Ginger Benefits: ಪ್ರತಿನಿತ್ಯ ಶುಂಠಿ ಸೇವನೆಯಿಂದ ದೇಹಕ್ಕೆ ಏನೆಲ್ಲ ಪ್ರಯೋಜನಗಳಿವೆ, ಇಲ್ಲಿದೆ ಮಾಹಿತಿ, ಪಟ್ಟಿ
ಬೆಂಗಳೂರು, ಡಿಸೆಂಬರ್ 19: ಆಧುನಿಕ ಜೀವನ ಶೈಲಿ ಒಗ್ಗಿಕೊಂಡು ಒತ್ತಡ ಜೀವನ ಕಳೆಯುತ್ತಿರುವ ಮನುಷ್ಯ ಆರೋಗ್ಯದಕಡೆ ಕಾಳಜಿ ವಹಿಸುತ್ತಲೇ ಇರುತ್ತಾನೆ. ಅದಕ್ಕಾಗಿ ವ್ಯಾಯಾಮ, ತರಕಾರಿ, ಹಣ್ಣುಗಳಂತಹ ಉತ್ತಮ ಆಹಾರ ಸೇವಿಸಲು ಬಯಸುತ್ತಾರೆ. ಇವು ವ್ಯಕ್ತಿಯ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತವೆ. ಅದೇ ರೀತಿ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ 'ಶುಂಠಿ' (Ginjer) ಸಹ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಶುಂಠಿ ಆರೋಗ್ಯಕರ ಪದಾರ್ಥಗಳಲ್ಲಿ ಒಂದು ಎಂಬುದು ಅನೇಕರ ಗಮನಕ್ಕೆ ಬಂದೇ ಇಲ್ಲ. ಇದು ಕೆಲವು ಆಹಾರ ಪದಾರ್ಥಗಳಿಗೆ ಬಳಸುತ್ತಾರೆ. ಇಲ್ಲವೇ ಒಣಗಿಸಿಟ್ಟು ಬಳಸುತ್ತಾರೆ ಎಂಬುದಷ್ಟೇ ಗೊತ್ತಿದೆ. ಆದರೆ ಇದನ್ನು ದಿನನಿತ್ಯ ತಿನ್ನವುದರಿಂದ ಏನೇನು ಪ್ರಯೋಜನ ಸಿಗಲಿದೆ?, ಅಷ್ಟಕ್ಕೂ ಇದರಲ್ಲಿ ಆರೋಗ್ಯಯುತ ಅಂಶಗಳು ಏನೇನಿವೆ?, ಒಬ್ಬ ವ್ಯಕ್ತಿ ಒಂದು ತಿಂಗಳು ನಿರಂತರವಾಗಿ 'ಶುಂಠಿ' ತಿಂದರೆ ಆತನ ದೇಹದಲ್ಲಿ ಏನಾಗುತ್ತವೆ? ಎಂಬೆಲ್ಲ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಹಣ್ಣುಗಳು ಮತ್ತು ತರಕಾರಿಗಳು ನಮಗೆ ನಿಜವಾಗಿಯೂ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಉತ್ತಮ ಆಹಾರದ ಪ್ರಯೋಜನೆ ಬಗ್ಗೆ ನಮಗೆ ಗೊತ್ತಿದೆ. ಆದರೆ ಕೆಲವು ಮಸಾಲೆಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ?. ಉದಾಹರಣೆಗೆ ಶುಂಠಿ ತೆಗೆದುಕೊಳ್ಳೋಣ, ನೀವು ಪ್ರತಿದಿನ ಶುಂಠಿಯನ್ನು ತಿನ್ನುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ.
