White Hair: ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಲು ಬೆಟ್ಟದ ನೆಲ್ಲಿಕಾಯಿ ಬೆಸ್ಟ್
ಈಗಿನ ಜನರಲ್ಲಿನ ಸಾಮಾನ್ಯ ಸಮಸ್ಯೆ ಕೂದುಲು ಬಿಳಿ ಆಗುವುದು. ಇದಕ್ಕೆ ಏನೆಲ್ಲಾ ಪ್ರಯತ್ನಗಳನ್ನು ಪಟ್ಟಿರುತ್ತಾರೆ. ಅವರಿವರ ಬಳಿ ಕೇಳೆ ಹಲವು ಕ್ರೀಮ್‌ಗಳನ್ನು ಹಚ್ಚಿಕೊಂಡಿರುತ್ತಾರೆ. ಆದರೂ ಸಹ ಈ ಕೂದಲುಗಳು ಕಪ್ಪು ಆಗುತ್ತಿಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿರುತ್ತದೆ.
ಕೂದುಲು ಬಿಳಿ ಆಗುವುದು ಪುರುಷರು ಹಾಗೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಆಗಿದೆ. ತಮ್ಮ ಅಂದವನ್ನು ಈ ಕೂದಲು ಹಾಳು ಮಾಡುತ್ತದೆ ಎಂದು ಯುವ ಜನತೆಯ ತಲೆಯಲ್ಲಿ ಇದೆ. ಹೀಗಾಗಿ ತಮ್ಮ ಕೇಶರಾಶಿಯನ್ನು ಚೆನ್ನಾಗಿಟ್ಟುಕೊಳ್ಳಲು ನಾನಾ ಕಸರತ್ತುನ್ನು ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲಿರುವ ಮನೆಯ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ ವ್ಯಾತ್ಯಾಸ ಕಾಣಬಹುದು.

ಬೆಟ್ಟದ ನೆಲ್ಲಿಕಾಯಿ ಉಪಯೋಗ ಏನು?
ಬೆಟ್ಟದ ನೆಲ್ಲಿಕಾಯಿ ಕೂದಲಿಗೆ ಪರಿಣಾಮಕಾರಿ ಮೂಲಿಕೆಯಾಗಿ ಕೆಲಸ ಮಾಡುತ್ತದೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ಕೂದಲು ಉದುರುವುದು ಮತ್ತು ಇತರ ಹಲವು ಸಮಸ್ಯೆಗಳ ನಿವಾರಣೆಗೆ ನೆಲ್ಲಿಕಾಯಿ ಪ್ರಯೋಜನಕಾರಿಯಾಗಿದೆ. ಬೆಟ್ಟದ ನೆಲ್ಲಿಕಾಯಿ ಕೂದಲಿನ ಉತ್ಪನ್ನಗಳಲ್ಲಿ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಹಲವರು ತಲೆಯ ಕೂದಲಿಗೆ ಬೆಟ್ಟದ ನೆಲ್ಲಿಕಾಯಿ ಶಾಂಪು ಹಾಗೂ ಎಣ್ಣೆಯನ್ನು ಬಳಸುತ್ತಾರೆ.
ಈ ರೀತಿ ಮಾಡಿ ವ್ಯತ್ಯಾಸ ನೋಡಿ?
ಮಾರುಕಟ್ಟೆಯಲ್ಲಿ ತರುವ ತರಹೇವಾರಿ ಶಾಂಪು ಹಾಗೂ ಕ್ರೀಮ್‌ಗಳಿಗಿಂತ ಮನೆಯಲ್ಲಿಯೇ ಈ ಮದ್ದನ್ನು ಬಳಸಿ. ಇದರಿಂದ ಉತ್ತಮವಾಗಿ ಕಾಣಲು ಸಾಹಯಕವಾಗಬಹುದು. ಕಾಡು ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ನೆಲ್ಲಿಕಾಯಿ ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ನೆತ್ತಿಯ ಮೇಲೆ ಸಂಗ್ರಹವಾಗಿರುವ ಕೊಳೆಯನ್ನು ಸಹ ತೆಗೆಯಲು ಸಹಕಾರಿ. ಇದನ್ನು ಬಳಸುವುದರಿಂದ ಡ್ಯಾಂಡ್ರಫ್ ಸಮಸ್ಯೆಯಿಂದಲೂ ನಿವಾರಣೆ ಪಡೆಯಬಹುದು.

ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮ್ಯಾಜಿಕ್ ನೋಡಿ
ನಿಮ್ಮ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ನೀವು ಕೂದಲುಗಳಿಗೆ ಹೇರ್ ಮಾಸ್ಕ್ ತಯಾರಿಸಬಹುದು. ಬೆಟ್ಟದ ನೆಲ್ಲಿಕಾಯಿಯ ಪುಡಿ ಹಾಗೂ ಮೊಸರು ಕೂದಲಿಗೆ ಸಹಾಯಕ. 2 ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿಗೆ ಸ್ವಲ್ಪ ಬಿಸಿ ನೀರನ್ನು ಬೆರಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಒಂದು ಚಮಚ ಜೇನುತುಪ್ಪವನ್ನು ಹಾಗೂ 2 ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಅರ್ಧಗಂಟೆ ಬಿಟ್ಟು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ತೊಳೆಯಿರಿ. ಬೆಕಿದ್ದರೆ ಸೌಮ್ಯವಾದ ಶಾಂಪು ಬಳಸಿ.
ಕೂದಲು ಕಪ್ಪಾಗಲು ಬೆಟ್ಟದ ನೆಲ್ಲಿಕಾಯಿ ಜೊತೆಗೆ ನಿಂಬೆಹಣ್ಣು ಬಳಸಿ. ಈ ಎರಡು ವಸ್ತುಗಳನ್ನು ಮಿಶ್ರಣ ಮಾಡಿ ಹಚ್ಚಿಕೊಂಡರೆ ಒಳ್ಳೆಯದು. ಇದಕ್ಕಾಗಿ ಬೆಟ್ಟದ ನೆಲ್ಲಿಕಾಯಿ ಪುಡಿಯಲ್ಲಿ ಸ್ವಲ್ಪ ನೀರು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ನಂತರ ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದರೊಂದಿಗೆ, ಕ್ರಮೇಣ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಆರಂಭಿಸುತ್ತದೆ.
ಬೆಟ್ಟದ ನೆಲ್ಲಿಕಾಯಿಯನ್ನು ಹೇರ್ ಟಾನಿಕ್ ರೀತಿಯೂ ಬಳಸಬಹುದು. ಇದಕ್ಕಾಗಿ ಬೆಟ್ಟದ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಅದರಲ್ಲಿ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಮಿಶ್ರಣ ಮಾಡಿ. ಎರಡೂ ವಸ್ತುಗಳನ್ನು ಮಿಶ್ರಣ ಮಾಡಿ ಮತ್ತು ತೆಳುವಾದ ಪೇಸ್ಟ್ ಮಾಡಿಕೊಂಡು, ಕೂದಲಿಗೆ ಸುಮಾರು 10-15 ನಿಮಿಷಗಳ ಕಾಲ ಹಚ್ಚಿ. ಮತ್ತು ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಹೀಗೆ ಕೂದಲಿಗೆ ಬಳಸುವುದರಿಂದ, ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.












Click it and Unblock the Notifications