World Idli Day: ದಕ್ಷಿಣ ಭಾರತೀಯರ ನೆಚ್ಚಿನ ತಿಂಡಿ 'ಇಡ್ಲಿ' ಹವಾ ಬಾಹ್ಯಾಕಾಶದಲ್ಲೂ ಇದೆ!
'ಇಡ್ಲಿ'.. ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಎಲ್ಲಾ ಕಾಲಕ್ಕೂ ಸಲ್ಲುವ ತಿಂಡಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ. ದಕ್ಷಿಣ ಭಾರತೀಯರ ನೆಚ್ಚಿನ ಖಾದ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಡ್ಲಿಗೂ ಒಂದು ದಿನವಿದೆ. ಅದೇ ಮಾರ್ಚ್ 30. ಇದೇ ವೇಳೆಯಲ್ಲಿ ಈ ದಿನದ ವಿಶೇಷತೆಗಳನ್ನು ತಿಳಿಯಿರಿ.
ತಯಾರಿಸಲು ಸುಲಭವಾಗುವ ಮತ್ತು ಸುಲಭವಾಗಿ ಜೀರ್ಣವಾಗುವ ಈ ಇಡ್ಲಿ. ಭಾರತೀಯರ ಮೂಲದಲ್ಲ ಎಂಬುದು ಇಲ್ಲಿ ವಿಶೇಷ. ಆವಿಯಲ್ಲಿಯೇ ಬೇಯುವ ಈ ಆಹಾರ ಶೀಘ್ರದಲ್ಲೇ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದೆ ಎಂಬುದು ಸದ್ಯದ ಅಪ್‌ಡೇಟ್. ಅಂದರೆ.. ಮುಂದೆ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೆ ಆಹಾರವಾಗಲಿದೆ.

ವಿಶ್ವ ಇಡ್ಲಿ ದಿನದಂದೂ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುವ, ಹಬೆಯಲ್ಲಿ ಚೆನ್ನಾಗಿ ಬೇಯಿಸುವ ಈ ಇಡ್ಲಿಯನ್ನು ಬಿಸಿ ಬಿಸಿ ಸಾಂಬಾರ್ ಮತ್ತು ಕಾಯಿ ಚಟ್ನಿಯ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ. ಈಗಾಗಲೇ ಇಡ್ಲಿಯನ್ನು ದಕ್ಷಿಣ ಭಾರತೀಯರು ಹೆಚ್ಚಾಗಿ ಬಳಸುವ ಕಾರಣ ಅದನ್ನು ದಕ್ಷಿಣ ಭಾರತದ್ದೆ ಒಂದು ಆಹಾರ ಎಂದುಕೊಳ್ಳಲಾಗಿದೆ. ಆದರೆ, ಇದು ಭಾರತೀಯ ಫುಡ್ ಅಲ್ಲ ಅನ್ನೋದು ನಿಮಗೆ ಗೊತ್ತಾ?
ಹೌದು.. ಇಡ್ಲಿ ದಕ್ಷಿಣ ಔಆರತದ ಫುಡ್ ಅಲ್ಲ. ಪ್ರಸಿದ್ಧ ಆಹಾರ ವಿಜ್ಞಾನಿ ಮತ್ತು ಆಹಾರ ಇತಿಹಾಸಕಾರರಾದ ಕೆ.ಟಿ.ಆಚಾರ್ಯ ಅವರ ಪ್ರಕಾರ ಇಡ್ಲಿಯ ಮೂಲ ಇಂದಿನ ಇಂಡೋನೇಷ್. 7 ರಿಂದ 12 ನೇ ಶತಮಾನದಲ್ಲೇ ಇಡ್ಲಿ ಇಂಡೋನೇಷಿಯಾದಲ್ಲಿ 'ಕೆಡ್ಲಿ' ಅಥವಾ 'ಕೇದಾರಿ' ಹೆಸರಿನಿಂದ ಫೇಮಸ್ ಆಗಿತ್ತು.