'ಶುಂಠಿ'ಯಲ್ಲಿನ ಗುಣಗಳು ಇವು
ಹೆಚ್ಚು ರುಚಿ ಹೊಂದಿರುವ ಮಸಾಲೆ ಪದಾರ್ಥವಾಗಿ ಶುಂಠಿ ಗುರುತಿಸಿ ಕೊಂಡಿದೆ. ಇದು ಹೆಚ್ಚು ಟೇಸ್ಟಿ ಮಾತ್ರವಲ್ಲ, ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದೆ. ಶುಂಠಿಯು ಜಿಂಜರಾಲ್, ಶೋಗೋಲ್, ಜಿಂಗೈಬೆರೆನ್ ಮತ್ತು ಸಂಪೂರ್ಣ ಶ್ರೇಣಿಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.
ಹೀಗಾಗಿಯೇ ಶುಂಠಿಯು ಸುದೀರ್ಘವಾದ ಔಷಧೀಯ ಗುಣಗಳು ವ್ಯಕ್ತಿಯ ದೇಹಕ್ಕೆ ಆರೋಗ್ಯವನ್ನು ಒದಗಿಸುತ್ತದೆ. ಶತಮಾನಗಳ ಹಿಂದೆ ಶುಂಠಿಯನ್ನು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಈಗ ನೀವೆನಾದರೂ ನಿಯಮಿತವಾಗಿ ಶುಂಠಿ ತಿನ್ನುತ್ತಿದ್ದರೆ ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ..
ವಾಕರಿಕೆ, ಕೀಲು ನೋವು ಮಾಯ
ಶುಂಠಿಯಲ್ಲಿನ ಜಿಂಜರಾಲ್ ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದನ್ನು ನಿಯಮಿತವಾಗಿ ತಿನ್ನುವುದರಿಂದ ಊದಿಕೊಂಡ ಕೀಲುಗಳ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯು ಶೊಗೋಲ್ ಅನ್ನು ಸಹ ಹೊಂದಿದೆ, ಇದು ನೋವು ನಿವಾರಣೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಇದು ಕ್ಯಾನ್ಸರ್ ಮತ್ತು ಹೃದ್ರೋಗದ ವಿರುದ್ಧವೂ ಹೋರಾಡಲು ಸಹಾಯ ಮಾಡುತ್ತದೆ.

ಶುಂಠಿಯಲ್ಲಿರುವ ಜಿಂಜಿಬೆರೆನ್ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಶುಂಠಿಯು ಮಧುಮೇಹ ವಿರುದ್ಧ ಹೋರಾಡಬಲ್ಲ ಶಕ್ತಿ ಹೊಂದಿದೆ. ಅಲ್ಲದೇ ಮೆದುಳಿನ ಕಾರ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ಪ್ರತಿದಿನ ಶುಂಠಿ ತಿನ್ನುವುದು ಎಂದರೆ ಅದು ಹಣ್ಣಿನಂತೆ ತಿನ್ನುವ ಅಗತ್ಯವಿಲ್ಲ. ಬದಲಾಗಿ ಸುಮಾರು 1.5 ಸೆಂಟಿಮೀಟರ್ ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಅದನ್ನು ನಿಮ್ಮ ಚಹಾ, ಆಹಾರ ಪದಾರ್ಥಗಳ ಜೊತೆಗೆ ಮಿಶ್ರಣ ಮಾಡಿ ತಿನ್ನಬೇಕು. ಹೀಗೆ ನಿತ್ಯವು ತಿನ್ನುವವರ ಆರೊಗ್ಯ ಅತ್ಯುತ್ತಮವಾಗಿರುತ್ತದೆ ಎಂದು ''ಟಿಪ್ಸ್ ಆಂಡ್ ಟ್ರಿಕ್ಸ್'' ವರದಿ ಮಾಡಿದೆ.
'ಶುಂಠಿ' ಪ್ರಯೋಜನಗಳ ಪಟ್ಟಿ
* ಶುಂಠಿ ಸೇವೆನೆಯಿಂದ ದೇಹದಲ್ಲಿ ಉರಿಯೂತವು ತ್ವರಿತಗತಿಯಲ್ಲಿ ಕಡಿಮೆಯಾಗುತ್ತದೆ.
