯೂಟ್ಯೂಬ್ ಮ್ಯೂಸಿಕ್): ರೇಡಿಯೋ ಅಥವಾ ಮ್ಯೂಸಿಕ್‌ ಕೇಳುವಾಗ AI- ರಚಿತ ಇನ್‌ಸೈಟ್‌ಗಳನ್ನು ಸೇರಿಸಲಾಗುತ್ತದೆ.

ವೈಬ್‌ಚೆಕ್ (ಯೂಟ್ಯೂಬ್ ಶಾರ್ಟ್ಸ್): ಶಾರ್ಟ್‌ ವೀಡಿಯೊಗಳನ್ನು ಪಬ್ಲಿಶ್‌ ಮಾಡುವ ಮೊದಲು AI ಕೋಚಿಂಗ್‌ ಟಿಪ್ಸ್‌ಗಳನ್ನು ಒದಗಿಸುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+