ಗಗನಯಾತ್ರಿಗಳಿಗೆ ಆಹಾರವಾಗಲಿದೆ ಇಡ್ಲಿ
ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳ ಮೆನುವಿನಲ್ಲಿ ನಮ್ಮ ಅತ್ಯಂತ ನೆಚ್ಚಿನ ಉಪಹಾರ ಇಡ್ಲಿ ಇದೆ. ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ (DFRL) ಪ್ರಕಾರ, ಗಗನಯಾತ್ರಿಗಳೊಂದಿಗೆ ಸಾಂಬಾರ್ ಪುಡಿ ಮತ್ತು ತೆಂಗಿನಕಾಯಿ ಚಟ್ನಿಯ ಪ್ಯಾಕ್‌ಗಳ ಜೊತೆಗೆ ರೂಪಾಯಿಯ ನಾಣ್ಯಗಳ ಗಾತ್ರದ ಸಣ್ಣ ಇಡ್ಲಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
700º C ತಾಪಮಾನದಲ್ಲಿ ಅತಿಗೆಂಪು ವಿಕಿರಣವನ್ನು ಬಳಸಿ ಇಡ್ಲಿಗಳನ್ನು ಒಣಗಿಸಲಾಗುತ್ತದೆ. ಇದನ್ನು ಮೈಕ್ರೊವೇವ್ ಮಾಡುವ ಮೂಲಕ ತೇವಾಂಶರಹಿತವಾಗಿರುತ್ತದೆ. ಹೀಗಾಗಿ ಈ ಇಡ್ಲಿ ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಫೇಮಸ್ ಫುಡ್.
ಇಡ್ಲಿ ಇತಿಹಾಸ
ಇಡ್ಲಿ ಇತಿಹಾಸ ವಿವಾದಾತ್ಮಕ ವಿಷಯವಾಗಿದ್ದರೂ, ಕೆಲವು ಆಹಾರ ಇತಿಹಾಸಕಾರರು ಇಡ್ಲಿಯು ಮೊದಲು ಇಂಡೋನೇಷ್ಯಾದಲ್ಲಿ ಹುಟ್ಟಿಕೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, 800-1200 CE ನಲ್ಲಿ ಆವಿಯಲ್ಲಿ ತಿಂಡಿ ತಯಾರಿಸಿದ್ದು ಭಾರತ. ಕ್ರಿ.ಶ. 920 ರ ಕಾಲದ ಕನ್ನಡ ಕೃತಿಯಲ್ಲಿ ಉಲ್ಲೇಖಿಸಲಾದ 'ಇಡ್ಡಲಿಗೆ' ಎಂಬ ಖಾದ್ಯದಿಂದ ಈ ಹೆಸರು ಬಂದಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿ.ಶ. 1130 ರ ಸಂಸ್ಕೃತ ಮಾನಸೋಲ್ಲಾಸ ಕೃತಿಯಲ್ಲಿ 'ಇದ್ದರಿಕಾ' ಎಂಬ ತಿಂಡಿಯ ಉಲ್ಲೇಖವಿದೆ. ಇದು ಉದ್ದಿನ ಬೇಳೆ ಹಿಟ್ಟಿನಿಂದ ಮಾಡಿದ ತಿಂಡಿಯೆಂದು ಹೇಳಲಾಗಿದೆ. 17 ನೇ ಶತಮಾನದಲ್ಲಿ ತಮಿಳಿಗರು 'ಇಟಾಲಿ' ಎಂಬ ತಿಂಡಿಯನ್ನು ಉಲ್ಲೇಖಿಸಿದ್ದಾರೆ. ಇದನ್ನು ಅಕ್ಕಿಯ ತುರಿ, ಉದ್ದಿನ ಬೇಳೆ ಬಳಸಿ ಮಾಡಲಾಗಿದೆ.
"ತಮಿಳು ಜನರು ಇದನ್ನು ಮೊದಲು 17 ನೇ ಶತಮಾನದಲ್ಲಿ 'ಇಟಾಲಿ' ಎಂದು ಉಲ್ಲೇಖಿಸಿದ್ದಾರೆ. ಈ ಎಲ್ಲಾ ಉಲ್ಲೇಖಗಳು ಇಡ್ಲಿಯು ಮೊದಲಿನಿಂದಲೂ ಅಕ್ಕಿಯ ತುರಿ, ಉದ್ದಿನ ಬೇಳೆ, ಉದ್ದನೆಯ ಹುದುಗುವಿಕೆ ಮತ್ತು ಉಗಿಯುವಿಕೆಯ ಬಳಕೆಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸುತ್ತದೆ" ಎಂದು ವರದಿ ಹೇಳಿದೆ.












Click it and Unblock the Notifications