* ನಿಮಗ ಆಗಾಗ್ಗೆ ಇಲ್ಲವೇ ಬೆಳಗ್ಗೆ ವಾಕರಿಕೆ ಬರುತ್ತದೆಯೇ? ಇದನ್ನು ತಿನ್ನುವುದರಿಂದ ವಾಕರಿಕೆ ಕಡಿಮೆ ಆಗುತ್ತದೆ.
ವಿಶೇಷವಾಗಿ ಗರ್ಭಿಣಿಯರು ಮತ್ತು ಕೀಮೋಥೆರಪಿಗೆ ಒಳಗಾಗುವ ಜನರು ಇದರಿಂದ ಪ್ರಯೋಜನ ಪಡೆಯಬಹುದಾಗಿದೆ.
* ಸ್ನಾಯು ನೋವು ಅಥವಾ ಕೈಕಾಲುಗಳಲ್ಲಿ ನೋವು ಇದ್ದರೆ ಶುಂಠಿ ತಿನ್ನುವುದು ಇದರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿದಿನ ಶುಂಠಿಯನ್ನು ಸೇವಿಸುವುದರಿಂದ ನೋವು ಕ್ರಮೇಣ ಕಡಿಮೆಯಾಗುತ್ತದೆ.
* ಶುಂಠಿಯು ಕರುಳಿ ಕೆಲಸಕ್ಕೆ ನೆರವಾಗುತ್ತದೆ. ನಿಮ್ಮ ಮಲಬದ್ಧತೆ ಕಡಿಮೆ ಮಾಡುತ್ತದೆ.
* ಮುಟ್ಟಿನ ನೋವಿದ್ದರೆ ಅದು ಸಹ ಕಡಿಮೆ ಮಾಡುವ ತಾಕತ್ತು ಈ ಶುಂಠಿಗೆ ಇದೆ. ತಿಂಗಳ ಈ ಸಮಯದಲ್ಲಿ ನೀವು ನಿರಂತರವಾಗಿ ನೋವು ಅನುಭವಿಸುತ್ತಿದ್ದೀರಾ? ನಂತರ ಪ್ರತಿದಿನ ಶುಂಠಿಯನ್ನು ಯಾವುದಾದರೂ ಒಂದು ರೂಪದಲ್ಲಿ ತಿಂದರೆ ಮುಟ್ಟಿನ ನೋವು, ತೀವ್ರ ಕಿಬ್ಬೊಟ್ಟೆ ನೋವನ್ನು ನಿವಾರಿಸುತ್ತದೆ.
* ನಿರಂತರವಾಗಿ ಶುಂಠಿ ಸೇವನೆಯು ನಿಮ್ಮ ದೇಹದಲ್ಲಿನ 'ಕೊಲೆಸ್ಟ್ರಾಲ್'/ಕೊಬ್ಬಿನಾಂಶವನ್ನು ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಶುಂಠಿಯಲ್ಲಿರುವ ಪದಾರ್ಥಗಳಿಂದ ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ ಪ್ರಮಾಣ ಕಡಿಮೆಯಾಗುತ್ತದೆ ಎಂದು ವರದಿಗಳು ಹೇಳುತ್ತವೆ.
* ಶುಂಠಿಯಲ್ಲಿನ ಗುಣಗಳು ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ಇದು ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಈಗಾಗಲೇ ಶೀತ ಅಥವಾ ಕೊರೊನಾ ವೈರಸ್‌ನಂತ ಸೋಂಕಿನಿಂದ ಬಳಲಿದ್ದರೆ, ನೀವು ಶುಂಠಿ ಸೇವಿಸಲು ಶುರು ಮಾಡಿದರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಕೊರೊನಾ ಸಮಯದಲ್ಲಿ ನೀಡುತ್ತಿದ್ದ ಕಷಾಯದಲ್ಲಿ ಹೆಚ್ಚಿನ ಪ್ರಯಾಣದ ಶುಂಠಿಯನ್ನು ಬಳಸಿರುತ್ತಿದ್ದರು.












Click it and Unblock the Notifications